Showing posts with label ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದುನೆಂಪು ಬಲ್ಲವರು ಪೇಳಿ neleyadikeshava ಮುಂಡಿಗೆ mundige. Show all posts
Showing posts with label ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದುನೆಂಪು ಬಲ್ಲವರು ಪೇಳಿ neleyadikeshava ಮುಂಡಿಗೆ mundige. Show all posts

Wednesday 1 September 2021

ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದುನೆಂಪು ಬಲ್ಲವರು ಪೇಳಿ ankita neleyadikeshava ಮುಂಡಿಗೆ mundige

 ..

ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದುನೆಂಪು ಬಲ್ಲವರು ಪೇಳಿ ಪ


ಹಂಪೆಯ ವಿರೂಪಾಕ್ಷ ಲಿಂಗನಲ್ಲಿಝಂಪೆಯನಾಡುತಿಹುದು ಅ


ಆರು ತಲೆ ಹದಿನಾರು ಕಣ್ಣುಗಳುಂಟುಮೂರು ಮೂರು ನಾಲಗೆಬೇರೆ ಹನ್ನೆರಡು ಕಣ್ಣು ಕಿವಿಗಳುಂಟುಸೇರಿತು ತೆಂಕಲಾಗೆ 1


ಬಲೆಯ ಬೀಸಿದರು ಸಿಕ್ಕದಾ ಮೃಗಜಲದೊಳು ತಾ ನಿಲ್ಲದುನೆಲನ ಮೇಲಿರುವುದು ನಿಂತರೆ ಸಾವುದು ಕುಲದೊಳಗಾಡುತಿಹುದು 2


ಸಕಲ ಕಲೆಯು ಬಲ್ಲ ಸೀತಳ ಮಲ್ಲಿಗೆಬೇರೆ ಬೇರೆನಬಹುದುಚೆನ್ನ ಕೇಶವನಲ್ಲಿ ಕೃಪೆಯುಂಟಾದರೆಅಲ್ಲುಂಟು ಇಲ್ಲಿಲ್ಲವೆ 3

***

ಶ್ರೀ  ಕನಕದಾಸಾರ್ಯರ ಅದ್ಭುತ  ಮುಂಡಿಗೆ


ಕೆಂಪುಮೂಗಿನ ಪಕ್ಷಿ ತಂಪೆನೊಳಿರುವುದು

ನೆಂಪು ಬಲ್ಲವರು ಪೇಳಿ


ಹಂಪೆಯ ವಿರೂಪಾಕ್ಷಲಿಂಗನಲ್ಲಿ

ಝಂಪಿಯನಾಡುತಿದೆ


ಆರು ತಲೆಯು ಹದಿನಾರು ಕಣ್ಣುಗಳುಂಟು

ಮೂರು ಮೂರು ನಾಲಿಗೆ 

ಬೇರೆ ಹನ್ನೆರಡು  ಕಣ್ಣು  ಕಿವಿಗಳುಂಟು

ಸೇರಿತು ತೆಂಕಲಾಗೆ


ಬಲೆಯ ಬೀಸಿದರು ಸಿಕ್ಕದು ಆ ಮೃಗ

ಜಲದೊಳು ತಾ ನಿಲ್ಲದು

ನೆಲನ ಮೇಲಿರುವದು ನಿಂತರ ಸಾವುದು

ಕುಲದೊಳಗಾಡುತಿದೆ


ಸಕಲ ಕಲೆಯು ಬಲ್ಲ ಸೀತಳ ಮಲ್ಲಿಗೆ

ಬೇರೆ ಬೇರೆನಬಹುದು

ಚೆನ್ನಕೇಶವನಲ್ಲಿ ಕೃಪೆಯುಂಟಾದರೆ

ಅಲ್ಲುಂಟು ಇಲ್ಲಿಲ್ಲವೆ.... 

