ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವಚನದಲಿ ನಂಬನು ನರಭಾವ ಅವರೊಳು ಕಾಂಬನು ಕರಣ ತ್ರಯದಲಿ ಶುಂಭನು ಗುರು ಭಕ್ತ ನೆನಿಸದರೇನು ಮಾ 1
ಸರ್ವರೊಳು ಹರಿ ನೋಡದೇ ಗರ್ವದ ಗುಣಗಳೀಸಾಡದೆ ನಿಜ | ದರ್ವಿನೊಳು ಮನ ಕೂಡದೇ | ಭಾಗವತರೆನಿಸಿದರೇನು ಮಾ 2
ವಾಸನಿಯ ಬಲ ಕಡಿಯಾ ದೇವೆ | ಆಸೆಯಲಿ ಮನ ಜಡಿಯದೆ ನಿಜ | ದ್ಯಾಸದಂಡವ ಪಿಡಿಯದೆ ಸ | ನ್ಯಾಸಿಯೆನಿಸಿದರೇನು ಮಾ 3
ನುಡಿಯ ಬೀರುತ ಸಂತರಾಜನ | ರೊಡನೆ ಹಾಕುತ ಸಿಂತರಾ ತಮ್ಮ | ನಡತಿ ನೋಡಲು ಭ್ರಾಂತರಾ ತಾ | ಸಂತ ನೆನಿಸಿದರೇನು ಮಾ 4
ತಂದೆ ಮಹಿಪತಿ ಪಾದವಾ ಬೆರೆ | ಭವ | ಬಂಧ ಮಾಡದೇ ವಾತಾ | ಬಂದ ಜನಮಕಿದೇನು ಮಾ 5
****