ಕಾಖಂಡಕಿ ಶ್ರೀ ಕೃಷ್ಣದಾಸರು
ದಾಸಿಯಾಗುವೆನೇ ಗುರುವಿನ ಮನೆಯಾ | ನಿ | ರ್ದೋಷ ಪದವಿ ಈವ ನಿಜ ದೊರೆಯಾ ಪ
ಮನೋಮಂಟಪದೊಳಗೆ ಅನುಮಾನ ಕಸನೀಗಿ | ಅನುದಿನ ನಿಶ್ಚಲದ ತಳಿಯಾ ಬಿಂಬಿಸಿ | ಮುನಿಯ ಸೇವೆ ಹಾರೈಸುವೆ ಬಿನಗು ಶಬ್ದಜ್ಞಾನಿಗಳ | ಮನಿಲಿ ನಿಂತು ಹೊತ್ತಂಗಳಿಯೆ ನೆನವಿಲಿರುತಾ 1
ತುಂಬಿ | ಸಾವಧಾನ ಸಿಂಬಿಲಿರಿಸಿಕೊಂಡು ಬರುತಾ | ದೇವ ಗುರುರಾಯ ನಡಿದಾವರೆಯ ಊಳಿಗಕ | ಆವಾಗ ತಂದೆರೆವೆನು ಹರುಷದಲಿ 2
ಅರಹು ಎಂಬ ಸೀರೆಯುಟ್ಟು ಕುರುಹುವೆಂಬ ಕುಪ್ಪಸದಲಿ | ಬೋಧ ಪಡಿಯದನ್ನ ಉಣುತಾ | ವರದ ತಂದೆ ಮಹಿಪತಿ ಚರಣವ ನೋಲೈಸಿ ಇಹಪರ | ವೆರಡು ಗೆಲಿದು ನಿಜಗತಿ ಪಡೆವೆನೋ 3
***