Showing posts with label ಗುರುರಾಯನ್ನ ನೆನೆ ಅನುದಿನ ವಾದಿರಾಜ ಗುರು immadi vadiraja. Show all posts
Showing posts with label ಗುರುರಾಯನ್ನ ನೆನೆ ಅನುದಿನ ವಾದಿರಾಜ ಗುರು immadi vadiraja. Show all posts

Saturday 1 May 2021

ಗುರುರಾಯನ್ನ ನೆನೆ ಅನುದಿನ ವಾದಿರಾಜ ಗುರು ankita immadi vadiraja

 ರಚನೆ : ಶ್ರೀ ವೇದವೇದ್ಯ ತೀರ್ಥರು 

ಅಂಕಿತ : ಶ್ರೀ ಇಮ್ಮಡಿ ವಾದಿರಾಜ 


ಗುರುರಾಯನ್ನ ನೆನೆ ಅನುದಿನ । ವಾ ।

ದಿರಾಜ ಗುರುರಾಯನ್ನ ।। ಪಲ್ಲವಿ ।।


ಮರುತ ಶಾಸ್ತ್ರಾರ್ಥ ।

ನಿರುತ ವಿಸ್ತರಿಸಿ ।

ಅರಿದು ಬುಧರ್ಗೆ ಪೇಳಿ ।

ಮರಮ ಮಂಗಳವಿತ್ತ ।। ಅ ಪ ।।


ಮುದ್ದು ಪ್ರಾಯದಿಂದ ।

ಸಿದ್ಧ ದಂಡವ ಪಿಡಿದು ।

ಹೃದ್ಯ ಹಯವದನನ ।

ಶುದ್ಧ ಭಕುತಿ ಪಾಶದಿ ।

ಬದ್ಧವ ಮಾಡಿ ಪ್ರಸಿದ್ಧಿ । ವ ।

ಡೆದು ಪ್ರಸಿದ್ಧನಾಗಿ 

ಮೆರೆದ ।। ಚರಣ ।।

ದುರುವಾದಿಗಳ ಬಿಂಕ ।

ಭರದಿಂದಲಿ ಗೆದ್ದು ।

ಬಿರಿದು ಚರಿಸಿ । ಮುರ ।

ವೈರಿ ಕೃಷ್ಣನ 

ಚರಣಕೆರಗಿ ನಿಂತೆ ।। ಚರಣ ।।


ಯತಿ ವಾದಿವಂದ್ಯರ ।

ಮತಿವಂತರ ಮಾಡಿ ।

ಅತಿಶಯದಿ ಪೂಜೆಗೊಳುತ ।

ಕ್ಷಿತಿಗಧಿಕ ವಾಗೀಶ ಸುತ ।

ವಾದಿರಾಜರೊಡೆಯ ।

ಪ್ರತಿ ಮಹಿಮನೆಂದು ।

ಧೃತಿಯಾಗಿ ತೋರು-

ವಂತ ।। ಚರಣ ।।

****