Showing posts with label ತುಂಗಾತೀರದಿ ಕಂಗೊಳಿಸುವ ಮುನಿ ಪುಂಗವರಾಯರ ನಯನದಿ ನೋಡೆ shyamasundara. Show all posts
Showing posts with label ತುಂಗಾತೀರದಿ ಕಂಗೊಳಿಸುವ ಮುನಿ ಪುಂಗವರಾಯರ ನಯನದಿ ನೋಡೆ shyamasundara. Show all posts

Wednesday, 1 September 2021

ತುಂಗಾತೀರದಿ ಕಂಗೊಳಿಸುವ ಮುನಿ ಪುಂಗವರಾಯರ ನಯನದಿ ನೋಡೆ ankita shyamasundara

 ..

ರಾಗ - : ತಾಳ -


ತುಂಗಾತೀರದಿ ಕಂಗೊಳಿಸುವ ಮುನಿ 

ಪುಂಗವರಾಯರ ನಯನದಿ ನೋಡೆ ಮನದಿ ಕೊಂಡಾಡೆ ವರಗಳ ಬೇಡೆ ll ಪ ll


ಆದಿಯುಗದಿ ಪ್ರಹ್ಲಾದನೆನಿಸಿ ಕ 

ಯಾದುವಿನುದರದಿ ಜನಿಸುತಲಿಸಖಿ ಜನಿಸುತಲಿ 

ವಾದಿಸಿ ಪಿತನೊಳು ಮಾಧವ ಪರನೆಂದು 

ಮೋದದಿ ಸ್ತಂಭದಿ ತೋರಿದ ಧೀರನೆ ll ೧ ll


ಅದ್ವೈತಾಟವಿ ದಗ್ಧಕೃತಾನಲ

ಮಧ್ವಮತಾಬ್ಧಿಗೆ ಭೇಶನೆಂದೆನಿಸಿ ಭೇಶನೆಂದೆನಿಸಿ

ಸದ್ವೈಷ್ಣವರುದ್ಧಾರಕನಾದ ಪ್ರ

ಸಿದ್ಧನಾದ ವ್ಯಾಸ ಕರ್ಮಂದಿಕುಲೇಂದ್ರನೆ ll ೨ ll


ಧರಣಿತಳದಿ ರಾಘವೇಂದ್ರ ಸುನಾಮದಿ 

ಮರಳಿ ಜನಿಸಿ ದಿವ್ಯ ಪರಿಮಳ ರಚಿಸಿ ಪರಿಮಳ ರಚಿಸಿ

ಕರುಣದಿ ದ್ವಿಜರಿಗೆ ಎರದು ಪೊರೆದ ಗುರು

ಮರುತಾವೇಶದ ದೇವಸ್ವಭಾವನೆ ll ೩ ll


ಸ್ವಾಂತದಿ ಭಜಿಪರ ಚಿಂತೆಯ ಕಳೆಯಲು

ಚಿಂತಾಮಣಿಯಂತೆ ಸಂತತ ಸಖಿಯೆ ಸಂತತ ಸಖಿಯೆ 

ಮಂತ್ರನಿಕೇತನಕ್ಷೇತ್ರದಿ ಸ್ಥಿರವಾಗಿ

ನಿಂತ ಪರಮಸುಶಾಂತಮೂರುತಿಯೆ ll ೪ ll 


ವಂದಿಸಿ ಸ್ತವಿಸುವ ವಂಧ್ಯಾಂಧಕರಿಗೆ

ಕಂದರಕ್ಷಿಗಳ ಕರುಣಿಸುತಿಹರೆ ಕರುಣಿಸುತಿಹರೆ

ಇಂದುಧರಾಮರವಂದಿತ ಶ್ಯಾಮ

ಸುಂದರವಿಟ್ಠಲನ ದಾಸೋತ್ತಮರೆ ll ೫ ll

***

ತುಂಗಾತೀರದಿ ಕಂಗೊಳಿಸುವ ಮುನಿ

ಪುಂಗವರಾಯರ ನಯನದಿ ನೋಡೆ | ಮನದಿ

ಕೊಂಡಾಡೆ ವರಗಳ ಬೇಡೆ ಪ


ಆದಿ ಯುಗದಿ ಪ್ರಹ್ಲಾಲದನೆನಿಸಿ ಕ

ಯಾದವಿನುದರದಿ ಜನಿಸುತಲಿ | ಸಖಿಜನಿಸುತಲಿ

ವಾದಿಸಿ ಪಿತನೊಳು | ಮಾಧವ ಪರನೆಂದುಮೋದದಿ