***


ಶ್ರೀ ಹರಿವಾಯುಗುರುಗಳ ಆಶೀರ್ವಾದದಿಂದ ಅರ್ಥಾನುಸಂಧಾನದ ಅಲ್ಪ ಪ್ರಯತ್ನ


👇🏽👇🏽👇🏽👇🏽👇🏽👇🏽


    ಶ್ರೀ ಕನಕದಾಸಾರ್ಯರ ಈ ಅದ್ಭುತ ಮುಂಡಿಗೆ... ನಮ್ಮ  ಮನಸೆನ್ನುವ ಚಂಚಲವಾದ ಹಕ್ಕಿಯ ಮನಸ್ಥಿತಿಯನ್ನು ಹಂಪೆಯ ವಿರೂಪಾಕ್ಷ ದೇವರು ಅಂದರೇ ಮನೋನಿಯಾಮಕರ ಸುತ್ತಲು ತಿರುಗುವದೆನ್ನುವ ಉಲ್ಲೇಖ ಮಾಡುತಾ ಭಗವಂತನಲಿ ಸ್ಥಿರಚಿತ್ತರಾಗುವ ಬಗೆಯನ್ನು ವಿವರಿಸುವದಾಗಿದೆ...


 ಕೆಂಪು ಮೂಗಿನ ಹಕ್ಕಿ ಅಂದಿದ್ದಾರೆ... ಬಣ್ಣಗಳಲ್ಲಿ ಬಿಳುಪು ಬಣ್ಣ  ಸತ್ವಗುಣ ದ್ಯೋತಕವಾದರೇ, ಕೆಂಪು ಗುಣ ರಜೋಗುಣದ ಚಿಹ್ನವಾಗಿದೆ ಹಾಗೂ ಕಪ್ಪು ಗುಣ ತಮೋಗುಣಕ್ಕೆ ಚಿಹ್ನವಾಗಿದೆ..


ಹೀಗಾಗಿ  ಇಲ್ಲಿನ ರಜೋಗುಣದ ಹಕ್ಕಿ  ಹಂಪೆಯ ವಿರೂಪಾಕ್ಷ  ಲಿಂಗದ ಸುತ್ತಲೂ ತಂಪಿನೊಳು ಅಂದರೇ ಉಲ್ಲಾಸದಿಂದ ಝೀಂಕರಿಸುತ್ತಾ ತಿರುಗುತ್ತಿದೆ ಅಂತಿದ್ದಾರೆ... 


 ಸ್ವತಂತ್ರಿ ಲೋಕಸ್ಥಿತಯೇ ಸ್ವಯಮಾಯಯಾಬಿಭರ್ವಿ ಶುಕ್ಲಂ ಖಲು ವರ್ಣಮಾತ್ಮನಃ /

ಸರ್ಗಾಯ ರಕ್ತಂ ರಜಸೋಪ ಬೃಂಹಿತಂ ಕೃಷ್ಣಂತುವರ್ಣಂ ತಾಮಸಾಜನಾಜತ್ಯಯೇ//

    ಎಂದು ಶ್ರೀಮದ್ಭಾಗವತದ ದಶಮಸ್ಕಂಧದಲ್ಲಿ ತಿಳಿಸಿದಂತೆ ಪರಮಾತ್ಮ ಜಗತ್ತನ್ನು ರಕ್ಷಣೆಮಾಡುವದಗೋಸ್ಕರ ಸತ್ವಗುಣ ಸೂಚಕವಾದ ಶುಕ್ಲವರ್ಣವನ್ನು , ಸೃಷ್ಟಿಗೋಸುಗ ರಜೋಗುಣದಿಂದ ಉಪಬೃಂಹಿತವಾದ ರಕ್ತವರ್ಣವನ್ನು , ಲಯಗೋಸ್ಕರ ತಮೋಗುಣ ಸೂಚಕವಾದ ಕೃಷ್ಣವರ್ಣವನ್ನು ಸ್ವೀಕರಿಸುವರು , ಇದರಿಂದ ಸತ್ವಗುಣವು  ಬಿಳಿ ಬಣ್ಣ , ರಜೋಗುಣ ಕೆಂಪು ಬಣ್ಣ , ತಾಮಸಗುಣ ಕಪ್ಪುಬಣ್ಣ ಸೂಚಕವೆಂದು ಸ್ಪಷ್ಟವಾಗುತ್ತಿದೆ..

