song time at 1.51 minutes
writer - R N Jayagopal
from movie 'Naandi' in 1964
ಉಡುಗೊರೆಯೊಂದ ತಂದ
ಎನ್ನಯ ಮನದಾನಂದ
ಉಡುಗೊರೆಯೊಂದ ತಂದ
ಎನ್ನಯ ಮನದಾನಂದ
ಮನವನು ತಣಿಸಲು ಬಂದ
ಹೊಸಿಲಲಿ ನಗುತಲಿ ನಿಂದ
ನೀನೇ ನನ್ನವಳೆಂದ...
ನೀನೇ ನನ್ನವಳೆಂದ
ಕಿವಿಯಲಿ ಪಿಸುಮಾತಿಂದ
ನೀನೇ ನನ್ನವಳೆಂದ
ಕಿವಿಯಲಿ ಪಿಸುಮಾತಿಂದ
ಮೊಗವೆಂಬ ಅರವಿಂದ
ಕೆಂಪಾಯಿತು ನಾಚಿಕೆಯಿಂದ
|| ಉಡುಗೊರೆಯೊಂದ ತಂದ
ನಿನ್ನಯ ಮನದಾನಂದ
ಮನವನು ತಣಿಸಲು ಬಂದ
ಹೊಸಿಲಲಿ ನಗುತಲಿ ನಿಂದ…||
ಪ್ರೇಮದ ಕಾಣಿಕೆಯೊಂದ
ತಂದಿಹೆ ನಾ ನಿನಗೆಂದ
ಪ್ರೇಮದ ಕಾಣಿಕೆಯೊಂದ
ತಂದಿಹೆ ನಾ ನಿನಗೆಂದ
ಜಡೆ ಎಳೆದ ಮುದದಿಂದ
ಬಿಡು ಎನೆ ನಾ ಬಿಡೆನೆಂದ
|| ಉಡುಗೊರೆಯೊಂದ ತಂದ
ನಿನ್ನಯ ಮನದಾನಂದ
ಮನವನು ತಣಿಸಲು ಬಂದ
ಹೊಸಿಲಲಿ ನಗುತಲಿ ನಿಂದ…||
ಉಂ ಉಂ ಉಂ ಉಂ ಉಂ
ಉಂ ಉಂ ಉಂ ಹಹ್ಹಹ
***