Showing posts with label ಪಾರ್ವತೀಪತಿಯೆ ಎನ್ನಪಾಲಿಸುವುದು muddumohana vittala. Show all posts
Showing posts with label ಪಾರ್ವತೀಪತಿಯೆ ಎನ್ನಪಾಲಿಸುವುದು muddumohana vittala. Show all posts

Sunday, 1 August 2021

ಪಾರ್ವತೀಪತಿಯೆ ಎನ್ನಪಾಲಿಸುವುದು ankita muddumohana vittala

 ..

kruti by muddumohana dasaru 


ಪಾರ್ವತೀಪತಿಯೆ ಎನ್ನಪಾಲಿಸುವುದು ಪ


ದೂರು ನೋಡದೇ ಗುರುವ ಸಾರುವುದು ಸತತಾ ಅ.ಪ


ಭಜಕರ ಸರ್ವಕಾವನ ನಿಜದಾಸರೊಳ್ಕೂಡಿಸಿ

ಭಜನೆಯ ಮಾಡಿಸೋಬೇಗ ಭುಜಗಭೂಷಣನೆನೀನು 1


ನಂದಿ ವಾಹನನೆ ಎನ್ನಾ ಮಂದಮತಿಗಳ ಹರಿಸಿ

ಕಂದುಗೊರಳನೆ ನೀನು ಆನಂದದಿಂದಲಿ ಕಾಯೋ 2


ದೂರ್ವಾಸಮುನಿಯೇ ಇಂದು ಗರ್ವವ ಬಿಡಿಸಿ

ಕಾರಣಕರ್ತಹರಿಯೆ ಶ್ರೀರಮಣನ ತೋರೋ 3


ಭೂತನಾಥನೆ ನೀನು ಮಾತನು ಲಾಲಿಸುವುದು

ದಾತಾನೆ ಸಲಹೊ ಎನ್ನಾ ಪಾತಕವನು ಹರಿಸಿ 4


ಶುದ್ಧಭಕುತಿಯನೆ ಕೊಟ್ಟುಸದ್ವೈಷ್ಣವರ ಪ್ರೀಯನೆ

ಮಧ್ವಾಂತರ್ಗನಾದ ಮುದ್ದುಮೋಹನವಿಠಲನ ತೋರು 5

***