ರಾಗ ಧನಶ್ರೀ ಏಕತಾಳ
ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ
ರಕ್ಕಸಾಂತಕನ ಭಜಿಸಿ ಬರಿದಾಯ್ತೆನ್ನ ಬದುಕು |||ಪ||
ಅಡ್ಡ ಗಂಧವನಿಟ್ಟುಕೊಂಡು ರುದ್ರ ದೇವರ ಭಜಿಸುವಾಗ
ಬಡ್ಡಿಗೆ ಹಣವ ಕೊಟ್ಟು ಸುಖದೊಳಿದ್ದೆವು
ಅಡ್ಡ ಗಂಧ ಬಿಟ್ಟು ದೊಡ್ಡ ನಾಮ ಮುದ್ರೆ ಧರಿಸಲಾಗಿ
ಬಡ್ಡಿ ಬಾಚಿ ಹೋಗಿ ಬಾಯ್ಗೆ ಗಡ್ಡೆ ಬಿದ್ದಿತು
ಹೆಡಿಗೆ ತುಂಬ ದೇವರು ನಮ್ಮ ಮನೆಯೊಳಗಿರುವಾಗ
ಒಡವೆ ವಸ್ತು ಇಟ್ಟುಕೊಂಡು ಸುಖದೊಳಿದ್ದೆವು
ಒಡೆಯ ಹರಿಯೊಬ್ಬ ಸರ್ವರೊಡೆಯನೆಂದು ಭಜಿಸಲಾಗಿ
ಒಡವೆ ಹೋಗಿ ಬಡತನ ಗಡನೆ ಬಂದಿತು
ಮಿತ್ರೆ ಕೇಳೆ ನಮ್ಮ ಮನೆ ಮದುವೆಮುಂಜಿ ಕಾಲದಲ್ಲಿ
ಅರ್ತಿಯಿಂದ ಒಮ್ಮೆ ಕಚ್ಚೆ ಕಟ್ಟುತಿದ್ದೆವು
ನಿತ್ಯ ಕಚ್ಚೆಯೆನ್ನು ಹಾಕಿ ಸೀರೆಯೆನ್ನು ಉಡಲಾಗಿ
ವ್ಯರ್ಥವಾಗಿ ಬಾಳುವೆ ಬದುಕು ಹಾಳಾಗ್ಹೋಯಿತು
ಕಾರ ಹುಣ್ಣಿಮೆ ಕಾಲದಲ್ಲಿ ಮೂಲಂಗಿಗೆ ಬೆಳ್ಳುಳ್ಳಿಕ್ಕಿ
ತೋರಿದರೆ ನಮ್ಮ ದೇವರು ವರವ ಕೊಡುತಿದ್ದ
ಈ ವೀರವೈಷ್ಣವಗೆ ಕೊಟ್ಟು ತ್ರಾಹಿ ಎನಲಾಗಿ
ಸೇರಿದಾ ಬದುಕು ಎಲ್ಲ ಹಾರಿ ಹೋಯಿತು
ಎಲ್ಲಮ್ಮ ಯಕಲಾತಿ ಉಡ್ಡಿ ಮೈಲಾರ ದೇವರ
ಕಲ್ಲೆಂದು ಭಜಿಪಾಗ ಕ್ಷೇಮವಿತ್ತೆ
ಬಲ್ಲಿದ ಪುರಂದರ ವಿಠಲನ ಭಜಿಸಲು
ಸಲ್ಲದ ವೈಕುಂಠ ಸಲ್ಲುವಂತಾದೀತು
***

pallavi
akkA akaTkaTenna gaNDa vaiSNavanAda kAraNa rakkasAntakana bhajisi baridAidenna baduku
caraNam 1
aDDa gandhavaniTTu koNDu rudra dEvara bhajisuvAga baDDige haNava koTTu sukhadoLiddEvu
aDDa gandha biTTu doDDa nAma mudre dharisalAgi baDDi bAci hOgi bAige gaDDe biddidu
caraNam 2
heDige tumba dEvaru namma maneyoLagiruvAga oDave vastu iTTukoNDu sukhadoLiddEvu
oDeya hariyobba sarvaroDeyanendu bhajisalAgi oDave hOgi baDatana kaDane badditu
caraNam 3
mitre kELe namma mane maduve munji kAladalli artiyinda omme kaTTe kaTTutiddevu
nitya kacceyennu hAki sIreyennu uDalAgi vyarttavAgi bALuve baduku hALAghOyitu
caraNam 4
kAra huNNime kAladalli mUlangige beLLuLLikki tOridare namma dEvaru varava koDutidda
I vIra vaiSNvage koTTu trAhi enalAgi sEridA baduku ella hAri hOyitu
caraNam 5
ellamma yakalAti uDDi mailAra dEvara kallendu bhajipAga kSEmavitte
ballida purandara viTTalana bhajisalu sallada vaikuNTha salluvantAdItu
***
ಅಕ್ಕಟಕ್ಕಟೆಂನಗಂಡ ವೈಷ್ಣವನಾದ ಕಾರಣ |
ರಕ್ಕಸಾಂತಕನ ಭಜಿಸಿರಚ್ಚೆ ಗೋಡಾಯಿತೆಂನ ಬದುಕು |
ಅಕ್ಕಟಕ್ಕಟರೆಂನಗಂಡ ಪ.
