Showing posts with label ಸಲಹೋ ಸಲಹೋ ಕರುಣಾಂಬುಧಿಯೇ ಕೋಲಜಾತಾ ತೀರ ನಿವಾಸಾ shyamasundara. Show all posts
Showing posts with label ಸಲಹೋ ಸಲಹೋ ಕರುಣಾಂಬುಧಿಯೇ ಕೋಲಜಾತಾ ತೀರ ನಿವಾಸಾ shyamasundara. Show all posts

Wednesday, 1 September 2021

ಸಲಹೋ ಸಲಹೋ ಕರುಣಾಂಬುಧಿಯೇ ಕೋಲಜಾತಾ ತೀರ ನಿವಾಸಾ ankita shyamasundara

 ..

ಸಲಹೋ ಸಲಹೋ ಕರುಣಾಂಬುಧಿಯೇ

ಕೋಲಜಾತಾ ತೀರ ನಿವಾಸಾ ಪ

ವೃಂದಾವನದಿ ನಿಂದ ಮುನೀಂದ್ರ

ಮಂದಜನನೌಘÀಕೆ ಕಲ್ಪ ಸಂಭೂಷಣ 1

ದೇವಸ್ವಭಾವ ಭೂದೇವವರೇಣ್ಯ

ಕೋವಿದ ವಂದಿತ ಪಾವನ ಕಾಯ 2

ಶ್ರೀಮಹಿವಲ್ಲಭ ಶಾಮ ಸುಂದರ

ಪ್ರೇಮ ಪಡೆದ ನಿಷ್ಕಾಮಿ ಪ್ರಹ್ಲಾದನೆ 3

***