ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಇದೇ ಘನಸುಖಾ ಸಾಧಿಸಿ ಗುರುಮುಖಾ
ಧ್ರುವ ಅಂಜದಾಲಿಸಿ ಕೇಳಿ ಪ್ರಾಂಜಳಾಗ್ಯದೆ ಝಂ ಝಂ ಝಂ ಝಂ ಝಂ ಝಂ ಝೆಂಕರಿಸುತಲ್ಯದೆ 1
ಒಂದೊಂದು ಪರಿಲ್ಯಾನಂದವುದೋರುತಲ್ಯದೆ ಧೀಂ ಧೀಂ ಧೀಂ ಧೀಂ ಧೀಂ ಧೀಂ ಧೀಂಮಿಡುಗುತದೆ 2
ಮನೋಹರಾಗುವ ಅನುಭವದೋರುತದೆ ದೀನ ಮಹಿಪತಿಗೆ ಪಾವನಗೈಸುತದೆ 3
***