Showing posts with label ಕರವ ಮುಗಿದನು ಮುಖ್ಯಪ್ರಾಣ ಕರವ ಮುಗಿದನು purandara vittala KARAVA MUGIDANU MUKHYAPRANA KARAVA MUGIDANU. Show all posts
Showing posts with label ಕರವ ಮುಗಿದನು ಮುಖ್ಯಪ್ರಾಣ ಕರವ ಮುಗಿದನು purandara vittala KARAVA MUGIDANU MUKHYAPRANA KARAVA MUGIDANU. Show all posts

Saturday, 4 December 2021

ಕರವ ಮುಗಿದನು ಮುಖ್ಯಪ್ರಾಣ ಕರವ ಮುಗಿದನು purandara vittala KARAVA MUGIDANU MUKHYAPRANA KARAVA MUGIDANU





ಕರವ ಮುಗಿದನು, ಮುಖ್ಯಪ್ರಾಣ
ಕರವ ಮುಗಿದನು ||ಪ||

ಕರವ ಮುಗಿದ ಶ್ರೀ ಹರಿಯ ಇದಿರಾಗಿ
ದುರುಳರ ಸದೆದು ಶರಣರ ಪೊರೆಯೆಂದು || ಅ.ಪ||

ಜೀವೇಶರೈಕ್ಯವು ಜಗತು ಮಿಥ್ಯವೆಂದು
ಈ ವಿಧ ಪೇಳುವ ಮಾಯಿಗಳಳಿಯೆಂದು ||
ಇಲ್ಲಿ ಮಾತ್ರವು ಭೇದ , ಅಲ್ಲಿ ಒಂದೇ ಎಂಬ
ಕ್ಷುಲ್ಲಕರನು ಪಿಡಿದ್ಹಲ್ಲು ಮುರಿಯೆಂದು ||

ತಾರತಮ್ಯ ಪಂಚಭೇದ ಸತ್ಯವೆಂಬ
ಮಾರುತಿಮತ ಪೊಂದಿದವರನು ಸಲಹೆಂದು ||

ಪರಿಪರಿ ಭಕ್ತರ ಹೃದಯದಲಿ ನಿಂದು
ನಿರತ ಮಾಡುವ ಕರ್ಮ ಹರಿಗೆ ಅರ್ಪಿತವೆಂದು ||
ಹರಿ ಮಾಡೋ ವ್ಯಾಪಾರ ಬಲ್ಲ ಕಾರಣ ನಮ್ಮ
ಪುರಂದರವಿಠಲನ ಚರಣಕ್ಕೆರಗಿ ನಿಂದು ||
****

ರಾಗ ಕಾನಡ ತ್ರಿಪುಟತಾಳ  (raga, taala may differ in audio)

Karava mugida mukhyapraana |
Karava mugidaa || pa ||

Karava mugidaa shreeharige eduraagi |
Durulara sadedu sajjanara porevenemdu || a. Pa. ||

Jeeveshvaraikyavu jagattu mithyaa endu |
Ee vidha peluva maayigalaliyendu || 1 ||

Illi maatra bhedha alli onde embo |
Kshullakaranu pidid~hallu muriyendu || 2 ||

Taaratamya pancha bhedha satyavemba |
Maaruti mata pondidavaranu salahendu || 3 ||

Pari pari bhaktara hrudayadalli nindu |
Niruta maaduva karma harige arpitavendu || 4 ||

Hari maado vyaapaara balla kaarana namma |
Purandaraviththalana charanakeragi nindu || 5 ||
***

pallavi

karava migidanu mukhya prANa krava mugidanu

anupallavi

karava mugida shrI hariya idirAgi duruLara sadedu sharaNara poreyendu

caraNam 1

jIvEsharaikyavu jagadu midyavendu I vidha pELuva mAyigaLaLiyendu

caraNam 2

illi mAtravu bhEda alli ondE emba Sullakaranu piTidhallu muruyendu

caraNam 3

tAratamya panca bhEda satyavemba mAruti mata pondidavaranu salahendu

caraNam 4

pari pari bhaktara hrdayadali nindu nirata mADuva karma harige arpitavendu

caraNam 5

hari mADO vyApAra balla kAraNa namma purandara viTTalana caraNakkeragi nindu
***

ಕರವ ಮುಗಿದನು, 
ಮುಖ್ಯಪ್ರಾಣ ಕರವ ಮುಗಿದನು ||ಪ||

ಕರವ ಮುಗಿದ ಶ್ರೀ ಹರಿಯ ಇದಿರಾಗಿ
ದುರುಳರ ಸದೆದು ಶರಣರ ಪೊರೆಯೆಂದು || ಅ.ಪ||

ಜೀವೇಶರೈಕ್ಯವು ಜಗತು ಮಿಥ್ಯವೆಂದು
ಈ ವಿಧ ಪೇಳುವ ಮಾಯಿಗಳಳಿಯೆಂದು ||

ಇಲ್ಲಿ ಮಾತ್ರವು ಭೇದ , ಅಲ್ಲಿ ಒಂದೇ ಎಂಬ
ಕ್ಷುಲ್ಲಕರನು ಪಿಡಿದ್ಹಲ್ಲು ಮುರಿಯೆಮ್ದು ||

ತಾರತಮ್ಯ ಪಂಚಭೇದ ಸತ್ಯವೆಂಬ
ಮಾರುತಿಮತ ಪೊಂದಿದವರನು ಸಲಹೆಂದು ||

ಪರಿಪರಿ ಭಕ್ತರ ಹೃದಯದಲಿ ನಿಂದು
ನಿರತ ಮಾಡುವ ಕರ್ಮ ಹರಿಗೆ ಅರ್ಪಿತವೆಂದು ||

ಹರಿ ಮಾಡೋ ವ್ಯಾಪಾರ ಬಲ್ಲ ಕಾರಣ ನಮ್ಮ
ಪುರಂದರವಿಠಲನ ಚರಣಕ್ಕೆರಗಿ ನಿಂದು ||
*****


ಪುರಂದರದಾಸರು
ಕರವಮುಗಿದ ಮುಖ್ಯಪ್ರಾಣ ಕರವ ಮುಗಿದ ಪ

ಕರವಮುಗಿದ ಶ್ರೀಹರಿಗೆ ತಾನೆದುರಾಗಿದುರುಳರ ಸದೆದು ನೀ ಶರಣರ ಪೊರೆಯೆಂದು ಅ.ಪ

ಜೀವೇಶ್ವರೈಕ್ಯವು ಜಗತು ಮಿಥ್ಯವೆಂದುಈ ವಿಧ ಪೇಳುವ ಮಾಯಿಗಳನಳಿಯೆಂದು 1

ಇಲ್ಲಿ ಮಾತ್ರ ಭೇದ ಅಲ್ಲಿ ಒಂದೇಯೆಂಬಕ್ಷುಲಕರನು ಪಿಡಿದು ಹಲ್ಗಳ ಮುರಿಯೆಂದು 2

ತಾರತಮ್ಯಪಂಚಭೇದಸತ್ಯವೆಂದುಮಾರುತ ಮತ ಪೊಂದಿದವರನು ಪೊರೆಯೆಂದು 3

ಪರಿಪರಿ ಭಕ್ತರು ಹೃದಯ ಕಮಲದೊಳುನಿರುತ ಮಾಡುವ ಪೂಜೆ ನಿನಗರ್ಪಿತವೆಂದು 4

ಹರಿಯ ಮನೋಗತವರಿತು ಮಾಡುವೆನೆಂದುಪುರಂದರವಿಠಲನ ಚರಣದ ಬಳಿಯಲ್ಲಿ5

*******