Showing posts with label ಕಾಪಾಡೆಲೆ ಸಕಲಾಪಧ್ಹಾರಿಣಿ ಕೊಲ್ಲಾಪುರಗತ ಕಮಲೆ gopala vittala KAAPAADALE SAKALAAPADHAARINI KOLHAPURAGATA KAMALE. Show all posts
Showing posts with label ಕಾಪಾಡೆಲೆ ಸಕಲಾಪಧ್ಹಾರಿಣಿ ಕೊಲ್ಲಾಪುರಗತ ಕಮಲೆ gopala vittala KAAPAADALE SAKALAAPADHAARINI KOLHAPURAGATA KAMALE. Show all posts

Friday, 17 December 2021

ಕಾಪಾಡೆಲೆ ಸಕಲಾಪಧ್ಹಾರಿಣಿ ಕೊಲ್ಲಾಪುರಗತ ಕಮಲೆ ankita gopala vittala KAAPAADALE SAKALAAPADHAARINI KOLHAPURAGATA KAMALE

 ರಾಗ ಆರಭಿ   ಆದಿತಾಳ 

Audio by Mrs. Nandini Sripad

ಶ್ರೀ ಗೋಪಾಲದಾಸರ ರಚನೆ

ಕಾಪಾಡೆಲೆ ಸಕಲಾಪದ್ಹಾರಿಣಿ । ಕೊಲ್ಹಾಪುರಗತ ಕಮಲೆ ॥ ಪ ॥
ಈ ಪರಿ ಹರಿಯ ದಯಾಪಾತ್ರಳೆ ಶುಭ
ನೂಪುರಾದಿ ಸುಕಲಾಪೆ ಶೋಭೆ ಭ್ರೂ-
ಚಾಪ ಚಲನದಿಂದ ಪವಮಾನನಿ -
ಗೆ ಪದದೇ ಭವತಾಪಗಳಳಿದೆ ॥ ಅ.ಪ ॥

ಇಂದೀವರವರಮಂದಿರನಂದನೆ । ಚಂದ್ರಜಯಿಪ ವದನೆ ।
ವೃಂದಾರಕ ಮುನಿವೃಂದ ವಂದಿತ ಪದಯುಗಳೆ ಕುಂದಕುಟ್ಮಲರದನೆ ಮದನೆ ಮು।ಕುಂದ ಹೃದಯಸದನೆ ॥
ಇಂದ್ರನೀಲನಿಭ ಸುಂದರತನು ಗುಣ -
ಸಾಂದ್ರ ಇಂದುಮುಖಿ ಮಂದರಧರ ಗೋ -
ವಿಂದ ಬಂಧುನುತೆ ವೃಂದಾವನಪತಿ
ನಂದನಂದನನಾನಂದಿನಿ ವಂದಿತೆ ॥ 1 ॥

ಕನ್ಯಾಮಣಿ ಜಗನ್ಮಾನ್ಯಾಮೃತ ಪಾ।ವನ್ನಾಧರ ಬಿಂಬೆ ।
ಘನ್ನ ಕಲಶ ಕುಚವನ್ನು ಧರಿಪ ಕಟಿ
ಸಣ್ಣ ಘನನಿತಂಬೆ ಅಂಬೆ । ಚಿನ್ನಪುತ್ಥಳಿ ಗೊಂಬೆ ॥
ಅನ್ನವಸನ ಧನಧಾನ್ಯಕಾಗಿ ಪರ -
ರನ್ನು ಯಾಚಿಸಿ ಬಲು ಖಿನ್ನನಾಗುತಲಿ
ನಿನ್ನನು ಮರೆದೆನು ಎನ್ನವಗುಣಗ -
ಳನ್ನು ಎಣಿಸದಿರು ಮನ್ನಿಸು ಬಿನ್ನಪ ॥ 2 ॥

ಲೋಲಕುಂಡಲ ಕಪೋಲ ಶೋಭಿತ । ಕೀಲಾಲಜಾತಪಾಣಿ ।
ಕೇಳಿಲಿ ಯಮುನಾಕೂಲದಿ ಹರಿ ದು -
ಕೂಲಚೋರನ ರಾಣಿ ।ಜಾಣೆ ಸುಶೀಲೆ ಜಗತ್ರಾಣೆ ॥
ಕಾಳಕೂಟಸಮ ಕೀಳುವಿಷಯದಲಿ
ಬೀಳುವುದೆನ್ನ ಮನ ಕೀಳಿಸಿ ಶ್ರೀಗೋ -
ಪಾಲವಿಠಲ ನನುಗಾಲ ಸೇವಿಪಂತೆ
ಶೀಲವೀಯೆಯೆಂದು ಕೇಳುವೆ ಲಾಲಿಸೆ ॥ 3 ॥
***