ಸ್ತಂಭದಿ ತೋರಿದ ಧೀರನೆ 1


ಅದ್ವೈತಾಟವಿ ದಗ್ಧಕೃತಾನಲ

ಮಧ್ವಮತಾಬ್ಧಿಗೆ ಭೇಶನೆಂದೆನಿಸಿ

ಸದ್ವೈಷ್ಣ ವರುದ್ಧಾರಕನಾದ ಪ್ರ

ಸಿದ್ಧನಾದ ವ್ಯಾಸಕರ್ಮಂದ ಕುಲೇಂದ್ರನೆ 2


ಧರಣಿ ತಳದಿ ರಾಘವೇಂದ್ರ ಸುನಾಮದಿ

ಮರಳಿ ಜನಿಸಿ ದಿವ್ಯ ಪರಿಮಳ ರಚಿಸಿ | ಪರಿಮಳ ರಚಿಸಿ

ಕರುಣದಿ ದ್ವಿಜರಿಗೆ ಎರದು ಪೊರೆವಗುರು

ಮರುತಾವೇಶದ ದೇವಸ್ವಭಾವನೆ 3


ಸ್ವಾಂತÀದಿ ಭಜಿಪರ ಚಿಂತೆಯ ಕಳೆಯಲು

ಚಿಂತಾಮಣಿಯಂತೆ ಸತತ ಸಖಿಯೇ | ಸಂತತ ಸಳಿಯೇ

ಮಂತ್ರನಿಕೇತನ ಕ್ಷೇತ್ರದಿ ಸ್ಥಿರವಾಗಿ

ನಿಂತ ಪರಮ ಸುಶಾಂತ ಮೂರುತಿಯೆ 4


ವಂದಿಸಿ ಸ್ತವಿಸುವ ವಂದ್ಯಾಂಧಕರಿಗೆ

ಕಂದ ರಕ್ಷಿಗಳ ಕರುಣಿಸಿಹರೇ | ಕರುಣಿಸಿಹರೇ

ಇಂದು ಧರಾಮರ ವಂದಿತ ಶಾಮ

ಸುಂದರ ವಿಠಲನ ದಾಸೋತ್ತಮನೆ 5

***

ತುಂಗಾತೀರದಿ ಕಂಗೊಳಿಸುವ ಮುನಿ

ಪುಂಗವರಾಯರ ನಯನದಿ ನೋಡೆ | ಮನದಿ

ಕೊಂಡಾಡೆ ವರಗಳ ಬೇಡೆ ಪ


ಆದಿ ಯುಗದಿ ಪ್ರಹ್ಲಾಲದನೆನಿಸಿ ಕ

ಯಾದವಿನುದರದಿ ಜನಿಸುತಲಿ | ಸಖಿಜನಿಸುತಲಿ

ವಾದಿಸಿ ಪಿತನೊಳು | ಮಾಧವ ಪರನೆಂದುಮೋದದಿ

ಸ್ತಂಭದಿ ತೋರಿದ ಧೀರನೆ 1


ಅದ್ವೈತಾಟವಿ ದಗ್ಧಕೃತಾನಲ

ಮಧ್ವಮತಾಬ್ಧಿಗೆ ಭೇಶನೆಂದೆನಿಸಿ

ಸದ್ವೈಷ್ಣ ವರುದ್ಧಾರಕನಾದ ಪ್ರ

ಸಿದ್ಧನಾದ ವ್ಯಾಸಕರ್ಮಂದ ಕುಲೇಂದ್ರನೆ 2


ಧರಣಿ ತಳದಿ ರಾಘವೇಂದ್ರ ಸುನಾಮದಿ

ಮರಳಿ ಜನಿಸಿ ದಿವ್ಯ ಪರಿಮಳ ರಚಿಸಿ | ಪರಿಮಳ ರಚಿಸಿ ಕರುಣದಿ ದ್ವಿಜರಿಗೆ ಎರದು ಪೊರೆವಗುರು ಮರುತಾವೇಶದ ದೇವಸ್ವಭಾವನೆ 3


ಸ್ವಾಂತÀದಿ ಭಜಿಪರ ಚಿಂತೆಯ ಕಳೆಯಲು

ಚಿಂತಾಮಣಿಯಂತೆ ಸತತ ಸಖಿಯೇ | 

ಸಂತತ ಸಳಿಯೇ ಮಂತ್ರನಿಕೇತನ ಕ್ಷೇತ್ರದಿ ಸ್ಥಿರವಾಗಿ ನಿಂತ ಪರಮ ಸುಶಾಂತ ಮೂರುತಿಯೆ 4


ವಂದಿಸಿ ಸ್ತವಿಸುವ ವಂದ್ಯಾಂಧಕರಿಗೆ

ಕಂದ ರಕ್ಷಿಗಳ ಕರುಣಿಸಿಹರೇ | ಕರುಣಿಸಿಹರೇ

ಇಂದು ಧರಾಮರ ವಂದಿತ ಶಾಮ

ಸುಂದರ ವಿಠಲನ ದಾಸೋತ್ತಮನೆ 5

***