Showing posts with label ಹರಿಸರ್ವೋತ್ತಮ ಹರಿಪರ prasannavenkata ankita suladi ಹರಿಸರ್ವೋತ್ತಮತ್ವ ಸುಳಾದಿ HARISARVOTTAMA HARIPARA HARISARVOTTAMATVA SULADI. Show all posts
Showing posts with label ಹರಿಸರ್ವೋತ್ತಮ ಹರಿಪರ prasannavenkata ankita suladi ಹರಿಸರ್ವೋತ್ತಮತ್ವ ಸುಳಾದಿ HARISARVOTTAMA HARIPARA HARISARVOTTAMATVA SULADI. Show all posts

Tuesday 1 December 2020

ಹರಿಸರ್ವೋತ್ತಮ ಹರಿಪರ prasannavenkata ankita suladi ಹರಿಸರ್ವೋತ್ತಮತ್ವ ಸುಳಾದಿ HARISARVOTTAMA HARIPARA HARISARVOTTAMATVA SULADI

Audio by Mrs. Nandini Sripad


 ಶ್ರೀ ಪ್ರಸನ್ನವೆಂಕಟ ದಾಸಾರ್ಯ ವಿರಚಿತ  ಹರಿಸರ್ವೋತ್ತಮತ್ವ ಸುಳಾದಿ 

( ಈ ಸುಳಾದಿಯಲ್ಲಿ ದಾಸಾರ್ಯರು ಹರಿಸರ್ವೋತ್ತಮ ಸಿದ್ಧಾಂತವನ್ನು ಸಾರಿದ್ದಾರೆ. ಲೋಕದಲ್ಲಿ ಶ್ರೀಹರಿ ಸರ್ವೋತ್ತಮ ಎಂದು ಉಪಾಸಿಸುವರೇ ನಿಜವಾಗಿ ವಂದ್ಯರು , ಉಪೇಕ್ಷಿಸುವವರು ನಿಂದ್ಯರು.  ಶ್ರೀಹರಿಯು ಅನಂತನಾಮಿ , ಅಪ್ರಾಕೃತ , ತ್ರಿಗುಣಾತೀತ , ಅವನ ಗುಣಗಳು ಅನಂತ ಅಗಣಿತ ಎಂದು ಹೇಳುವ ಮೂಲಕ ಶಾಸ್ತ್ರದ ಮಥಿತಾರ್ಥವನ್ನೇ ಇಲ್ಲಿ  ವಿಶದೀಕರಿಸಿದ್ದಾರೆ. ) 


