rendered by srI Ananda rAo, srIrangam
to aid learning the dAsara pada
ಸಾರಿದೆನೊ ನಿನ್ನ ವೆಂಕಟರನ್ನ ಪ.
ನೀರಜನಯನನೆ ನಿರ್ಮಲಗುಣಪೂರ್ಣ ಅ.ಪ.
ಅನಾಥನು ನಾನು ಎನಗೆ ಬಂಧು ನೀನುನಿನ್ನವನೆಂದು ನೋಡೊ ನೀನಾಗಿ ದಯಮಾಡೊ 1
ಎನ್ನ ಕುಂದುಗಳನ್ನು ಎಣಿಸಲಾಗದೊ ದೇವಪನ್ನಗಾದ್ರಿವಾಸ ನೀನೆ ನಿರ್ದೋಷ 2
ದೇಶದೇಶದವರ ಪೊರೆವಂತೆ ಪೊರೆಯೆನ್ನಶೇಷಾಚಲಘನ್ನ ಶ್ರೀಶ ಹಯವದನ 3
***
ರಚನೆ : ಶ್ರೀ ವಾದಿರಾಜ ತೀರ್ಥ
ಅಂಕಿತನಾಮ : ಹಯವದನ
ಸಾರಿದೆನೊ ನಿನ್ನ ವೆಂಕಟರನ್ನ||ಪ||
ನೀರಜನಯನನೆ ನಿರ್ಮಲಗುಣಪೂರ್ಣ||ಅ.ಪ||
ಅನಾಥನು ನಾನು ಎನಗೆ ಬಂಧು ನೀನು
ನಿನ್ನವನೆಂದು ನೋಡೊ ನೀನಾಗಿ ದಯಮಾಡೊ||೧||
ಎನ್ನ ಕುಂದುಗಳನ್ನು ಎಣಿಸಲಾಗದೊ ದೇವ
ಪನ್ನಗಾದ್ರಿವಾಸ ನೀನೆ ನಿರ್ದೋಷ||೨||
ದೇಶದೇಶದವರ ಪೊರೆವಂತೆ ಪೊರೆಯೆನ್ನ
ಶೇಷಾಚಲ ಘನ್ನ ಶ್ರೀಶ ಹಯವದನ||೩||
****