Showing posts with label ಕೂಡಿ ಕೊಂಡಾಡಲೊಲ್ಲರೊ ರಂಗಯ್ಯ ನಿನ್ನ purandara vittala. Show all posts
Showing posts with label ಕೂಡಿ ಕೊಂಡಾಡಲೊಲ್ಲರೊ ರಂಗಯ್ಯ ನಿನ್ನ purandara vittala. Show all posts

Wednesday, 4 December 2019

ಕೂಡಿ ಕೊಂಡಾಡಲೊಲ್ಲರೊ ರಂಗಯ್ಯ ನಿನ್ನ purandara vittala

ಪುರಂದರದಾಸರು
ರಾಗ ಕಾಂಭೋಜ ಅಟತಾಳ

ಕೂಡಿ ಕೊಂಡಾಡಲೊಲ್ಲರೊ ರಂಗಯ್ಯ ನಿನ್ನ ||ಪ||
ಕೇಡಿಗನು ಇವ ನಮ್ಮ ಕೆಲಸ ಕೆಡಿಸುವನೆಂದು ||ಅ||

ತನ್ನ ತಾಯ ಒಡಹುಟ್ಟಿದಣ್ಣನ ಕೊಂದವನೆಂದು
ಅನ್ನಿಗರ ಬಿಡುವನೆ ಎಂದೆಲ್ಲರ್ ಮಾತಾಡಿಕೊಂಡು ||

ಹಸಿದಳುತಿರೆ ನೇವರಿಸಿ ಮೊಲೆಯೂಡಿದವಳ
ಅಸು ಹೀರಿ ಕೊಂದ ಮಾರಿ ಮಗನೆಂದು ರಂಗ ನಿನ್ನ ||

ಆವು ಕಾಯಲು ಹೋಗಿ ಹಾವಿನ ಮಡು ಧುಮುಕಿ
ಠಾವು ಬಿಡಿಸಿದವ ಕೇವಲ ಹೀನನೆಂದು ||

ಗೊಲ್ಲತೇರ ಮನೆಯಲ್ಲಿ ಪಾಲು ಮೊಸರು ಬೆಣ್ಣೆಯ
ನಿಲ್ಲದೆ ಮೆಲ್ಲುವನು ಕಳ್ಳನೆಂತೆಂದು ನಿನ್ನ ||

ತರಳ ಪುಟ್ಟನು ಎಂದು ಕರುಣದಿ ಸಲಹಿದವರ
ಬೆರಳೆಣಿಸಿ ಕೊಂದನಿವ ಪರಮಾ ಕಿತವನೆಂದು ||೫||

ಸುಲಭದಿಂದಲಿ ಬಲು ಖಳರ ಬಳಗವನೆಲ್ಲ
ಛಲದಿಂದ ಕೊಂದನಿವ ಕೊಲೆಗಾರ ರಂಗನೆಂದು ||

ಕರುಣಾನಿಧಿಯೆ ಗುರು ಪುರಂದರವಿಠಲ
ಧರೆಯ ಮಾನವರು ನಿನ್ನ ಚರಿಯ ಈ ಪರಿಯೆಂದು ||
***

pallavi

kUDi koNDADalollaro rangayya ninna

anupallavi

kEDiganu iva namma kelasa keDisuvanendu

caraNam 1

tanna tAya oDa huTTidaNNaNa kondavanendu annigara biDuvane endellaru mAtADi koNDu

caraNam 2

hasidaLutire nevarisi moleyUDidavaLa asu hIri konda mAri maganendu ranga ninna

caraNam 3

Avu kAyalu pOgi hAvina maDuva dhumuki Davu biDisida kEvala hInanendu ninna

caraNam 4

gollatEra maneyalli pAlu mosaru beNNeya nillade melluvanu kaLLanendendu ninna

caraNam 5

taraLa puTTanu endu karuNadi salahidavara beraLaneNisi konda kolegAranendu ninna

caraNam 6

sulabhadindali balu khaLara baLagavanella chaladinda kondaniva kolegAra ranganendu

caraNam 7

karuNAkara siri purandara viTTalane dhareya mAnavaru ninna cariya I pariyendu
***


ಕೂಡಿ ಕೊಂಡಾಡಲೊಲ್ಲರೊ ರಂಗಯ್ಯ ನಿನ್ನ |
ಕೂಡಿಕೊಂಡಾಡಲೊಲ್ಲರೊ ಪ

ಕೇಡಿಗನಿವ ನಮ್ಮ ಕೆಲಸ ಕೆಡಿಪನೆಂದು ಅ.ಪ

ತನ್ನ ತಾಯ ಒಡಹುಟ್ಟಿದಣ್ಣನ ಕೊಂದವನಿವ |ಅನ್ನಿಗರ ಬಿಡುವನೆ? ಎಂದೆಲ್ಲರು ಮಾತಾಡಿಕೊಂಡು 1

ತರಳಪುಟ್ಟನೆಂದು ಕರೆದು ಸಲಹಿದರೆ |ಬೆರಳನೆಣಿಸಿ ಕೊಂದ ಕೊಲೆಗಾರನೆಂದು ನಿನ್ನ 2

ಆವ ಕಾಯುತ ಹೋಗಿ ಹಾವಿನ ಮಡುವ ಧುಮುಕಿ |ಠಾವವಿಲ್ಲ ಮಾಡಿದ ಕೇವಲ ಹೀನನೆಂದು 3

ಗೊಲ್ಲತಿಯರ ಮನೆ ಪೊಕ್ಕು ಪಾಲ್ಬೆಣ್ಣೆ ಮೊಸರುಗಳು |ನಿಲ್ಲದೆ ತಿಂಬುವನಿವ ಕಳ್ಳ ಕೃಷ್ಣನೆಂದು 4

ಕರುಣಾಕರಸಿರಿಪುರಂದರವಿಠಲನೆ |ಧರೆಯ ನರರು ನಿನ್ನಚರಿಯಪರಿಯ ಕಂಡು5
*********