ಚರಣಕಮಲವನು ನೆನೆವೆ ನಾ ನಿನ್ನ ಪ.
ಚರಣಕಮಲವನು ನೆನೆವೆ ನಾ
ದುರಿತರಾಶಿಗಳ ಸಂಹರಿಪನ ಅ.ಪ.
ಶ್ರುತಿಯನುದ್ಧರಿಸಿದುದಾರನ ಸಿಂಧು-
ಮಥನಕೊದಗಿದ ಗಂಭೀರನ
ಕ್ಷಿತಿಯನೆತ್ತಿದ ಬಲುಧೀರನ ಶಿಶು
ಸ್ತುತಿಸೆ ಕಂಬದಿ ಬಂದ ವೀರನ 1
ಇಂದ್ರನ ಧಾರೆಯ ನಿಲಿಸಿದನ್ನ ತನ್ನ
ತÀಂದೆಯ ಮಾತು ಸಲಿಸಿದನ್ನ
ಕಂದರದಶನ ಸೋಲಿಸಿದನ್ನ ವ್ರಜ-
ದಿಂದುಮುಖಿಯರ ಪಾಲಿಸಿದನ್ನ 2
ವಧುಗಳ ವ್ರತವ ಖಂಡಿಸಿದನ್ನ ದುಷ್ಟ
ರುದಿಸಲು ತುದಿಯ ತುಂಡಿಸಿದನ್ನ
ಇದಿರಾದ ಖಳರ ಖಂಡಿಸಿದನ್ನ ಹಯ
ವದನಪೆಸರ ಕೊಂಡುದಿಸಿದನ್ನ 3
***