Showing posts with label ಭೃಂಗಾ ನಿನ್ನಟ್ಟಿದನೇ ಶ್ರೀರಂಗ ಮಧುರೆಲಿ rangavittala. Show all posts
Showing posts with label ಭೃಂಗಾ ನಿನ್ನಟ್ಟಿದನೇ ಶ್ರೀರಂಗ ಮಧುರೆಲಿ rangavittala. Show all posts

Wednesday, 11 December 2019

ಭೃಂಗಾ ನಿನ್ನಟ್ಟಿದನೇ ಶ್ರೀರಂಗ ಮಧುರೆಲಿ ankita rangavittala

ಭೃಂಗಾ ನಿನ್ನಟ್ಟಿದನೇ ಶ್ರೀರಂಗ ಮಧುರೆಲಿ ನಿಂದುಅಂಗಜಲುಬ್ಧಕ ಪೂಗೋಲಂಗಳ ತಡೆಯನಿಕ್ಕಿಅಂಗನೇರೆಂಬೋ ಹುಲ್ಲೆ ಮೃಗಂಗಳಿಗೆ ಗುರಿಯೆಚ್ಚುಹಿಂಗಿಸುತೈಧಾನೆ ಅಸುವ ಹೇ ಕಿತವಾ ಪ

ನಿನ್ನ ನೋಡೆ ನಮ್ಮ ಅಚ್ಯುತನ್ನ ಕಂಡಂತಾಯಿತಯ್ಯಚನ್ನಿಗರರಸ ಕುಶಲೋನ್ನತಿಯೊಳಹನೇನೋಚಿಣ್ಣತನ ಮೊದಲಾಗವನ್ನ ಕಿತವ ಬಲ್ಲೆವೋಗನ್ನಗಾರ ಚಿತ್ತ ಚೋರನ್ನ ಶ್ರೀ ಹರಿಯಾಮನ್ನಣೆಗೆ ಮೆಚ್ಚಿ ತನುವನ್ನೊಪ್ಪಿಸಿದ ಮುಗುದೆವೆಣ್ಣುಗಳ ವಿರಹಾಬ್ಧಿಯನ್ನೆ ದಾಟಿಸುವೆನೆಂದುತನ್ನ ನೇಹವೆಂಬೋ ನಾವೆಯನ್ನೇರಿಸಿ ಮೋಸದಿನಡುನೀರೊಳು ತೊರೆದ್ಹೋದನೆ ಹೇ ಕಿತವಾ 1

ತಮ್ಮ ನಂದಗೋಪ ಯಶೋದಮ್ಮನ ಕಂಡುಬಾರೆಂದುರಮ್ಮ್ಮೆಯ ರಮಣ ನಿನ್ನನೊಮ್ಮೆ ಕಳುಹಿದನೈಸೆಹಮ್ಮುಗೆಟ್ಟಾರಮ್ಮಣೇರಿಂದುಮ್ಮಳಿಸುವೆವೊ ವೃಥಾನಮ್ಮ ಹಂಬಲಿನ್ನೇನವಗೆ ಶ್ರೀ ಹರಿಗೆಹೊಮ್ಮೇಲಟ್ಟದಲಂಚೆಯಗಮ್ಮನೇರ ಕುಚದ ಕುಂ-ಕುಮ್ಮ ಕಸ್ತೂರಿಯ ಕರದಿಮ್ಮನದಿ ಸಿಲುಕಿದಂಗೆಕಮ್ಮಗೋಲನ ಬಾಣಂಗಳುಮ್ಮಳಿ ನೋಯಿಸುತಿವೆಸುಮ್ಮನೆ ಬಾಹೋದು ಸುಲಭವೆ ಹೇ ಕಿತವಾ2

