ಬಾ ಬಾ ಬಾರೈ ಬಾ ಬಾ ಬಾ ಬಾರೈ ಬಾ
ಬೇಗ ಬಾರೆಂದು ಭಕುತರು ಕರೆಯಲು ಹರಿ || ಪ ||
ಶ್ರೀಸತಿಯಪ್ಪಿಕೊಂಡಿಪ್ಪನೆ ಬಾ
ಶೇಷಶಯನ ಎನ್ನಪ್ಪನೆ ಬಾ || ೧ ||
ಮತ್ಸ್ಯನಾಗಿ ಜಲದೊಳಾಡಿದವನೆ ಬಾ
ಕಚ್ಛಪವತಾರವ ಮಾಳ್ದನೆ ಬಾ || ೨ ||
ಧರೆಗಾಗಿ ಜಲದೊಳಗಿಳಿದನೆ ಬಾ
ಹಿರಣ್ಯಕನುದರವ ಸೀಳ್ದನೆ ಬಾ || ೩ ||
ಶಕ್ರನ ಪೊರೆದ ಶ್ರೀ ವಾಮನನೆ ಬಾ
ವಕ್ರನೃಪಾಲಕುಲ ಶಮನನೆ ಬಾ || ೪ ||
ರಾವಣಾಂತಕ ರಘುರಾಮನೆ ಬಾ
ದೇವಕಿ ನಿಜಸುತ ಪ್ರೇಮನೆ ಬಾ || ೫ ||
ಸತಿಯರ ವ್ರತವ ಕೆಡಿಸಿದನೆ ಬಾ
ಚತುರ ಕಲಿಯನೋಡಿಸಿದನೆ ಬಾ || ೬ ||
ಹಯವದನಾಶ್ರಿತ ಶರಣನೆ ಬಾ
ಪ್ರಿಯಸುರ ಸೇವಿತ ಚರಣನೆ ಬಾ || ೭ ||
***
baa baa baarai baa baa baa baarai baa
bEga baareMdu bhakutaru kareyalu hari || pa ||
shrIsatiyappikoMDippane baa
shEShashayana ennappane baa || 1 ||
matsyanaagi jaladoLaaDidavane baa
kacCapavataarava maaLdane baa || 2 ||
dharegaagi jaladoLagiLidane baa
hiraNyakanudarava sILdane baa || 3 ||
shakrana poreda shrI vaamanane baa
vakranRupaalakula shamanane baa || 4 ||
raavaNaaMtaka raghuraamane baa
dEvaki nijasuta prEmane baa || 5 ||
satiyara vratava keDisidane baa
catura kaliyanODisidane baa || 6 ||
hayavadanaashrita sharaNane baa
priyasura sEvita caraNane baa || 7 ||
***
ಬಾ ಬಾ ಬಾರೈ ಬಾ ಬಾ ಬಾ ಬಾರೈ ಬಾ
ಬೇಗ ಬಾರೆಂದು ಭಕುತರು ಕರೆಯಲು ಹರಿ ಪ.
ಶ್ರೀಸತಿಯಪ್ಪಿಕೊಂಡಿಪ್ಪನೆ ಬಾ
ಶೇಷಶಯನ ಎನ್ನಪ್ಪನೆ ಬಾ 1
ಮತ್ಸ್ಯನಾಗಿ ಜಲದೊಳಾಡಿದವನೆ ಬಾ
ಕಚ್ಛಪವತಾರವ ಮಾಳ್ದನೆ ಬಾ 2
ಧsÀರೆಗಾಗಿ ಜಲದೊಳಗಿಳಿದನೆ ಬಾ
ಹಿರಣ್ಯಕನುದರವ ಸೀಳ್ದನೆ ಬಾ 3
ಶಕ್ರನ ಪೊರೆದ ಶ್ರೀ ವಾಮನನೆ ಬಾ
ವಕ್ರನೃಪಾಲಕುಲಶಮನನೆ ಬಾ 4
ರಾವಣಾಂತಕ ರಘುರಾಮನೆ ಬಾ
ದೇವಕಿ ನಿಜಸುತ ಪ್ರೇಮನೆ ಬಾ 5
ಸತಿಯರ ವ್ರತವ ಕೆಡಿಸಿದನೆ ಬಾ
ಚತುರ ಕಲಿಯನೋಡಿಸಿದನೆ ಬಾ 6
ಹಯವದನಾಶ್ರಿತ ಶರಣನೆ ಬಾ
ಪ್ರಿಯಸುರ ಸೇವಿತ ಚರಣನೆ ಬಾ 7
***