   ಇದನ್ನೇ ಶ್ರೀಜಗನ್ನಾಥದಾಸರು ಶ್ರೀಮದ್ಹರಿಕಥಾಮೃತಸಾರದ ವ್ಯಾಪ್ತಿಸಂಧಿಯಲ್ಲಿ -

   ಪವಿಹರಿನ್ಮಣಿ ವಿದ್ರುಮದಸ-

ಛ್ಛವಿಗಳಂದದಿ ರಾಜಿಸುತಮಾ-

ಧವನಿರಂತರದೇವ ಮಾನವ ದಾನವರೊಳಿದ್ದು /

ತ್ರಿವಿಧಗುಣ ಕರ್ಮ ಸ್ವಭಾವವ

ಪವನಮುಖ ದೇವಾಂತರಾತ್ಮಕ

ದಿವಸದಿವಸದಿ ವ್ಯಕ್ತಿಮಾಡುತಲವರೊಳಿದ್ದುಣಿಪಾ //

         ಎಂದು ತಿಳಿಸಿದ್ದಾರೆ . ಇದನ್ನೇ ಶ್ರೀಕನಕದಾಸಾರ್ಯರು ಇಲ್ಲಿ ಕೆಂಪುಮೂಗಿನ ಪಕ್ಷಿ ತಂಪೆನೊಳಿರುವದು ಎಂದಿದ್ದಾರೆ ತಂಪೆ ಅಂದರೆ ಈ ಸಂಸಾರದಲ್ಲಿ ಉಲ್ಲಾಸದಿಂದ ಇರುವದು ಎಂದು ಹೇಳಿದರು  .....


 ಹಂಪೆಯ ವಿರೂಪಾಕ್ಷ ಲಿಂಗನಲ್ಲಿ ಝಂಪೆಯಾಡುತಿದೆ ಹಂಪೆ ಅಂದರೆ ನಮ್ಮ ದೇಹವೇ ಒಂದು ಹಂಪೆ , ಒಂದು ಪಟ್ಟಣ.  ಈ ದೇಹವೆಂಬ ಹಂಪಯಲ್ಲಿ ಮನೋನಿಯಾಮಕರಾದ ರುದ್ರದೇವರೇ ಸರ್ವೋತ್ತಮ ಎಂಬ ಕಲ್ಪನೆಯಿಂದ ರುದ್ರದೇವರಿಗೂ ನಿಯಾಮಕನಾದ ಭಗವಂತನಲ್ಲಿ ಮನಸ್ಸಿಡದೇ ರುದ್ರದೇವರು *ಆಶುತೋಷ*ರಾದ್ದರಿಂದ ಐಹಿಕ ಫಲಾಪೇಕ್ಷೆಗಳನ್ನು ಬೇಗನೇ ಈಡೇರಿಸುವವರಾದ್ದರಿಂದ ಅವರೇ ಸರ್ವೋತ್ತಮ ಎಂಬ ಭಾವನೆಯಿಂದ , ಐಹಿಕ ಫಲಗಳನ್ನೇ ಅಪೇಕ್ಷಿಸುತ್ತಾ ರುದ್ರದೇವರ ಆರಾಧನೆಯಲ್ಲೇ ಈ ರಜೋಗುಣದ ಮಾನವರು ಆಸಕ್ತರಾಗಿಬಿಟ್ಟಿದ್ದಾರೆ . ಆದರೆ 

