ರಾತ್ರಿ ಮಲಗುವಾಗ ಅನ್ನುವ ಹಾಡುಗಳು
ಅಚ್ಯುತಗೆ ಶರಣೆಂದು ಇಟ್ಟನೆ ಎಡದಮಗ್ಗಲು|
ಚಿತ್ತ ಹೋಗಿ ಅಚ್ಯುತನಿಗೆ ಸೇರಲಿ|
ಮನಸ್ಸು ಹೋಗಿ ಮಾಧವನಿಗೆ ಸೇರಲಿ|
ಅಂಗ ಹೋಗಿ ರಂಗ ನಿಗೆ ಸೇರಲಿ|
ರಂಗ ರಂಗ ಅಂಗಳಕ್ಕೆ ಕಾವಲಿರು|
ಎಡದಲಿ ಶ್ರೀ ಕೃಷ್ಣ ದೇವರು|
ಬಲ ಭಾಗದಲಿ ಬಲರಾಮ ದೇವರು|
ಅಂಗುಳಕ್ಕೆ ರಂಗನ ಕಾವಲು|
ಅಡಿಗೆ ಮನೆಗೆ ಭೀಮಸೇನ ದೇವರ ಕಾವಲು|
ದೇವರ ಮನೆಗೆ ಸರಸ್ವತಿ ದೇವಿಯರ ಕಾವಲು|
ಉಗ್ರಾಣದ ಮನೆಗೆ ಲಕ್ಷ್ಮೀದೇವಿ ಯರ ಕಾವಲು|
ಅಂಗಳಕ್ಕೆ ತುಳಸಮ್ಮ ದೇವರ ಕಾವಲು|
ಬಚ್ಚಲು ಮನೆಗೆ ಬಲರಾಮ ದೇವರು ಕಾವಲು|
ಕೊಟ್ಟಿಗೆಗೆ ಕಾಲಭೈರವನ ಕಾವಲು|
ಹೊಸಲಿಗೆ ಸುಗ್ರೀವನ ಕಾವಲು|
ಬೀದಿಗೆ ಪರಶುರಾಮ ದೇವರ ಕಾವಲು|
ಇಷ್ಟು ತಪ್ಪಿ ಒಳಗೆ ಬಂದಂತ ಜಾರ ಚೋರನ ತಲೆ ಸಹಸ್ರ ಹೋಳಾಗಲಿ|
ಉಣ್ಣೋದು ಶ್ರೀ ಹರಿಯ ನೈವೇದ್ಯ|
ಉಡೋದು ನಿಮ್ಮ ನಿರ್ಮಾಲ್ಯ|
ನೋಡೋದು ನಿಮ್ಮ ಮೂರ್ತಿ|
ಕೇಳೋದು ನಿಮ್ಮ ಕೀರ್ತಿ|
ಮಾತಾಡೋದು ಶ್ರವಣ|
ಸುತ್ತಾಡೊದು ಭೂ ಪ್ರದಕ್ಷಿಣೆ|
ಮಲಗೋದು ನಮಸ್ಕಾರ🙏 ಗಳು.||
***