..
kruti by Srida Vittala Dasaru Karjagi Dasappa
ರಾಗ - : ತಾಳ -
ತಾರಕ ನೀನೇ ಹರಿ ಮುರಾರಿ ll ಪ ll
ಉದಕದಿ ನಕ್ರನು ಪದವೆಳೆಯಲು ನೊಂದು
ಮದಗಜ ಹರಿಯನ್ನೆ ಮುದದಿ ಪೊರೆದ ಕಾರಣ ll 1 ll
ತುಂಬಿದ ಸಭೆಯಲಿ ಮಾನ ಕೊಂಬುದ ಕೇಳಿ
ನಂಬಿದ ದ್ರೌಪದಿಗಂಬರವಿತ್ತ ಕಾರಣ ll 2 ll
ಶ್ರೀದವಿಟ್ಠಲ ನಿನ್ನ ಪಾದಪೂಜಿಸಲರಿಯೆ
ಆದರದಿ ಅಜಾಮಿಳನನ ಕಾಯ್ದ ಕಾರಣ ll 3 ll
***
ತಾರಕ ನೀನೇ ಹರಿ ಮುರಾರಿ ಪ
ಉದಕದಿ ನಕ್ರನು ಪದವೆಳೆಯಲು ನೊಂದು
ಮದಗಜ ಹರಿಯನ್ನೆ ಮುದದಿ ಪೊರೆದ ಕಾರಣ 1
ತುಂಬಿದ ಸಭೆಯಲಿ ಮಾನ ಕೊಂಬುದ ಕೇಳಿ
ನಂಬಿದ ದ್ರೌಪದಿಗಂಬರವಿತ್ತ ಕಾರಣ 2
ಶ್ರೀದವಿಠ್ಠಲ ನಿನ್ನ ಪಾದಪೂಜಿಸಲರಿಯೆ
ಆದರದಿ ಅಜಾಮಿಳನನ ಕಾಯ್ದ ಕಾರಣ 3
***