ಮನವಿಷಯದೊಳಗಿರಿಸಿ ವಿಷಯವ

ಮನದೊಳಗೆ ನೆಲೆಗೊಳಿಸಿ .....*ಎಂದು ಹರಿಕಥಾಮೃತಸಾರದಲ್ಲಿ ಹೇಳಿದಂತೆ ಆ ಮನೋನಿಯಾಮಕರಾದ ರುದ್ರದೇವರಿಗೂ ಸಹಾ ಪರಮಾತ್ಮನು ನಿಯಾಮಕನಾಗಿದ್ದಾನೆ , ರುದ್ರಾಂತರ್ಗತನಾದ ಭಾರತೀರಮಣಮುಖ್ಯಪ್ರಾಣಾಂತರ್ಗತನಾದ ಆ ಪರಮಾತ್ಮನ ಪಾದಾರಾಧನೆಯಲ್ಲಿ ಝಂಪೆಯನಾಡದೇ ಕೇವಲ ಐಹಿಕ ಫಲಾಪೇಕ್ಷೆಗಾಗಿ ಆಶುತೋಷರಾದ ರುದ್ರದೇವರಲ್ಲಿ ಆಸಕ್ತವಾಗಿರುವ ಈ ರಜೋಗುಣದ ಮನಸ್ಸನ್ನು ಕಂಡು ದಾಸರು ಇಲ್ಲಿ *ಹಂಪೆಯ ವಿರೂಪಾಕ್ಷಲಿಂಗನಲ್ಲಿ ಝಂಪೆಯನಾಡುತಿದೆ ಎಂದು ಹೇಳಿದರು..... ಅಂದರೇ ಇಲ್ಲಿ ಸರ್ವೋತ್ತಮನಾದ ಹರಿಯನ್ನು ಸೇರದೇ ತಿರುಗಾಡುತಿದೆ ಮನಸೆಂಬ ಹಕ್ಕಿ  ಎಂದರ್ಥ


 ಆರು ತಲೆಯ 

ಈ ಹಕ್ಕಿಗೆ  ಆರು ತಲೆ ಅಂದರೇ ಪಂಚೇಂದ್ರಿಯಗಳು ಅಂದರೇ ಆರುತಲೆ ಎನ್ನುವ 

ಷಡ್ವರ್ಗ(ಷಡ್ವೈರಿ) ನಮ್ಮ ಮನಸ್ಸಿನಮೇಲೆ ಆಳ್ವಿಕೆ ನಡೆಸುತ್ತವೆ ,  ಅಂದರೆ ತಲೆ ಸ್ಥಾನಕ್ಕೆ ಇದ್ದವೆ... ಅಂದರೇ ನಮ್ಮ ಮನಸ್ಸು ಅವುಗಳು ಹೇಳಿದಹಾಗೇ ಕೇಳುತ್ತದೆ ಅಂತ ಅರ್ಥ ....

  ಮನಸ್ಸಿಗೆ ಆರು ತಲೆಗಳಿವೆ... ಅಂತಾರೆ...


ಹದಿನಾರು ಕಣ್ಣುಗಳು


ಅಂದರೇ 

ಪಂಚ ಜ್ಞಾನೇಂದ್ರಿಯಗಳು

ಶ್ರೋತ್ರ, ತ್ವಕ್, ಚಕ್ಷುಸ್ಸು, ಜಿಹ್ವೆ, ನಾಸಿಕ.


ಪಂಚ ಕರ್ಮೇಂದ್ರಿಯಗಳು  ವಾಕ್, ವಾಣಿ, ಪಾದ, ಪಾಯು, ಉಪಸ್ಥಾ .... ಹಾಗೂ ಆತ್ಮ... ಒಟ್ಟು  ಹದಿನಾರು ಕಣ್ಣುಗಳು  ಇದ್ದವೆ....