ಅಡ್ಡಗಂಧ ಹಚ್ಚುವಾಗ ರುದ್ರದೇವರ ಭಜಿಸಿಲಾಗಿ |ಬಡ್ಡಿವಾಸಿಂರೊಳಗೆ ನಾಉ ಸುಖದೊಳಿದ್ದೆವು | ಅಡ್ಡಗಂಧವನು ಬಿಟ್ಟು ಶ್ರೀ ಮುದ್ರೆಯನು ಧರಿಸಲಾಗಿ |ಬಡ್ಡಿವಾಸಿಯಲ್ಲ ಹೋಗಿ ಬಾಯೊಳ್ಗೆ ಬಿದ್ದಿಂತಾಯಿತವ್ವ, ಅಕ್ಕಟ 1
ಹೇಡಿಗೆ ತುಂಬ ದೇವರು ನಮ್ಮ ಮನೆಯೊಳಿರುವಕಾಲದಲ್ಲಿ | ವಡವೆ ವಸ್ತು ಸೌಭಾಗ್ಯ ಸುಖದೊಳಿದ್ದೆವುಹಾದಿಯ ತುಂಬ ಕರಿದು ಬಿಳಿದು ಸಾಲಿಗ್ರಾಮಭಜಿಸಲಾಗಿ | ವಡವೆ ವಸ್ತು ಎಲ್ಲ ಹೋಗಿ ಬಾಯೊಳ್ಹುಡಿಯುಬಿದ್ದಂತಾಯಿತವ್ವ | ಅಕ್ಕಟ | 2
ಕಾಲಿಝಂಣಕಾಲದಲ್ಲಿ ಮೂಲಂಗಿ ಬೊಳ್ಳಳ್ಳಿಗೆಡ್ಡೆ ತಂದುಕೊಟ್ಟರೆ ದೇವಸುಖವ ಕೊಡುವನೂ |ವೀರವಿಷ್ಣುವಿಗೆ ಕೊಟ್ಟುತ್ರಾಹಿ ತ್ರಾಹಿ ಎನ್ನಲಾಗಿಪಚ್ಚೆ ಕರ್ಪೂರದಂತ ಬದುಕು ನಿಸ್ತುತವಾಗಿಹೋಯಿತವ್ವ | ಅಕ್ಕಟ3
ಅತ್ತೆ ಕೇಳೆ ಹಿಂದೆನಂಮ ಮದುವೆ ಮುಂಜಿಕಾಲದಲ್ಲಿ | ಆರ್ತಿಗಾದರು ಒಮ್ಮೆ ಕಚ್ಚೆಕಟ್ಟಿದ್ದೇವೊಅರ್ಥಿಕಚ್ಚೆಯಂನು ಬಿಟ್ಟುನಿತ್ಯ ಕಚ್ಚೆ ಉಡೆಯಲಾಗಿವಿತ್ತಬದುಕುಯೆಲ್ಲ ಹೋಗಿ ವ್ಯರ್ಥವಾಗಿಹೋಯಿತವ್ವ | ಅಕ್ಕಟ4
ಅತ್ತೆ ಮಾವ ಸತ್ತ ದಿವಸ ಪಿತ್ರುಕಾರ್ಯನಡಸಲಾಗಿ | ಕತ್ತೆ ನಾಯಿಹೊರಳಿದಂತೆ ನಂಟುನಂಟರಿಷ್ಟರೂ | ಶ್ರೀ ಪುರಂದರವಿಠಲನಭಜಿಸಲಾಗಿ | ತುತ್ತ ಗೊಂಬುದೊಂದು ಕೂಳುಬೆಲ್ಲದಹಾಗೆ ಆಯಿತವ್ವ5
*********