..
ಎಲ್ಲ ಲೀಲೆ ಇದೆಲ್ಲ ಲೀಲೆಎಲ್ಲ ಲೀಲೆ ರಂಗಗೆಲ್ಲ ಲೀಲೆ ಪ.
ಪುಟ್ಟಿಸುವುದು ಮನವಿಟ್ಟು ಕಾವುದುದುಷ್ಟರ ಶಿಕ್ಷೆ ಅಲ್ಲಿ ವಿಶಿಷ್ಟರ ರಕ್ಷೆ1
ನೀರೊಳುಲ್ಲಾಸ ಮತ್ತಾರಣ್ಯವಾಸಹಾರುವರಾಟ ತನ್ನ ನಾರಿಯ ಬೇಟ 2
ಗೊಲ್ಲರಾಕೃತಿ ಬತ್ತಲೆಯ ಸ್ಥಿತಿಬಲ್ಲಿದ ದೈವ ಕಲಿಯ ಗೆಲ್ಲುವ ಭಾಗ 3
ವರನಿಪ್ಪುದು ಕರೆದರೆ ಬಪ್ಪುದುಧರೆಯಜಮ ಪರಿಪರಿಯ ಕರ್ಮ4
ಹೆಂಗಳಕೂಟ ಅಪಾಂಗದ ನೋಟ ಹಾಸ್ಯದಂಗದಿಂದೂಟ ರಣರಂಗದಿಂದೋಟ 5
ಅಂಬಿನ ವೇಧ ನಿನ ತುಂಬಿದ ಕ್ರೋಧ ತ್ರಿ-ಯಂಬಕ ಪೂಜೆ ತ್ರಿವಿಡಂಬನವೋಜೆ6
ಕರ್ತುಮಾಕರ್ತು ಮತ್ತನ್ಯಥಾಕರ್ತು ಎಂಬಶಕ್ತಿದೇವಗೆ ಬಲುಯುಕ್ತಿ ಇವಗೆ7
ನಾವೆಕರ್ತವ್ಯಂ ಸುಪ್ರವೆ ವಕ್ತವ್ಯಂಏಸು ಮಹಿಮೆಗೆ ಕೃತಕೃತ್ಯ ನಮಗೆ 8
ಪ್ರಿಯಮೋದನ ದೈತ್ಯೇಯಭೇದನಹಯವದನ ನಿನ್ನರ್ಥಿ ಕಾಯಿದನ9
***
ಎಲ್ಲಾ ಲೀಲೆ ಇದೆಲ್ಲ ಎಲ್ಲ ಲೀಲೆ ರಂಗಗೆಲ್ಲ
pallavi
ella lIle idella lIle ella lIle rangagella lIle
caraNam 1
puTTisuvudu manaviTTu kAvudu duSTara shikSe alli vishiSTara rakSe
caraNam 2
nIroLullAsa mattAraNyavAsa hAruvarATa tanna nAriya bETa
caraNam 3
gollarAkruti battaleya sthiti ballida daiva kaliya gelluva bhAva
caraNam 4
varava nippudu karedare bappudu dhareyanappudu paripariya karma
caraNam 5
hengaLakUTa apAngada nOTa hAsyadangadindUTa raNarangadindOTa
caraNam 6
ambina vEdha nina tumbida krOdha tri yambaka pUje triviDambanavOje
caraNam 7
kartumakartu mattanyathAkartu shaktidEvage baluyukti ivage
caraNam 8
nAvekartavyam supravevaktavyam Esu mahimege krutakrutya namage
caraNam 9
priyamOdana daityEyabhEdana hayavadana ninnarthi kAidana
***