ಆನಂದರತ್ನ ಪರಮಪ್ರಿಯರೆಂಬೊ ಬಿರುದುಳ್ಳ
ಶ್ರೀ ಗುರುವರರಾಯ ಪ.
ಏನೆಂಬೆ ನಾ ನಿಮ್ಮ ಕರುಣಕ್ಕೆ ಎಣೆಗಾಣೆ ಶ್ರೀ ಗುರುವರರಾಯ ಅ.ಪ.
ಭೂಸುರ ಜನ್ಮದಲಿ ದಾಸತ್ವದಿಂದ ಮೆರೆವೊ |
ಶ್ರೀ ಗುರುವರರಾಯ
ಸಾಸಿರ ಫಣಿ ಪನ್ನಗಶಯನನ ಭಜಿಸುವೊ |
ಶ್ರೀ ಗುರುವರರಾಯ 1
ಶ್ರೀ ತಂದೆ ಮುದ್ದುಮೋಹನವಿಠಲದಾಸ | ಶ್ರೀ ಗುರುವರರಾಯ
ಪ್ರೀತಿಯಿಂದ ಹರಿಯ ಅಂಕಿತ ಕೊಡುವಂಥ |
ಶ್ರೀ ಗುರುವರರಾಯ 2
ಅe್ಞÁನಿಯಾದೆನಗೆ ಸುe್ಞÁನವಿತ್ತು ಕಾಯ್ದೆ |
ಶ್ರೀ ಗುರುವರರಾಯ
ವಿಘ್ನಗಳನೆ ತರಿದು ಪ್ರಾe್ಞÁ ಮೂರುತಿಯ ತೋರೈ |
ಶ್ರೀ ಗುರುವರರಾಯ 3
ಮಂದಜ್ಞರಿಗೆ e್ಞÁನ ತಂದಿತ್ತು ರಕ್ಷಿಪ | ಶ್ರೀ ಗುರುವರರಾಯ
ಬಂದೆನು ನಿಮ್ಮ ಪಾದದ್ವಂದ್ವವೇ ಗತಿಯೆಂದು |
ಶ್ರೀ ಗುರುವರರಾಯ 4
ಅರಿಯೆನು ಅನ್ಯರ ಪರಿಹರಿಸಿ ಭವ | ಶ್ರೀ ಗುರುವರರಾಯ
ತರಳನ ಕಾಯ್ದ ನರಹರಿಯ ಭಜಿಸುವಂಥ |
ಶ್ರೀ ಗುರುವರರಾಯ 5
ಅಪರಾಧವೆಣಿಸದೆ ಸುಪಥಮಾರ್ಗವ ತೋರೈ |
ಶ್ರೀ ಗುರುವರರಾಯ
ಗುಪಿತ ಮಹಿಮ ನಿನ್ನ ಜಗದೊಳರಿವರ್ಯಾರು |
ಶ್ರೀ ಗುರುವರರಾಯ 6
ಅರಿಯಬಲ್ಲೆನೆ ನಿಮ್ಮ ಅಗಣಿತ ಮಹಿಮೆಯ |
ಶ್ರೀ ಗುರುವರರಾಯ
ಸುರನರರಿಂದಲಿ ವಂದನೆಗೊಂಬುವ | ಶ್ರೀ ಗುರುವರರಾಯ 7
ಅಂತರಂಗದಿ ಆನಂದವನಿತ್ತ ಮಹಿಮ | ಶ್ರೀ ಗುರುವರರಾಯ
ಶಾಂತಮೂರುತಿ ನಿಮ್ಮ ಶರಣೆಂದು ಭಜಿಸುವೆ |
ಶ್ರೀ ಗುರುವರರಾಯ 8
ನೀತ ಗುರುವೆ ನಿಮ್ಮ ನಂಬಿದೆ ಸಲಹಯ್ಯ |
ಶ್ರೀ ಗುರುವರರಾಯ
ಖ್ಯಾತ ಶ್ರೀ ಗೋಪಾಲಕೃಷ್ಣವಿಠಲ ಪ್ರಿಯ |
ಶ್ರೀ ಗುರುವರರಾಯ 9
***