ಮಧುಕುಂಜವನದಲ್ಲಿ ಮಧುವೈರಿ ಕೊಳಲನೂದಲುಮಧುರ ನಿಸ್ವನ ಕೇಳಿ ಮದಿರಾಕ್ಷಿಯರೆಲ್ಲ ಧಾಮದ ಧ್ಯಾನವ ಬಿಟ್ಟು ಮೃಗಮದಗಂಪವಿಡಿದೈದಿ ಮದನನಯ್ಯನ ಕಾಣುತ ಶ್ರೀ ಹರಿಯಮುದವೇರಿ ತಲೆಬಾಗಿ ಮೇದಿನಿ ನಿಟ್ಟಿಸಲಾಗಮೃದುವಾಕ್ಯದೊಳೆಮ್ಮಪ್ಪಿ ಅಧರಾಮೃತ ಭೋಜನಕ್ಕೊದಗುವ ಸತತ ಸನ್ನದ್ಧ ನಮ್ಮನಗಲಿ ಕಲ್ಲೆದೆಯಾದನೆಂತೋ ಕೃಪಾಳು ಹೇ ಕಿತವಾ 3

ವಜ್ರಾಂಕುಶ ಧ್ವಜಾಂಕಿತ ಹೆಜ್ಜೆಯನ್ನೇ ತಿಳಿದ ನಮ್ಮಬ್ಜಾಕ್ಷಿಯರೊಡನೆ ರತಿಕಜ್ಜದುಪವನದಲ್ಲಿನಿರ್ಜನರೋತ್ತಂಸರೊಡನೆ ಮಜ್ಜನ ಕ್ರೀಡೆಯಾಡುವ ಸಾಯುಜ್ಯ ಸುಖವತ್ತಲಿಪ್ಪುದೂ ಶ್ರೀ ಹರಿಯಅಬ್ಜಭವ ಮುನಿಜನ ಪೂಜ್ಯನಗಲಿದ ಮ್ಯಾಲೆನಿರ್ಜೀವಿಗಳಾಗಿ ಕಣ್ಣ ಕಜ್ಜಲ ಕಲಕಿಕೊಂಡುಲಜ್ಜೆಗೆಟ್ಟು ತನುಲತೆ ಜರ್ಝರಿತದಿ ಜೀವಿಸೆವಜ್ಜರೆದೆಯಲ್ಲವೆ ನಮ್ಮದು ಹೇ ಕಿತವಾ 4

ಕತ್ತೂರಿಯ ಬಟ್ಟನಿಟ್ಟು ಮುತ್ತಿನ ಜೊಲ್ಲೆದುರುಬಿಲಿಕಸ್ತೂರಿ ತಿಲಕ ಚಲತ್ಕುಂಡಲವೆಳಗುವೃತ್ತವದನದಿ ಮಂದಸ್ಮಿತ ತಿಂಗಳಿಂದಲೆಮ್ಮಹೃತ್ತಾಪ ಪರಿಹರಿಸುವ ಶ್ರೀಹರಿಯಮತ್ತೆ ವಕ್ಷದ ಶ್ರೀವತ್ಸ ಕೌಸ್ತುಭ ವೈಜಯಂತಿ ಮಾಲೆಶ್ರೀ ತುಲಸಿ ಘಮಘಮಿಸುತ್ತಲಿಹ ವನಮಾಲೆರತುನ ಕಂಕಣ ಭುಜಕೀರ್ತಿಯಿಂದೊಪ್ಪುವ ಪುರುಷೋತ್ತಮನ್ನ ಬಣ್ಣಿಪರುಂಟೇ ಹೇ ಕಿತವಾ 5

ಉತ್ಪಲ ಶ್ಯಾಮಲ ಮುದವೆತ್ತ ಬಾವನ್ನವದೀಡಿಅತ್ಯಮಲ ಪೊನ್ನಂಬರ ಸುತ್ತಿದಮತ್ತಾ ನೂಪುರ ಝಣತ್ಕಾರದಿ ಮಿಂಚಿಯೆಮ್ಮಚಿತ್ತಶಿಖಿಗೆ ಪೀಯೂಷಸಿಕ್ತ ಮೇಘದಂತೆ ಒಪ್ಪುವ ಶ್ರೀಹರಿಯಹೆತ್ತ ತಾಯಿ ಆಪ್ತ ಬಂಧು ಗೋತ್ರ ಗತಿ ನೀನೆ ನಮ್ಮ ಚಿತ್ತವೆಂದು ನಂಬಿ ತನ್ನ ಹತ್ತಿಲಿ ಸಾರಿದವರಒತ್ತಿ ತಾಂ ರಥವನೇರಿ ಸತ್ವರ ಬರುವೆನೆಂದುಮತ್ತಕ್ರೂರನೊಡನೈದಿದ ಹೇ ಕಿತವಾ 6

