..
kruti: tandevaradagopala vittala (ಪ್ರಹ್ಲಾದಗೌಡರು)
ಕರುಣ ಬಾರದೇ ಗುರುವೇ ಕರುಣ ಬಾರದೇ ಪ
ಅಕಟ ನಿನ್ನ ಚರಣ ನಂಬಿದ ಶರಣನ ಮೇಲೆ ಅ.ಪ.
ಕಷ್ಟ ಸಹಿಸಲಾರೆ ಭವ ಕಷ್ಟದಿಂದ ಕಡಿಗೆ ಮಾಡಿ ಕೃಷ್ಣ ಪದ್ಮವನ್ನು ತೋರುತುತ್ಕøಷ್ಟ ಪದವಿ ಪಾಲಿಸೊ ಗುರುವೇ 1
ಸಾಲೆ ಸಾಲದು ಸಾಲಮಾಡಿ ಸಾಲದು ನಾಳಿಗೆಂಬೊ ಪಾಶ ಸಾಲುಗೆಡದೆ ಬರಲುಪಾಯ ನಿನ್ನ ಶೀಲ ಮೂರುತಿ
ಸ್ಮರಣೆ ಒಂದೇ 2
ಸಕಲ ಲೋಕಧರನೆ ಬಲೂ ಭಾರನಾದೆನೇ ಅಖಿಳ ಸುರರ ಸಲಹುವ ಸೀಲ ತಂದೆವರದಗೋಪಾಲವಿಠ್ಠಲಪ್ರೀಯಾ 3
***