..
kruti by ವರದೇಶ ವಿಠಲರು varadesha vittala dasaru
ವರದೇಶ ವಿಠಲರಾಯಾ ಗುರು
ವರದೇಂದ್ರರ ಪ್ರೀಯಾ
ಮರಿಯದೆ ನೀಯನ್ನ ಕೈಯ್ಯಾ
ಪಿಡಿದು ಪೊರೆಯಬೇಕು ಜೀಯಾ ಪ
ಒಂದು ದಿನ ನಿನ್ನ ಮನದಲಿ
ನೊಂದು ನುಡಿದ ಯನ್ನ
ಮಂದನ್ನ ಮಾಡಿದ್ಯೊ ಇನ್ನ ನಿನ್ನ
ಸುಂದರ ಮೂರುತಿ ತೋರೆಲೋಘನ್ನ 1
ಏನು ತಿಳಿಯೆ ಮೂಢ ತನದಿ ನಾ
ಹೀನಭವದಿಗಾಢ
ಮಾನವ ಜನರೊಳಕ್ರೀಡಾ -
ಪರನಾ ಜ್ಞಾನಕಳಿಯೊ ಪ್ರೌಢ 2
ಹರಿಪರಜನಸಂಗ ಮಾಡದೆ
ನರರೊಳಗಾದೆನು ಮಂಗ
ಸುರವರ ಸಹಿತಾಂತ ರಂಗ -
ದೊಳು ವರದೇಶ ವಿಠ್ಠಲರಂಗ 3
***