..
ಎಂಥ ಸುಕೃತ ವಮ್ಮರಂಗನ ಕಾಂತೆಯರದಮ್ಮಅನಂತ ದೇಶಗಳು ಇವನಂತ ತಿಳಿಯವುಈ ಕಾಂತೆಯರುಒಲಿದರೆಂತು ಪೇಳಮ್ಮ ಪ.
ಪಟ್ಟಿ ಪಟ್ಟಾವಳಿ ಕೊಟ್ಟರು ರಂಗಗೆ ಇಟ್ಟರು ದಿವ್ಯ ಮುಕುಟವಇಟ್ಟರು ದಿವ್ಯ ಮುಕುಟ ಮುತ್ತಿನಹಾರ ಗಟ್ಟಿ ಕಂಕಣದ ಕೆಲದೆಯರು1
ಕೇಶರ ಬೆರೆಸಿದ ಮೀಸಲ ಶ್ರೀಗಂಧವಶ್ರೀಶನ ಸತಿಯರು ಹಿಡಕೊಂಡುಶ್ರೀಶನ ಸತಿಯರು ಹಿಡಕೊಂಡುರಂಗಗೆ ಲೇಪಿಸೆವೆಂಬೊ ಭರದಿಂದ2
ಸಾರ ತುಳಸಿಯು ಬೆರೆದ ಪಾರಿಜಾತದ ಮಾಲೆವಾರಿಜ ಮುಖಿಯರು ಹಿಡಕೊಂಡವಾರಿಜ ಮುಖಿಯರು ಹಿಡಕೊಂಡುರಂಗಗೆ ಏರಿಸೆವೆಂಬೊ ಭರದಿಂದ3
ಪಚ್ಚಮಾಣಿಕ ಬಿಗಿದ ಹೆಚ್ಚಿನ ಸರಗಳುಮಚ್ಛನೇತ್ರಿಯರು ಹಿಡಕೊಂಡುಮಚ್ಛನೇತ್ರಿಯರು ಹಿಡಕೊಂಡುರಂಗಗೆ ಏರಿಸೆವೆಂಬೊ ಭರದಿಂದ4
ಕೊರಳಲಿ ಸರಮಾಲೆ ಅರಳಿದ ಮುಖ ಕಮಲಎರಳೆ ನೋಟದಲಿ ಚಲುವನಎರಳೆ ನೋಟದಲಿ ಚಲುವ ಚನ್ನಿಗರಾಯನ ತರುವಳಿನೋಡಿ ಹರುಷಾಗಿ 5
ಹಸ್ತದಿ ಹಣಿಮ್ಯಾಲೆ ಕಸ್ತೂರಿ ಬಟ್ಟಿಟ್ಟುಉತ್ತಮ ತಿಲಕ ರಚಿಸುತಉತ್ತಮ ತಿಲಕ ರಚಿಸುತರಂಗನ ಹತ್ತಿರ ನಿಂತ ಕೆಲವರು6
ಇನ್ನೋರ್ವಳು ಬಂದು ಕನ್ನಡಿ ತೋರುತಕರ್ಣ ಕುಂಡಲವ ಸರಿಸುತಕರ್ಣ ಕುಂಡಲವ ಸರಿಸುತ ರಾಮೇಶನ ಚನ್ನಾಗಿ ನೋಡಿ ಸುಖಿಸುತ 7
****