Showing posts with label ನಾನು ನೀನು ಎನ್ನದಿರೊ ಹೀನ ಮಾನವ neleyadikeshava NAANU NEENU ENNADIRO HEENA MAANAVA. Show all posts
Showing posts with label ನಾನು ನೀನು ಎನ್ನದಿರೊ ಹೀನ ಮಾನವ neleyadikeshava NAANU NEENU ENNADIRO HEENA MAANAVA. Show all posts

Friday, 12 November 2021

ನಾನು ನೀನು ಎನ್ನದಿರೊ ಹೀನ ಮಾನವ ankita neleyadikeshava NAANU NEENU ENNADIRO HEENA MAANAVA



ರಾಗ ಸಾಮ  ರೂಪಕತಾಳ 
2nd Audio by Mrs. Nandini Sripad

ಶ್ರೀ ಕನಕದಾಸರ ಕೃತಿ 
 
ನಾನು ನೀನು ಎನ್ನದಿರೊ ಹೀನ ಮಾನವ ॥ ಪ ॥
ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಪ್ರಾಣಿ ॥ ಅ ಪ ॥

ಹೆಣ್ಣು ಹೊನ್ನು ಮಣ್ಣು ಮೂರು ನಿನ್ನವೇನೆಲೊ ।
ಅನ್ನದಿಂದ ಬಂದ ಕಾಯ ನಿನ್ನದೇನೆಲೊ ॥
ಕರ್ಣದಿಂದ ಬರುವ ಘೋಷ ನಿನ್ನದೇನೆಲೊ ।
ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೊ ॥ 1 ॥

ಹಲವು ಜನ್ಮದಿಂದ ಬಂದಿರುವನು ನೀನೆಲೊ ।
ಮಲದ ಗರ್ಭದಲಿ ನಿಂದಿರುವನು ನೀನೆಲೊ ॥
ಜಲದ ದಾರಿಯಲಿ ಬಂದಿರುವನು ನೀನೆಲೊ ।
ಕುಲವು ಜಾತಿ ಗೋತ್ರಗಳುಳ್ಳವನು ನೀನೆಲೊ ॥ 2 ॥

ಕಾಲ ಕರ್ಮ ಶೀಲ ನೇಮ ನಿನ್ನದೇನೆಲೊ ।
ಜಾಲವಿದ್ಯೆ ಬಯಲಮಾಯೆ ನಿನ್ನದೇನೆಲೊ ॥
ಕೀಲುಜಡಿದ ಮರದ ಬೊಂಬೆ ನಿನ್ನದೇನೆಲೊ ।
ಲೋಲ ಆದಿಕೇಶವನ ಭಕ್ತನಾಗೆಲೊ ॥ 3 ॥
*********


ಶ್ರೀ ಕನಕದಾಸರ ಕೃತಿ 
ಭೈರವಿ ರಾಗ ಮಟ್ಟತಾಳ

ನಾನು ನೀನು ಎನ್ನದಿರೊ ಹೀನ ಮಾನವ
ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಪ್ರಾಣಿ ||ಪ||

ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೊ
ಅನ್ನದಿಂದ ಬಂದ ಕಾಮ ನಿನ್ನದೇನೆಲೊ
ಕರ್ಣದಿಂದ ಬರುವ ಘೋಷ ನಿನ್ನದೇನೆಲೊ
ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೊ ||೧||

ಹಲವು ಜನ್ಮದಲಿ ಬಂದಿರ್ವನು ನೀನೆಲೋ
ಮಲದ ಗರ್ಭದಲಿ ನಿಂದಿರುವನು ನೀನೆಲೋ
ಜಲದ ದಾರಿಯಲ್ಲಿ ಬಂದಿರುವನು ನೀನೆಲೋ
ಕುಲವು ಜಾತಿ ಗೋತ್ರಗಳುಳ್ಳವನು ನೀನೆಲೋ ||೨||

ಕಾಲ ಕರ್ಮ ಶೀಲ ನೇಮ ನಿನ್ನದೇನೆಲೋ
ಜಲ ವಿದ್ಯೆ ಬಯಲ ಮಾಯೆ ನಿನ್ನದೇನೆಲೋ
ಕೀಲು ಜಡಿದ ನರದ ಬೊಂಬೆ ನಿನ್ನದೇನೆಲೋ
ಲೋಲ ಆದಿಕೇಶವನ್ನ ಭಕ್ತನಾಗೆಲೋ ಪ್ರಾಣೀ ||೩||
**********

 ರಾಗ ಸಾಮ              ರೂಪಕತಾಳ 

ನಾನು ನೀನು ಎನ್ನದಿರೊ ಹೀನ ಮಾನವ ॥ ಪ ॥
ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಪ್ರಾಣಿ ॥ ಅ ಪ ॥

ಹೆಣ್ಣು ಹೊನ್ನು ಮಣ್ಣು ಮೂರು ನಿನ್ನವೇನೆಲೊ ।
ಅನ್ನದಿಂದ ಬಂದ ಕಾಯ ನಿನ್ನದೇನೆಲೊ ॥
ಕರ್ಣದಿಂದ ಬರುವ ಘೋಷ ನಿನ್ನದೇನೆಲೊ ।
ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೊ ॥ 1 ॥

ಹಲವು ಜನ್ಮದಿಂದ ಬಂದಿರುವನು ನೀನೆಲೊ ।
ಮಲದ ಗರ್ಭದಲಿ ನಿಂದಿರುವನು ನೀನೆಲೊ ॥
ಜಲದ ದಾರಿಯಲಿ ಬಂದಿರುವನು ನೀನೆಲೊ ।
ಕುಲವು ಜಾತಿ ಗೋತ್ರಗಳುಳ್ಳವನು ನೀನೆಲೊ ॥ 2 ॥

ಕಾಲ ಕರ್ಮ ಶೀಲ ನೇಮ ನಿನ್ನದೇನೆಲೊ ।
ಜಾಲವಿದ್ಯೆ ಬಯಲಮಾಯೆ ನಿನ್ನದೇನೆಲೊ ॥
ಕೀಲುಜಡಿದ ಮರದ ಬೊಂಬೆ ನಿನ್ನದೇನೆಲೊ ।
ಲೋಲ ಆದಿಕೇಶವನ ಭಕ್ತನಾಗೆಲೊ ॥ 3 ॥
******