ಮೂರು ಮೂರು ನಾಲಿಗೆ 


    ಅಂದರೇ ಸಾತ್ವಿಕ, ರಾಜಸ, ತಾಮಸ ಗುಣಗಳ  3 × 3=9 ವಿಧಗಳ ವಾಗ್ವ್ಯಾಪಾರ ಉಳ್ಳದ್ದು ಆಗಿದೆ ಈ ಮನಸ್ಸೆನ್ನುವ ಹಕ್ಕಿ...


  ಹನ್ನೆರಡು ಕಣ್ಣು ಕಿವಿ ಗಳುಂಟು ಸೇರಿತು ತೆಂಕಲಾಗಿ...


ಈ ರೀತಿಯಾಗಿ ವಿಹಾರ ಮಾಡುತ್ತಾ ಝೀಂಕರಿಸುವ ಈ ಹಕ್ಕಿಗೆ ಈ ರೀತಿಯ ಆರು ತಲೆ, ಹದಿನಾರು ಕಣ್ಣು  ಮೂರು ಮೂರು ನಾಲಗೆ ಇದ್ದರೂ ಸಹಾ...


ಹಂಪೆಯ  ವಿರೂಪಾಕ್ಷ ಲಿಂಗದ ಸುತ್ತಲೂ ತಿರುಗಾಡುವ ಅಂದರೇ ಪ್ರದಕ್ಷಿಣೆ  ಹಾಕುವುದರಿಂದ ಆ ಮನೋನಿಯಾಮಕರಾದ ರುದ್ರದೇವರ ಆಶೀರ್ವಾದ  ಬಲದಿಂದ ಹನ್ನೆರಡು ಕಣ್ಣು ಕಿವಿಗಳು ಅಂದರೇ... 4 ವೇದಗಳ, 6 ಶಾಸ್ತ್ರಗಳ, ಇತಿಹಾಸ, ಪುರಾಣಗಳ ಮುಖಾಂತರ  ಸೇರಿತು ತೆಂಕಲಾಗೆ ಅಂದರೇ ಪರಮಾತ್ಮನ ಪಾದಗಳನ್ನು  ಸೇರುವುದು.. ಅಂತಾರೆ.....


ಏಕಾಯನೋಟಿಸೌ ದ್ವಿಫಲಸ್ತ್ರೀಮೂಲಶ್ಚತೂರಸಃ ಪಂಚಶಿಫಃ ಷಡಾತ್ಮಾ|

ಸಪ್ತತ್ವಗಷ್ಟವಿಟಪೋ ನವಾಕ್ಷೋ ದಶಛದೀ ದ್ವಿಖಗೋಹ್ಯಾದಿವೃಕ್ಷಃ ||

       ಎನ್ನುವ  ಭಾಗವತದ ದಶಮಸ್ಕಂಧದ ಗರ್ಭಸ್ತುತಿಯ ವಿವರಣೆಯನ್ನೇ ದಾಸರಾಯರು ಇಲ್ಲಿ ತಿಳಿಸಿದ್ದಾರೆ ....


 ಈ ತರಹದ ಗುಣಗಳುಳ್ಳ ಅಹಂಕಾರ ತುಂಬಿದ ಮೃಗದಂತೆ ಈ ಹಕ್ಕಿ  ವಲೆಯನ್ನು ಹಾಕಿದರೇ ಅಂದರೇ ಗಟ್ಟಿಯಾಗಿ  ಹಿಡಿದು ಹಾಕಲು ಸಿಗದು... ಜಲದೊಳು ತಾ ನಿಲ್ಲದು ಅಂದರೇ ನದಿಗಳಲ್ಲಿ, ತೀರ್ಥಗಳಲ್ಲಿ ಮುಳುಗಿಹಾಕಿ ಪೂಜಾದಿಗಳು ಮಾಡಿದರೇ ನಿಲ್ಲದು... 


