Showing posts with label ಮಧ್ಯರಾತ್ರಿಯೊಳೀಗ ನಾ ನಿದ್ದೆಯೊಳಿರೆ pranesha vittala. Show all posts
Showing posts with label ಮಧ್ಯರಾತ್ರಿಯೊಳೀಗ ನಾ ನಿದ್ದೆಯೊಳಿರೆ pranesha vittala. Show all posts

Friday, 15 November 2019

ಮಧ್ಯರಾತ್ರಿಯೊಳೀಗ ನಾ ನಿದ್ದೆಯೊಳಿರೆ ankita pranesha vittala

by ಪ್ರಾಣೇಶದಾಸರು
ಮಧ್ಯರಾತ್ರಿಯೊಳೀಗ ನಾ ನಿದ್ದೆಯೊಳಿರೆ ಬಾಗಿಲು |ಸದ್ದು ಮಾಡಿ ವೊತ್ತಿದವರಾರೈ | ಬಾಳ್ವರಿಗಿದುಬುದ್ಧೆ ಹೆಣ್ಣೋ ಗಂಡೋ ಪೇಳಿರೈ ಪ

ಮೇದಿನಿಯೊಳು ಪ್ರಸಿದ್ಧವಾದ ತುಂಗಮಹಿಮ ಶ್ರೀ |ಮಾಧವಬಂದಿಹೆ ಕೇಳೆಲೆ | ಆದರೊಳ್ಳಿತುಮದನನೊಳಾಡಲಿ ಹೋಗೆ 1

ಹೇ ಸಖಿ ವಿಚಾರ ಮಾಡೆ ವಸಂತನಲ್ಲವೆ | ಸರ್ವದೇಶ ಬಲ್ಲದು ನಾಚಕ್ರಿಯೆ | ಇಲ್ಲಿ ಬೇಕಿಲ್ಲಆ ಸಂತಿಯೊಳಿಟ್ಟು ಮಾರೊದೈ 2

ಉತ್ತಮಗಂಬುವದಲ್ಲೆ ವೈತ್ತಿಕೆ ತುಳಿವನೆಂದುಧರೆ|ಹೊತ್ತವ ಕೇಳೆಲೆ ಸುಂದರಿ | ಒಳ್ಳೆದು ನಿನ್ನಹುತ್ತಿನೊಳು ವಾಸ ಮಾಡೊದೈ3

ಸರ್ಪನಲ್ಲವೆ ಅಖಂಡಲ ದರ್ಪ ತಗ್ಗಿಸಿದವ ಸ- |ಮರ್ಪಕವಾಯಿತೇನೆ ಮನಕೆ | ಮರದ ಗೂಡೊಳುತೆಪ್ಪನೆ ಸೇರುವುದೇ ಬಹು ಲೇಸೈ 4

ಸೂರಿಗಳೆಲ್ಲರು ಯನ್ನ ಕೀರುತಿ ಬಲ್ಲರುಹುದಲ್ಲ |ನಾರೀಮಣಿಹರಿಬಂಧಿನಿ ಕೇಳೆ | ಮನಗಳಲ್ಲಿ ವಿ-ಹಾರ ಮಾಡುವುದೇ ಲೇಸೈ 5

ತರುಗಳಲ್ಲಿಹೊದಕ್ಕೆ ವಾನರನಲ್ಲೆ ಜನನಾದಿ ದೋಷ |ವಿರಹಿತ ನಾರಾಯಣ ಬಂಧಿನೆ | ಈ ನಾಮಕ್ಕಿನ್ನು-ತ್ತರವೇನು ಇದ್ದರೆ ಪೇಳೆ ಗುಣಧೀ 6

ನಾನರಿತೆನೀಗ ದೇವ ಪ್ರಾಣೇಶ ವಿಠಲನೆಂಬೊದು |ಏನಾಡಿದಾಪದ್ಧವನು ಕ್ಷಮಿಸೈ | ತನುವೆ ನಿನ್ನದುಮಾನದಿಂದೆನ್ನನು ರಕ್ಷಿಸೈ 7
*******