suvrateendra teertha rayara mutt 1933 yati stutih
ರಚನೆ : ಶ್ರೀ ಕುರುಡಿ ರಾಘವೇಂದ್ರಾಚಾರ್ಯರು
ಅಂಕಿತ : ಶ್ರೀ ಲಕುಮೀಶ
ಧಾಟಿ : ನಮೋ ನಮೋ ಶ್ರೀ ರಾಘವೇಂದ್ರ
ನಮಿಸುವೆನು ಸುವ್ರತೀಂದ್ರ
ಯತಿಗಳಿಗೆ ಸತತ ।। ಪಲ್ಲವಿ ।।
ಭ್ರಮಿಸಿ ತ್ರಯ ಮೋಹದಲಿ ।
ಶ್ರಮಿಸಿ ಶ್ರೀ ಹರಿ ಪದವ ।
ನಮಿಸಿ ನಾ ತುತಿಸದಲೆ -
ಕೆಟ್ಟೆ ಕೈಪಿಡಿಯೆಂದು ।। ಅ ಪ ।।
ಹುಲಿ ಹನುಮಂತರ
ಚಲ್ವ ಭವರಿವರಲ್ಲಿ ।
ಸಲ್ಲಿಸುತ ವೇದಾಂತ ನ್ಯಾ
ಯಶಾಸ್ತ್ರದ ಕಲಿತೂ ।
ಕಲಿತನದಿ ತಿರುಪತಿಲಿ
ಪ್ರೌಢಾಧ್ಯಾಪಕರಾಗಿ ।
ಇಳೆಯೊಳಗೆ ಬಹು ಕೀರ್ತಿ
ಪಡೆದಂಥ ಮಹಿಮರಿಗೆ ।। ಚರಣ ।।
ಒಲುಮೆ ಗಳಿಸಿ ಶ್ರೀ ಸುಶೀಲೇಂದ್ರ
ಯತಿಗಳಲಿ ।
ಹುಲಿ ಕೃಷ್ಣರಿವರೀಗ
ಒಲಿದಾಶ್ರಮ ನೀಡಿ ।
ಬಲಗೊಂಡು ಶ್ರೀ ಮೂಲರಾಮಾದಿ
ಪೂಜೆಯಲಿ ।
ನಲಿದು ದಕ್ಷಿಣ ಯಾತ್ರೆ
ಹರುಷದಲಿ ಗೈದರಿಗೆ ।। ಚರಣ ।।
ಶ್ರೀ ಕುಂಭಕೋಣದಲಿ
ಮಹಾ ಸಮಾರಾಧನೆಗೆ ।
ಜೋಕೆಯಲಿ ಸಮೀರಾ
ಸಮಯ ಸಭದೀ ।
ಆ ಕೃಷ್ಣ ಎಲತ್ತೂರು
ಕಪಿಸ್ಥಲಂ ದೇಶಿಕಾರ್ಯ ।
ಚಕ್ರವರ್ತಿ ಅಯ್ಯಂಗಾರ್ರಿವರ
ಬರ ಮಾಡ್ದರಿಗೆ ।। ಚರಣ ।\
ಕೂಡಲಿ ಶೃಂಗೇರಿ ಮಠದ
ಸ್ವಾಮಿಯವರು ।
ಸಡಗರದಿ ಬಂದ
ಅಭಿನವ ಭಟ್ಟಾರ್ಯರು ।
ದೊಡ್ಡ ಬಳ್ಳಾಪುರದ
ವಾಸುದೇವಾಚಾರ್ಯರು ।
ಬಿಡದೆ ವಿರೂಪಾಕ್ಷ
ಕೋವಿದರ್ಕರಿಸಿದರಿಗೆ ।। ಚರಣ ।।
ವೈದ್ಯನಾಥಶಾಸ್ತ್ರಿ
ತಿರುವಾದಿ ವಿಜಯೀ೦ದ್ರ ।
ಮುದದಿಂದ ಬಂದ
ಕೋವಿದ ಕೃಷ್ಣಮೂರ್ತಿ ।
ಒದಗೆ ವಾಕ್ಯಾರ್ಥ
ಪಶೂನಾ ಯಜೇತಕ್ಕೆ ।
ತುದಿ ನಿರ್ಣಯ ನೀಡಿ
ಗೆದ್ದಂತ ಯತಿಗಳಿಗೆ ।। ಚರಣ ।।
ದೇಶಿಕಾರ್ಯರು ಇವರ
ಭಾಸುರ ವಿದ್ವತ್ತಿಗೆ ।
ಸೋಶಿಲಾಕ್ಷಣದಲ್ಲಿ
ಕವನವನು ನೀಡೆ ।
ತೋಷದಲಿ ಪೂಜೆಗೈದು
ವಿಜಯೀ೦ದ್ರರಡಿಗಿಟ್ಟು ।
ರಾಶಿ ಧನ ಕನಕಾದಿಗಳ
ಪಂಡಿತರಿಗಿತ್ತಂಥ ।। ಚರಣ ।।
ವ್ಯಾಸತತ್ತ್ವಜ್ಞರ
ದರ್ಶನಾದಿ ಗೈದು ।
ಸಂಸ್ಥಾನ ಗದ್ವಾಲಿನಲ್ಲಿ
ಚಾತುರ್ಮಾಸ್ಯ ಕುಳಿತೂ ।
ಹಾಸದಲಿ ಆಶ್ರಮದಿ
ಸುಯಮೀ೦ದ್ರರಿಗೆಯಿತ್ತು ।
ವಾಸ ಮಂತ್ರಾಲಯದಿ
ಲಕುಮೀಶ್ನ ಧ್ಯಾನಿಪರ ।। ಚರಣ ।।
****