Showing posts with label ಮಾವನ ಮನೆಯೊಳಗೆ ಇರಬಹುದೆ ಕೋವಿದರು neleyadikeshava. Show all posts
Showing posts with label ಮಾವನ ಮನೆಯೊಳಗೆ ಇರಬಹುದೆ ಕೋವಿದರು neleyadikeshava. Show all posts

Wednesday, 1 September 2021

ಮಾವನ ಮನೆಯೊಳಗೆ ಇರಬಹುದೆ ಕೋವಿದರು ankita neleyadikeshava

 ..

ಮಾವನ ಮನೆಯೊಳಗೆ ಇರಬಹುದೆ ಕೋವಿದರು ಪ


ಹಾವು ಹಿಡಿಯಲು ಬಹುದು ಹರಣ ನೀಡಲು ಬಹುದುಬೇವ ಕಿಚ್ಚನು ಹಿಡಿದು ನುಂಗಬಹುದುಭಾವೆಯಳ ತಂದೆ ಮನೆಯಲಿ ಜೀವಿಪುದಕಿಂತಸಾವುದೇ ಲೇಸು ಅಭಿಮಾನಿಗಳಿಗೆ1


ಪರರ ಸೇರಲು ಬಹುದು ಪತಿತರಲ್ಲಿರಬಹುದುಕೊರಳ ಘಾತಕಂಗೆ ಶಿರ ಒಪ್ಪಿಸಬಹುದುತರುಣಿಯಳ ತೌರು ಮನೆಯಲಿ ಇರುವುದಕಿಂತತರುಗಿರಿ ಗುಹೆಯಲ್ಲಿ ಇದ್ದು ಜೀವಿಸಬಹುದು 2


ಮಾವ ಅತ್ತೆಯು ನೊಂದು ಅತ್ತಿಗೆಯು ತಾ ಜರಿದುಹೇವವನಿಕ್ಕಿ ಚೂರ್ಣವ ಮಾಡಲುಆವಾಗ ನೋಡಿದರು ಎನಗೆ ಹಿತರಿಲ್ಲೆಂದುಮಾವ ಹೊರಗಾಡುವನು ಚಿಕ್ಕ ನುಡಿಗಳನು 3


ಬಂದೊಂದು ತಿಂಗಳೊಳು ಬಹುಮಾನ ನಡತೆಗಳುಬಂದೆರಡು ತಿಂಗಳೊಳಗೆ ಹಿತವಾದವುಒಂದೊಂದಭದ್ರ ನುಡಿ ಒಳಗೊಳಗೆ ಹುಟ್ಟುವುವುಸಂದೇಹವೇಕೆ ಸಂಸಾರಿಗಳಿಗೆ4


ಈ ಪರಿಯಲುಂಬಂಥ ಅಳಿಯ ಭೋಜನಕಿಂತಗೋಪಾಳ ಲೇಸು ಅಭಿಮಾನಿಗಳಿಗೆಶ್ರೀಪತಿ ನೆಲೆಯಾದಿಕೇಶವನ ಚರಣ ಸ-ಮೀಪದಲಿ ವಾಸಿಪುದೆ ವಾಸಿ ಮನವೆ 5


* ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.

***