Kapadele sakalapadhharini kollapuragata kamale || pa.||

I pari hariya dayapatrale subanupuradi sukalape sobite
Bru-capa calanadinda pavamanani-ge padade bavatapagalalidu || a.pa. ||

Indivaramandiranandini chandrajayipa vadanebrundaraka munivandita
Padayuge kundakutmalaradane madane mukunda hrudayasadane indranilanaba
Sundaratanu guna-sandra indumuki mandaradharago-vinda bandhunute
Brundavana pati nandanandanananamdini vamdite || 1 ||

Kanyamani jaganmanyamruta pavannadhara bimbegana kalasa kucavannu
Dharipa katisanna gananitambe ambe cinnaputthali bombe^^annavasana
Dhanadhanyakagi para-ranna yacisi balu kinnanagutali
Ninnanu maredenu ennavagunaga-Lannu enisadiru mannisu binnapa || 2 ||

Lolakundala kapola sobita kilalajatapanikelili
Yamunakuladi haridu-kulacorana rani jane
Susrone jagatranekalakutasama kilu vishayadalibiluvudenna
Mana kilisi srigopalavithalananugala sevipantesilaviyeyendu keluve lalise || 3 ||
***

ಕಾಪಾಡೆಲೆ ಸಕಲಾಪಧ್ಹಾರಿಣಿ ಕೊಲ್ಲಾಪುರಗತ ಕಮಲೆ || ಪ.||

ಈ ಪರಿ ಹರಿಯ ದಯಾಪಾತ್ರಳೆ ಶುಭನೂಪುರಾದಿ ಸುಕಲಾಪೆ ಶೋಭಿತೆ
ಭ್ರೂ-ಚಾಪ ಚಲನದಿಂದ ಪವಮಾನನಿ-ಗೆ ಪದದೇ ಭವತಾಪಗಳಳಿದು || ಅ.ಪ. ||

ಇಂದೀವರಮಂದಿರನಂದಿನಿ ಚಂದ್ರಜಯಿಪ ವದನೆಬೃಂದಾರಕ ಮುನಿವಂದಿತ
ಪದಯುಗೆ ಕುಂದಕುಟ್ಮಲರದನೆ ಮದನೆ ಮುಕುಂದ ಹೃದಯಸದನೆ ಇಂದ್ರನೀಲನಭ
ಸುಂದರತನು ಗುಣ-ಸಾಂದ್ರ ಇಂದುಮುಖಿ ಮಂದರಧರಗೋ-ವಿಂದ ಬಂಧುನುತೆ
ಬೃಂದಾವನಪತಿನಂದನಂದನನಾನಂದಿನಿ ವಂದಿತೆ || 1 ||

ಕನ್ಯಾಮಣಿ ಜಗನ್ಮಾನ್ಯಾಮೃತ ಪಾವನ್ನಾಧರ ಬಿಂಬೆಘನ ಕಲಶ ಕುಚವನ್ನು
ಧರಿಪ ಕಟಿಸಣ್ಣ ಘನನಿತಂಬೆ ಅಂಬೆ ಚಿನ್ನಪುತ್ಥಳಿ ಬೊಂಬೆಅನ್ನವಸನ
ಧನಧಾನ್ಯಕಾಗಿ ಪರ-ರನ್ನ ಯಾಚಿಸಿ ಬಲು ಖಿನ್ನನಾಗುತಲಿ
ನಿನ್ನನು ಮರೆದೆನು ಎನ್ನವಗುಣಗ-ಳನ್ನು ಎಣಿಸದಿರು ಮನ್ನಿಸು ಬಿನ್ನಪ || 2 ||

ಲೋಲಕುಂಡಲ ಕಪೋಲ ಶೋಭಿತ ಕೀಲಾಲಜಾತಪಾಣಿಕೇಳಿಲಿ
ಯಮುನಾಕೂಲದಿ ಹರಿದು-ಕೂಲಚೋರನ ರಾಣಿ ಜಾಣೆ
ಶುಶ್ರೋಣೆ ಜಗತ್ರಾಣೆಕಾಳಕೂಟಸಮ ಕೀಳು ವಿಷಯದಲಿಬೀಳುವುದೆನ್ನ
ಮನ ಕೀಳಿಸಿ ಶ್ರೀಗೋಪಾಲವಿಠಲನನುಗಾಲ ಸೇವಿಪಂತೆಶೀಲವೀಯೆಯೆಂದು ಕೇಳುವೆ ಲಾಲಿಸೆ || 3 ||
*******