ನೆಲದ ಮೇಲಿರುವುದು ಅಂದರೇ ಸಾಧನಾ ಶರೀರದಲ್ಲಿ ಇರುವುದು ಅದೂ ಸಹಾ ನಿಂತರೇ ಸಾವುದು ಅಂದರೇ ಆ ಸಾಧನಾ ದೇಹದಲಿ ಸ್ಥಿರವಾಗಿ ನಿಲ್ಲಿಸಿ ಪುರಾಣೇತಿಹಾಸಗಳ, ವೇದಾಧ್ಯಯನ, ನವವಿಧ ಭಕುತಿಯ ಮುಖಾಂತರ  ಪರಮಾತ್ಮನಲಿ ನಿಲ್ಲಿಸಿದರೇ(ಮನಸ್ಸನು) ಮಾತ್ರ ಅಹಂಕಾರ ಸಾಯುವುದು ಅಂತಾರೆ... ಅದಕ್ಕಾಗಿ ಆ ಹಕ್ಕಿ  ಮನೋನಿಯಾಮಕರಾದ ರುದ್ರದೇವರ ಲಿಂಗ ಸುತ್ತಲೂ  ಪ್ರದಕ್ಷಿಣೆ  ಹಾಕಲೇಬೇಕು ಅಂತಾರೆ ದಾಸಾರ್ಯರು..


 ಕುಲದೊಳಾಡುತಿದೆ ಅಂದರೇ ದೇಹದೊಳಗೆ ಸೇರಿ ಸ್ಥಿರವಾಗಲಿದೆ ಅಂತಾರೆ...


 ಸಕಲ ಕಲೆಯು ಬಲ್ಲ ಸೀತಳ ಮಲ್ಲಿಗೆ ಈ ಕೊನೆಯ ಸಾಲಿನಲಿ


    ಅನೇಕ  ಜನ್ಮಗಳನ್ನು  ದಾಟಿ ಬಂದು ಸಂಸ್ಕಾರ ಪಡೆದಂತಹಾ ಈ ಮಲ್ಲಿಗೆ ಅಂದರೇ ಸಾತ್ವಿಕ ಗುಣವುಳ್ಳಂತಹಾ  ಈ ಹಕ್ಕಿ


ಇಷ್ಟೆಲ್ಲಾ ಸಾಧನೆಯಾದರೂ   , ವಾಯುದೇವರು ಇವನನ್ನು ಹಾಗೂ ಲಿಂಗದೇಹವನ್ನು ಬೇರೆ ಬೇರೆ ಮಾಡಿದಾಗ , ಅಂದರೆ ಲಿಂಗದೇಹ ಭಂಗವಾದನಂತರ ,             ಅಂದರೆ ಪರಮಾತ್ಮನ ಪ್ರಸನ್ನತೆಗೆ ಕಾರಣನಾದಾಗ ಅವನಿಗೆ ಇಲ್ಲಿ ಆಂದರೆ ವೈಕುಂಠದಲ್ಲಿ , ಸ್ಥಳ ಸಿಗುವದು , ನಂತರ ಇಲ್ಲಿ ಅಂದರೆ ಭೂಲೋಕದಲ್ಲಿ ಹುಟ್ಟು ಸಾವು ಎನ್ನುವದು ಇರುವದಿಲ್ಲ . 

