Showing posts with label ಆರುತಿ ಬೆಳಗೋಣ ಮುತ್ತಿನಾರತಿ ಮಾಡೋಣ others. Show all posts
Showing posts with label ಆರುತಿ ಬೆಳಗೋಣ ಮುತ್ತಿನಾರತಿ ಮಾಡೋಣ others. Show all posts

Friday, 29 October 2021

ಆರುತಿ ಬೆಳಗೋಣ ಮುತ್ತಿನಾರತಿ ಮಾಡೋಣ others

  


Restart mobile & try if the above audio is not playing

ಶ್ರೀಕೃಷ್ಣಾಯ ನಮಃ

ಆರತಿ ಬೆಳಗೋಣ  ಮುತ್ತಿನಾರತಿ  ಮಾಡೋಣ l
ಭಗವದ್ಗೀತೆಯು ಜನಿಸಿದ ದಿನದಿ ಆರತಿ ಬೆಳಗೋಣ ll
ಚಿನ್ನದಾರತಿ ಮಾಡೋಣ llಪll

ಮಹಾಭಾರತದ ಸಾರವೆನಿಸಿದ ಗೀತೆಗೆ ಆರತಿಯ l 
ಭಗವದ್ಗೀತೆಗೆ ಆರತಿಯ 
ಹಾಡುತ ಪಾಡುತ ನಲಿಯುತ ಭಕುತಿಲಿ ರನ್ನದ ಆರತಿಯ ll
ಬೇಡುತ ಚೆಂದದ ಆರತಿಯ ll1ll

ಲೋಕದಿ ಶಿಕ್ಷಣ ರೀತಿಯ ತೋರಿದ ಕೃಷ್ಣಗೆ ಆರತಿಯ l 
ಉಡುಪಿ ಕೃಷ್ಣಗೆ ಆರತಿಯ 
ಲೋಕ ಜ್ಞಾನವ ಜಗಕೆ ನೀಡಿದ  ಗೀತೆಗೆ ಆರತಿಯ ll
ಗೀತಾ-ಕೃಷ್ಣಗೆ ಆರತಿಯ ll2ll

ವಿಶ್ವರೂಪವ ತೋರಿಹ ವಿಶ್ವರೂಪಿಗೆ ಆರತಿಯ l ವಿಶ್ವರೂಪಿಗೆ ಆರತಿಯ
ವೇದಸಾರವುಪದೇಶಿಸಿದ ವೇದಮೂರುತಿಗಾರತಿಯ ll
ಪಾರ್ಥಸಾರಥಿಗಾರತಿಯ ll3ll

ಭಗವದ್ಗೀತೆಯ ಕಲಿಯುತ ನಾವು ಜೀವನ ಕಟ್ಟೋಣ l 
ನಾವು ಜೀವನ ಕಟ್ಟೋಣ 
ಭಾರತ ದೇಶದ ಮಕ್ಕಳು ಎಂದು ವಿಶ್ವಕೆ ಸಾರೋಣ ll 
ಮಾದರಿಯಾಗುತ ಬೆಳೆಯೋಣ ll4ll

ಮಂಗಳ ದಿನದಲಿ ಮಂಗಳೆ ಗೀತೆಗೆ ಸುಗುಣೇಂದ್ರಸುಶ್ರೀಂದ್ರಸುಪ್ರಿಯ ಸುಪೂರ್ಣಪ್ರಮತಿಯ
ಮಂಗಳಮಯನ ಚರಣಕ್ಕೆರಗುತ ಸುಗುಣವ ಪಾಡೋಣ ಮನದಲಿ ಗೀತೆಯ ನಿಲಿಸೋಣ ll5ll
***