Showing posts with label ನಾರಾಯಣೆನು ಮನವೆ ನರಹರಿಯ ನೆನೆ ಮನವೆಘೋರ ದುರಿತಗಳ ಬೆದರಿಸಿ ಓಡಿಸುವುದು neleyadikeshava. Show all posts
Showing posts with label ನಾರಾಯಣೆನು ಮನವೆ ನರಹರಿಯ ನೆನೆ ಮನವೆಘೋರ ದುರಿತಗಳ ಬೆದರಿಸಿ ಓಡಿಸುವುದು neleyadikeshava. Show all posts

Wednesday, 1 September 2021

ನಾರಾಯಣೆನು ಮನವೆ ನರಹರಿಯ ನೆನೆ ಮನವೆಘೋರ ದುರಿತಗಳ ಬೆದರಿಸಿ ಓಡಿಸುವುದು ankita neleyadikeshava

 ..

ನಾರಾಯಣೆನು ಮನವೆ ನರಹರಿಯ ನೆನೆ ಮನವೆಘೋರ ದುರಿತಗಳ ಬೆದರಿಸಿ ಓಡಿಸುವುದು ಪ


ಗುರುವಿನುಪದೇಶದಲ್ಲಿ ಪರಮ ರಹಸ್ಯವನರಿತುಮರೆಯದಲೆ ಅಲ್ಲಿ ಅಧಿಕಾರಿಯಾಗೊತಿರುಮಂತ್ರವನು ಜಪಿಸು ತಿರುಲಾಂಛನವ ಧರಿಸುಪರಮ ವೈಷ್ಣವರ ಪಂಕ್ತಿಯ ಸೇರು ಮನವೆ 1


ಕುಲಛಲಂಗಳ ಬಿಟ್ಟು ಬಲು ಪಾಶಗಳ ತರಿದುಹಲವು ಕೊಂಬೆಗೆ ನೀನು ಹರಿದಾಡದೆಸುಲಭದಲಿ ಶ್ರೀಪಾದತೀರ್ಥ ಪ್ರಸಾದವನುನೆಲೆಗೊಳಿಸಿ ಆತ್ಮನಿಗೆ ನಿತ್ಯ ಸುಖಿಯಾಗೋ 2


ಶೇಷವಿಶೇಷವೆಂದೆನಿಪ ಪರಮಾರ್ಥದೊಳುಮೀಸಲಳಿಯದ ಪಾಪರಹಿತನಾಗುವಾಸಾಧಿಪತಿ ಕಾಗಿನೆಲೆಯಾದಿಕೇಶವನದಾಸಾನುದಾಸರಿಗೆ ದಾಸ ನೀನಾಗೊ 3

****