Showing posts with label ವಾಗೀಶತೀರ್ಥರ ನೀ ಭಜಿಸೋ lakumeesha vageesha teertha stutih. Show all posts
Showing posts with label ವಾಗೀಶತೀರ್ಥರ ನೀ ಭಜಿಸೋ lakumeesha vageesha teertha stutih. Show all posts

Saturday, 1 May 2021

ವಾಗೀಶತೀರ್ಥರ ನೀ ಭಜಿಸೋ ankita lakumeesha vageesha teertha stutih

 ರಾಗ : ಕಾಂಬೋಧಿ  ತಾಳ : ಝಂಪೆ 

ವಾಗೀಶತೀರ್ಥರ ನೀ ಭಜಿಸೋ 
ಸಂತತ ಸುಖಿಸೋ  ।। ಪಲ್ಲವಿ ।।

ಭೋಗಾದಿ ಬಿಡಿಸಿ 
ಭಾಗ್ವತರ್ಕೂಡಿಸಿ ।
ಯೋಗಾದಿ ತಿಳಿಸುವ 
ಯೋಗಿವರೇಣ್ಯ ।। ಅ. ಪ ।।

ಶ್ರೀ ಗುರು ಕವೀಂದ್ರರ 
ಕರ ದಿವ್ಯ ಸಂಜಾತ ।
ಜಗದೊಳು ರಾರಾ-
ಜಿಸುವ ಯತಿನಾಥ ।
ಸೊಗಸಾದ ಮಧ್ವರ 
ನಿಗಮವತಾವ್ಹೋದಿ ।
ಹಗರಣ ದುರ್ಮತ 
ವಾದದಿ ಗೆದ್ದಂಥ ।। ಚರಣ ।।

ವ್ಯಾಸರ ರಚಿತ 
ಶ್ರೀ ಬ್ರಹ್ಮಸೂತ್ರವಾ ।
ಭಾಷ್ಯ ಗೀತಾದಿ 
ಸುಧಾ ಪಾಠವಾ ।
ರಾಶಿ ಶಿಷ್ಯರಿಗೆ 
ಬೋಧಿಸಿ । ಶ್ರೀ ಮೂಲ ।
ದಾಶರಥಿಯ ಪದ ತೋಷದಿ
ತುತಿಸಿದ ।। ಚರಣ ।।

ಪದ ವ್ಯಾಖ್ಯಾನಗಳಲ್ಲಿ ಕುಶಲರು ।
ಮುದದಿಂದ ಲಕುಮೀಶನ್ನ ಧ್ಯಾನಿಪರು ।
ಕುಧರನ ಜಾತೆಯ ನಡು ಗಡ್ಡೆಯಲಿ ।
ತದಿಯ ಚೈತ್ರ ವದ್ಯ ವೃಂದಾವನ ಸೇರ್ದೆ ।। ಚರಣ ।।
****