  ಅಲ್ಲಿ ವೈಕುಂಠದಲ್ಲಿ ಇದ್ದರೂ ಸಹಾ ಪರಮಾತ್ಮ-  ಈಶ , ಜೀವಿಯು - ದಾಸ , ಹೊರತಾಗಿ ಒಂದೇ ಅಂತೂ ಆಗೋಲ್ಲ , ಸರ್ವಕಾಲದಲ್ಲೂ ಸರ್ವದೇಶಗಳಲ್ಲೂ ಸರ್ವ ಅವಸ್ಥೆಗಳಲ್ಲೂ ಪರಮಾತ್ಮನೇ ಸ್ವಾಮಿಯಾಗಿರುವನು. ಅಂತಹ ಸರ್ವ ಸ್ವಾಮಿಯಾದ ಚೆನ್ನಕೇಶವನ ಅಂದರೇ ಕಾಗಿನೆಲೆಯಾದಿಕೇಶವನ ಪ್ರಸನ್ನತೆಯೇ ನಮ್ಮ ಮುಖ್ಯಧ್ಯೇಯವಾಗಿರಬೇಕು , ಯಮೇವೈಷವೃಣುತೇ ತೇನಲಭ್ಯಸ್ತಸ್ಯೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್  ಎನ್ನುವ  ಉಕ್ತಿಯ ಅರ್ಥವನ್ನೇ ಹಾಗೂ ಕಿಮಲಭ್ಯಂ ಭಗವತೀ ಪ್ರಸನ್ನೇ ಶ್ರೀನಿಕೇತನೇ ಎನ್ನುವ  ಅದ್ಭುತ  ಸೂಕ್ಷ್ಮವಾದ ಮಹೋನ್ನತವಾದ ಮಾತನ್ನು  ಶ್ರೀಕನಕದಾಸಾರ್ಯರು ತಮ್ಮ ಈ ಕೊನೆಯ ನುಡಿಯಲ್ಲಿ ತಿಳಿಸಿದ್ದಾರೆ ...


ಇಂತಹಾ ಪರಮಾದ್ಭುತವಾದ ಶಾಸ್ತ್ರಬದ್ಧವಾದ, ಜೀವನಗತಿಯನ್ನು ಸರಿಪಡಿಸಿ ಪರಮಾತ್ಮನ ಪಾದಪದ್ಮಗಳಲ್ಲಿ ಸೇರಿಸುವ ನಮ್ಮ  ದಾಸದಾಸರುಗಳ ಪ್ರತಿಯೊಂದು  ಪದ ನಮಗೆ ಶಿರೋಧಾರ್ಯವಾದ ಆಶೀರ್ವಚನವಾಗಿದೆ... ಅಂತಹ  ಅದ್ಭುತ  ಪದಗಳು  ಹಾಡುವುದೇ ಅಲ್ಲದೇ  ಅರ್ಥವನ್ನು ಹೊಳೆಯುವಂತೆ ಆಗಲೀ. ದಾಸರ, ಗುರುಗಳ, ಪರಮಾತ್ಮನ ಅನುಗ್ರಹವಿಲ್ಲದೇ ಒಂದೂ ಅಕ್ಷರ ಅರ್ಥವಾಗುವುದೂ ಇಲ್ಲ.  ಹೀಗಾಗಿ ಶ್ರೇಷ್ಠ ದಾಸರ ಪದಗಳು ನಮ್ಮ ಯೋಗ್ಯತೆಗೆ ತಕ್ಕಂತಾದರೂ ಅರ್ಥವಾಗುವಂತಾಗಲೀ ಎಂದು ... ಮನೋನಿಯಾಮಕರಾದ ವಿರೂಪಾಕ್ಷರು ಅರ್ಥಾತ್ ರುದ್ರದೇವರ , ಮನಕಭಿಮಾನಿನಿಯಾದ ಪಾರ್ವತೀದೀವಿಯರ , ಇವರಿಬ್ಬರ  ಪ್ರೇಮ ಪುತ್ರರಾದ ವಿಘ್ನನಿವಾರಕರಾದ ಗಣಪತಿ ಯ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ವಿಶ್ವಂಭರನಾಮಕ  ಪರಮಾತ್ಮನಲ್ಲಿ ಅಭಿನ್ನ ಶ್ರೀ ಕೃಷ್ಣಪರಮಾತ್ಮನಲ್ಲಿ ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡುತ್ತಾ... 

ಜೈ ವಿಜಯರಾಯ

padma shirish

ನಾದನೀರಾಜನದಿಂ ದಾಸಸುರಭಿ 🙏🏽

***