Thursday, 5 August 2021

ಗಂಗೆ ಮಂಗಲ ತರಂಗೆ ಪಾಹಿ ಪಾಪಭಂಗೆ ಹರಿಪಾದಸಂಗೆ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ಗಂಗೆ ಮಂಗಲ ತರಂಗೆ ಪಾಹಿ

ಪಾಪಭಂಗೆ ಹರಿಪಾದಸಂಗೆ ಪ


ಗಂಗೆ ಹರಿಪಾದದಿಂದ ಉದ್ಭವಿಸಿದೆ

ಪರಮೇಷ್ಠಿಯ ಪಾತ್ರೆಯೊಳಗೆ ನಿಂತೆ

ಹರಶಿರದೊಳು ನಿತ್ಯ ನೆಲಸಿದೆ

ಮತ್ತೆ ಸ್ಮರಿಪರ ಚಿತ್ತದೊಳ್ ವಾಸಿಸಿದೆ 1


ಸಗರಪುತ್ರರ ಪವಿತ್ರಿಸಿದೆ

ಗಗನದೊಳ್ ಹರಿಯುವ ನದಿಯಾದೆ

ನಗವರ ಕೈಲಾಸಕ್ಕಿಳಿದೆ

ಜಗವರಿಯೆ ಜಹ್ನುತನಯೆಯಾದೆ 2


ರಾಜೇಶ ಹಯಮುಖ ತನಯೆ

ರಾಜಧರ್ಮನು ನಿನ್ನ ತಟದಲ್ಲಿ

ಮೂಜಗವು ತಾ ಪೊಗಳುವಂದದಿ

ವಾಜಿಮೇಧನ ಗೈದನಾದರದಿ 3

***


No comments:

Post a Comment