ಕಾಖಂಡಕಿ ಶ್ರೀ ಮಹಿಪತಿರಾಯರು
ದೇಶಿಕರಿಗೆ ದೇವ ನೀನಹುದಯ್ಯ ಲೇಸು ಲೇಸಾಗಿ ಪಾಲಿಸೊ ಎನ್ನಯ್ಯ ಪ
ಅನಾಥನಾಥ ನೀನೆ ಸಾನುಕೂಲ ಅನುದಿನ ಮಾಡುವೆ ನೀ ಪ್ರತಿಪಾಲ 1
ಅಣುರೇಣುಕ ಸಾಹ್ಯ ಮಾಡುವ ಸ್ವಾಮಿ ನ್ಯೂನ ನೋಡದೆ ತಪ್ಪು ಮಾಡುವಿ ಕ್ಷಮೆ 2
ನೀನೆ ಸಕಲಕೆಲ್ಲ ಸಲಹುವ ದಾತ ಜನವನದೊಳು ಘನಗುರು ಸಾಕ್ಷಾತ 3
ದೇವಾದೀದೇವ ಶ್ರೀದೇವ ಅವಧೂತ ಭವ ಹರ ಗುರು ನೀನೆ ಸದೋದಿತ 4
ದೀನಮಹಿಪತಿ ಸ್ವಾಮ್ಯಹುದೋ ಕೃಪಾಲ ಭಾನುಕೋಟಿತೇಜ ನೀನೆ ಅಚಲ 5
***