Showing posts with label ತೂಗೋಣ ಬನ್ನಿ ರಾಯರ shyamasundara. Show all posts
Showing posts with label ತೂಗೋಣ ಬನ್ನಿ ರಾಯರ shyamasundara. Show all posts

Saturday, 28 December 2019

ತೂಗೋಣ ಬನ್ನಿ ರಾಯರ ankita shyamasundara

ತೂಗೋಣ ಬನ್ನಿ ರಾಯರ | 
ರಾಯರ ತೂಗೋಣ ಬನ್ನಿ ||ಪ||

ಪ್ರಥಮದಿ ಪ್ರಹ್ಲಾದನಾಗಿ | 
ಭಕುತಿಯಿಂದ ಹರಿಯಕೂಗಿ |
ಪಿತಗೆ ಮುಕುತಿ ಪಥವಾ ತೋರಿದಾ ರಾಯರ||1||

ಚಂದ್ರಿಕಾರ್ಯ ಭೂಮಿಯೊಳುಭ 
ಪೂರ್ಣಚಂದ್ರನಂತೆ ಮೆರೆಯುತಿರುವಾ |
ಆನಂಧತೀರ್ಥ ಮತೋದ್ಧಾರರ | 
ರಾಯರ ತೂಗೋಣ ಬನ್ನಿ ||2||

ಬೋಗ ಭಾಗ್ಯವೆಲ್ಲ ತೊರೆದು 
ಯೋಗಿವರ್ಯರಾಗಿ ಮೆರೆದ |
ರಾಘವೇಂದ್ರ ಯತೇಂದ್ರರ | 
ರಾಯರ ತೂಗೋಣ ಬನ್ನಿ ||3||

ಮಂತ್ರಪುರದಿ ನಿಂತು 
ಭಜಿಪರಂತರಂಗವನ್ನೆ ತಿಳಿದು
ಸಂತಸದಿ ಪೂರ್ಣಗೊಳಿಪ 
ರಾಯರ ತೂಗೋಣಬನ್ನಿ ||4||

ನಾಮಸ್ಮರಣಿ ಮಾತ್ರದಿಂದ 
ಕಾಮಿತಾಥ್ವರ್ಥವನ್ನೆ ಕೊಡುವ |
ಶಾಮಸುಂದರ ಹರಿಗೆ ಪ್ರಿಯರ | 
ರಾಯರ ತೂಗೋಣ||5||
***


ತೂಗೋಣ ಬನ್ನಿ ರಾಯರ | ತೂಗೋಣ ಬನ್ನಿ ||ಪ||

ಪ್ರಥಮ ಪ್ರಹ್ಲಾದನಾಗಿ | ಭಕುತಿಯಿಂದ ಹರಿಯ ಕೂಗಿ |

ಪಿತಗೆ ಮುಕುತಿ ಪಥವ ತೋರಿದ | ರಾಯರ ತೂಗೋಣ ಬನ್ನಿ ||1||

ಚಂದ್ರಿಕಾರ್ಯ ಭೂಮಿಯೊಳು | ಪೂರ್ಣಚಂದ್ರನಂತೆ ಮೆರೆಯುತಿರುವಾ |

ಆನಂದತೀರ್ಥ ಮತೋದ್ಧಾರರ | ರಾಯರ ತೂಗೋಣ ಬನ್ನಿ ||2||

ಭೋಗ ಭಾಗ್ಯವೆಲ್ಲ ತೊರೆದು | ಯೋಗಿವರ್ಯರಾಗಿ ಮೆರೆದ |

ರಾಘವೇಂದ್ರ ಯತೀಂದ್ರರ | ರಾಯರ ತೂಗೋಣ ಬನ್ನಿ ||3||

ಮಂತ್ರಪುರದಿ ನಿಂತು ಭಜಿಪರ | ಅಂತರಂಗವನ್ನೆ ತಿಳಿದು |

ಸಂತಸದಿ ಪೂರ್ಣಗೋಳಿಪ | ರಾಯರ ತೂಗೋಣ ಬನ್ನಿ ||4||

ನಾಮಸ್ಮರಣಿ ಮಾತ್ರದಿಂದ | ಕಾಮಿತಾರ್ಥವನ್ನೆ ಕೊಡುವ |

ಶ್ಯಾಮ ಸುಂದರ ಹರಿಗೆ ಪ್ರಿಯರ | ರಾಯರ ತೂಗೋಣ ಬನ್ನಿ ||5||
***

Tūgōṇa banni rāyara | tūgōṇa banni ||pa||

prathama prahlādanāgi | bhakutiyinda hariya kūgi |

pitage mukuti pathava tōrida | rāyara tūgōṇa banni ||1||

candrikārya bhūmiyoḷu | pūrṇacandranante mereyutiruvā |

ānandatīrtha matōd’dhārara | rāyara tūgōṇa banni ||2||

bhōga bhāgyavella toredu | yōgivaryarāgi mereda |

rāghavēndra yatīndrara | rāyara tūgōṇa banni ||3||

mantrapuradi nintu bhajipara | antaraṅgavanne tiḷidu |

santasadi pūrṇagōḷipa | rāyara tūgōṇa banni ||4||

nāmasmaraṇi mātradinda | kāmitārthavanne koḍuva |

śyāma sundara harige priyara | rāyara tūgōṇa banni ||5||
***