ಲಕ್ಷುಮಿರಮಣನವ ಸೂಕ್ಷುಮ ಗೊಲ್ಲತೇರಾವುಕುಕ್ಷಿಯೊಳು ಬೊಮ್ಮಾಂಡವವಗೆ ಮಕ್ಷಿಕಗಳಂತಿಪ್ಪೆವುಮೋಕ್ಷದರಸನು ಅವ ಗೋಕ್ಷೀರದಿ ತೃಪ್ತರಾವುಲಕ್ಷಿಸುವದೆಂತೋ ಎಮ್ಮನು ಶ್ರೀ ಹರಿಯುರಕ್ಷಿಸಲುದಿಸಿ ಜನರಕ್ಷಣೆಗೆ ಪಾಲÉ್ಬಣ್ಣೆಯಭಕ್ಷಿಸಿ ನಿರುತ ನಮ್ಮ ಅಕ್ಷಿಗೆ ಹಬ್ಬವನುಣಿಸಿಈ ಕ್ಷೋಣಿ ಚರಾಚರ ದೀಕ್ಷಿಗೆ ನರರ ಸಾಮ್ಯವಕ್ಷ(ಮ)ಣರಾದೆವೊ ಮೂರ್ಖರೋ ಹೇ ಕಿತವಾ 7

ಹಿಂದೆ ಮಾಡಿದ ಸದ್ಧರ್ಮದಿಂದ ಮಧುರಾ ನಗರದಇಂದೀವರಾಕ್ಷಿಯರಾನಂದ ಸಿಂಧುವಿಗುದಿತ ಪೂರ್ಣಚಂದ್ರನಂತೊಪ್ಪುವ ಸಿರಿ ಮಂದರೋದ್ಧರನಂಘ್ರಿಯಪೊಂದುವ ಭಾಗ್ಯಕ್ಕೆಣೆ ಉಂಟೆ ಶ್ರೀಹರಿಯಅಂದೆಮ್ಮೊಳು ರಾಸಕ್ರೀಡೆಯಿಂದ ಬಂದಪರಾಧವ-ನೊಂದನೆಣಿಸದೆ ಸಲಹೆಂದು ಬಿನ್ನೈಸಿ ಸಾಷ್ಟಾಂಗದಿಂದವಂದಿಪೆವೋ ಭಕ್ತ ಬಂಧುವಿಗೆ ನಮ್ಮ ಹೃದಯ ಮಂದಿರದೊಳೆಂದೆಂದಿರೆಂದು ಹೇ ಕಿತವಾ 8

ಹೆಂಗಳೇರೊಂದಾಗಿ ಅಂತರಂಗದರಸನಾಡಿದಮಂಗಳಚರಿತೆಯನ್ನು ಸಂಗೀತದಿಂ ಪೊಗಳುತ್ತಕಂಗಳಶ್ರುಗಳೆವುತ್ತ ಇಂಗಿತಜ್ಞ ದೇವ-ನಂಗಸಂಗದ ಸುಖವ ನೆನೆದು ಶ್ರೀಹರಿಯಮಂಗಳ ವೇದಸ್ತೇಯಾರಿ ಶೃಂಗಾರ ಕೂರವ ನಮ್ಮಪೊಂಗಣ್ಣನ ಸೀಳ್ದ ನರಸಿಂಗ ವಟು ಭಾರ್ಗವನೆಅಂಗದ ಪಾರ್ಥ ಕಂಬುತುರಂಗಪ ರಂಗವಿಠಲತುಂಗ ಮಹಿಮ ನಮೋ ಎಂಬೆವೋ ಹೇ ಕಿತವಾ 9
***********