Audio by Vidwan Sumukh Moudgalya
ಶ್ರೀ ಪುರಂದರದಾಸಾರ್ಯ ವಿರಚಿತ ಪರಮಪುರುಷ ಸುಳಾದಿ
ರಾಗ : ಸೌರಾಷ್ಟ್ರ
ಧೃವತಾಳ
ನಿನ್ಮ ಬೊಮ್ಮ ಮೂರುತಿಗೆ ನಮೊ ನಮೊ
ನಿನ್ನ ರುದ್ರ ಮೂರುತಿಗೆ ನಮೊ ನಮೊ
ನಿನ್ನ ಇಂದ್ರ ಮೂರುತಿಗೆ ನಮೊ ನಮೊ
ನಿನ್ನ ಚಂದ್ರ ಮೂರುತಿಗೆ ನಮೊ ನಮೊ
ನಿನ್ನ ಸೂರ್ಯ ಮೂರುತಿಗೆ ನಮೊ ನಮೊ
ನಿನ್ನ ಅಗ್ನಿ ಮೂರುತಿಗೆ ನಮೊ ನಮೊ
ನಿನ್ನ ಸ್ಥಾವರ ಮೂರುತಿಗೆ ನಮೊ ನಮೊ
ನಿನ್ನ ಜಂಗಮ ಮೂರುತಿಗೆ ನಮೊ ನಮೊ
ನಿನ್ನ ಪುರಂದರವಿಠ್ಠಲ ನಮೊ ನಮೊ॥೧॥
ಮಟ್ಟತಾಳ
ಬೊಮ್ಮಾಂಡವೆ ಮಂಟಪ ಜ್ಯೋತಿಶ್ಚಕ್ರವೆ ದೀಪ
ಮಹಮೇರು ಸಿಂಹಾಸನ ಮಂದಾಕಿನಿ ಮಜ್ಜನ
ಮಂದರ ಪಾರಿಜಾತ ಮಾಲೆ
ಪುರಂದರವಿಠ್ಠಲಗೆ ಅಮೃತವೆ ನೈವೇದ್ಯ॥೨॥
ತ್ರಿವಿಡಿತಾಳ
ಆಲಾಯಾಂಬು ರಾಸಿಯಲ್ಲಿ ಆಲದೆಲೆ ಪೊಂದೊಟ್ಟಿಲು
ಅಂಗುಟವೆ ಜೋಕಾಯಿ ಬಾಲಮುಕುಂದ ಶ್ರೀ
ಪುರಂದರವಿಠ್ಠಲಗೆ ಆಯಲಾಂಬು॥೩॥
ಅಟ್ಟತಾಳ
ಜಗವ ಪುಟ್ಟಿಸಿ ನೀನು ಜಗದೊಳಗಿರುವ
ಜಗದೊಳ ಹೊರಗೆ ನೀನೆ ಪೂರ್ಣ
ಜಗದನ್ಯನಾಗಿ ಜಗವ ಸಂಹರಿಸುವಿ
ಜಗದೊಳ ಹೊರಗೆ ನೀನೆ ಸ್ವಾತಂತ್ರ
ಜಗದೇಕ ವಸ್ತು ಪುರಂದರವಿಠ್ಠಲ ॥೪॥
ಆದಿತಾಳ
ಬೊಮ್ಮಾಂಡಕಟಹ ಪುಟಚಂಡೊ ಪುಟಚಂಡೊ
ಪುರಂದರವಿಠ್ಠಲಗೆ ಬೊಮ್ಮಾಂಡಕಟಹ॥೫॥
ಜತೆ
ಜಯ ಜಯ ಜನಾರ್ದನ ಪುರಂದರವಿಠ್ಠಲ
ಜಯ ಜಯ ಜಯ ಜಯ ಬಾಢಮೋಹನ್ನ॥೬॥
****