ನರಹರಿಯ ಹೊರತಿನ್ನಾರಿಗಿಲ್ಲವೋ ಸ್ವತಂತ್ರದಾವುದು ಇಲ್ಲವೊ
ನರರಿಗೆ ಸ್ವತಂತ್ರ ಪ
ಗಳಿಸಿದ ಧನವು ನಳಿನಾಕ್ಷೀಯರಿಗೀವ
ಸೆಳೆದು ವಯ್ಯುವಾಗುಳೀವರಿಲ್ಲವೋ 1
ನಾನು ನನ್ನದೆಂಬುವ ಈ ದೇಹವು
ಹಾನಿಯಾಗುವಾಗದನ್ನುಳಿಸುವ ಸ್ವತಂತ್ರ 2
ಜೀವವು ಕಾಯವ ತ್ಯಜಿಸಿ ಪೋಗುವಾ
ಗಾವಾಪ್ತರಿಗವನ್ನುಳಿಸಿಕೊಳ್ಲುವ ಸ್ವತಂತ್ರ 3
ಮಾಡಿದ ಧರ್ಮಾಕರ್ಮವೆಜೀವನ
ಕೂಡ ಮಂತ್ರ ಸಂಗಡ ಬಾಹುದು 4
ದೋಷ ರಹಿತ ಹನುಮೇಶವಿಠಲನೇ
ಈಶನೆಂದು ನಿಜ ದಾಸನಾಗೋ ಸ್ವತಂತ್ರ 5
****