 ರಾಗ ಹಿಂದೋಳ 


 ಧ್ರುವತಾಳ 


ಹರಿಸರ್ವೋತ್ತಮ ಹರಿಪರಬ್ರಹ್ಮ

ಹರಿಸಮರಾರಿಲ್ಲ ಹಿರಿಯರುಂಟೆಲ್ಲಿ

ಹರಿ ಪಟ್ಟಗಟ್ಟಿದಮರರು ವಂದಿತರು

ಹರಿಯನಾದರಿದಸುರರು ನಿಂದಿತರು

ಹರಿಯೊಲಿದಿರುವರ್ಭಕರೆ ಕೀರ್ತಿಯುತರು

ಹರಿಯನರ್ಚಿಸದ ವೃದ್ಧರೆ ಬಹಿಷ್ಕೃತರು

ಹರಿಯವೇನ ನಾಮವು ಅರೂಪ ಗುಣದೂರ ಶ್ರೀ -

ಹರಿ ಪ್ರಸನ್ವೆಂಕಟ ವರದ ಉದಾರ ॥ 1 ॥ 


 ಮಠ್ಯತಾಳ 


ಅಯ್ಯನ ನಾಮವೆಂದರೆ ಅನಂತ ನಾಮವು

ಸ್ವನಾಮವಿಲ್ಲ ಹೀಗಲ್ಲ

ಅರೂಪವೆಂದರೆ ಪ್ರಾಕೃತರೂಪ

ಸ್ವರೂಪವಿಲ್ಲ ಹೀಗಲ್ಲ

ಗುಣರಹಿತೆಂಬುದು ತ್ರಿಗುಣಾತೀತಾ

ಗಣಿತ ಗುಣಗಳಿಲ್ಲ ಹೀಗಲ್ಲ

ನಿರ್ಗುಣ ಅರೂಪನಾಮನೆಂಬರು

ಸ್ವರ್ಗಜವರದ ಪ್ರಸನ್ವೆಂಕಟೇಶಗೆ ನಾಮವೆಂಬುದು ಹಾಗಲ್ಲ ॥ 2 ॥ 


 ತ್ರಿಪುಟತಾಳ 


ನಾಮವೀಪರಿ ನಾಮ

ನರರಿಗುತ್ತಮರು ನೃಪರು ಮುನಿಸುರರು ತ -

ನ್ಮರುತ್ತೆರೆದೆರೆದಿರುವ ನಾಮ

ಎರಡು ಸಾಸಿರ ರಸನರು ಮೃಡಗರುಡರು

ಸ್ವರೂಪಾನುಸಾರ ನಿತ್ಯ ಸ್ಮರಿಪ ಶ್ರೀನಾಮ

ಎರಡೀರೆವದನನೀರೆರಡು ಶ್ರುತಿಯ ನಾಮ

ಸಿರಿಯಳುಚ್ಚರಿಸುವನಂತ ನಾಮ

 ಪ್ರಸನ್ನವೆಂಕಟ ವರದನುದರದಿಡಿ

ಕಿರಿದಿದ್ದಾರರಿಯದ ಗುಹ್ಯನಾಮ ॥ 3 ॥ 


 ರೂಪಕತಾಳ 


ಒಂದು ಬ್ರಹ್ಮಾಂಡ ತುಂಬೋ ದೇವ ರೂಪ ಮ -

ತ್ತೊಂದು ರೂಪದ ರೋಮರಂಧ್ರದೊಳಜಾಂಡ

ಒಂದಲ್ಲ ನೂರಲ್ಲ ಹೊಂದಿದುವನಂತವು

ಒಂದೊಂದಜಾಂಡದೊಳಗ್ಹೊರಗ ಪರಿಪೂರ್ಣ

ಅಂದು ಏಕಾರ್ಣವದೊಳೊಂದು ವಟಪತ್ರದಿ ಆ

ನಂದನರಸಿಯ ಮೊಲೆಯನೊಂದು ಚಪ್ಪರಿದುಂಡು

ಒಂದರೊಳು ಕರವಿಟ್ಟ ಪ್ರಸನ್ವೆಂಕಟ ರೂಪ ॥ 4 ॥ 


 ಝಂಪೆತಾಳ 


ಕರ ಚರಣ ನಖ ಕೇಶ ಶಿರ ಚಕ್ಷು ಶ್ರವಣಾದಿ

ಸರ್ವಾವಯವಗಳಿಂದ ಸರ್ವರೂಪಗಳಿಂದ

ಸಿರಿಯರಸ ಸ್ವಗತ ಭೇದವಿದೂರ ಹೀ -

ಗರಿಯದೆ ಐದು ಭೇದವಸತ್ಯವೆಂಬ ಪಾ -

ಮರಗೇವೆ ನಿತ್ಯಾಂಧ ನರಕವೆ ಸ್ಥಿರವಯ್ಯ

ಸಿರಿ ಪ್ರಸನ್ನವೆಂಕಟ ವರದಾನಂತಾಭಿದಾ -

ವರ ಬಿಂಬೋತ್ತಮನಾಗಿ ಪೊರೆವ ಪ್ರತಿಬಿಂಬ

ಸಿರಿ ಅರಸ ಭೇದವಿದೂರ ॥ 5 ॥ 


 ಜತೆ 


ಹರಿಯವೇನ ನಾಮವು ಅರೂಪ ಗುಣದೂರ ಶ್ರೀ -

ಹರಿ ಪ್ರಸನ್ವೆಂಕಟ ವರದ ಉದಾರ ॥

********