..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ಗಂಗೆ ಮಂಗಲ ತರಂಗೆ ಪಾಹಿ
ಪಾಪಭಂಗೆ ಹರಿಪಾದಸಂಗೆ ಪ
ಗಂಗೆ ಹರಿಪಾದದಿಂದ ಉದ್ಭವಿಸಿದೆ
ಪರಮೇಷ್ಠಿಯ ಪಾತ್ರೆಯೊಳಗೆ ನಿಂತೆ
ಹರಶಿರದೊಳು ನಿತ್ಯ ನೆಲಸಿದೆ
ಮತ್ತೆ ಸ್ಮರಿಪರ ಚಿತ್ತದೊಳ್ ವಾಸಿಸಿದೆ 1
ಸಗರಪುತ್ರರ ಪವಿತ್ರಿಸಿದೆ
ಗಗನದೊಳ್ ಹರಿಯುವ ನದಿಯಾದೆ
ನಗವರ ಕೈಲಾಸಕ್ಕಿಳಿದೆ
ಜಗವರಿಯೆ ಜಹ್ನುತನಯೆಯಾದೆ 2
ರಾಜೇಶ ಹಯಮುಖ ತನಯೆ
ರಾಜಧರ್ಮನು ನಿನ್ನ ತಟದಲ್ಲಿ
ಮೂಜಗವು ತಾ ಪೊಗಳುವಂದದಿ
ವಾಜಿಮೇಧನ ಗೈದನಾದರದಿ 3
***