Showing posts with label ಸಿರಿವರಾ ಬಾ ಸುಂದರಾ ಸುರಭೀಶ ಸುರನುತ ಸಿರಿವತ್ಸಭೂಷಿತ shreesha keshava vittala. Show all posts
Showing posts with label ಸಿರಿವರಾ ಬಾ ಸುಂದರಾ ಸುರಭೀಶ ಸುರನುತ ಸಿರಿವತ್ಸಭೂಷಿತ shreesha keshava vittala. Show all posts

Sunday, 1 August 2021

ಸಿರಿವರಾ ಬಾ ಸುಂದರಾ ಸುರಭೀಶ ಸುರನುತ ಸಿರಿವತ್ಸಭೂಷಿತ ankita shreesha keshava vittala

..

kruti by shreesha keshava vittala dasaru (subbanna dasa)

ಸಿರಿವರಾ | ಬಾ ಸುಂದರಾ ||

ಸುರಭೀಶ ಸುರನುತ | ಸಿರಿವತ್ಸಭೂಷಿತ ಪ

ದಂಡಾವತಿಯವರ | ದಂಡೇಯೋಳ್ ನೆಲಸಿದ |

ಪುಂಡರೀಕಾಕ್ಷ ಕೋ | ದಂಡಪಾಣಿ ಹರೇ ಬಾ ಸುಂದರಾ 1

ನಂದಗೋಪನ ಕಂದ | ನಂದಭದ್ರೆಯರಿಂದ |

ನಿಂದು ಕ್ಷೀರದಿ ಮಿಂದು | ಸಿಂಧುಶಯನ ಹರೇ ಬಾ ಸುಂದರಾ 2

ಮಂಗಳ ಮಹಿಮ ಶ್ರೀ | ರಂಗನಾಥನೆ ಪೊರೆ |

ಅಂಗಜಪಿತ ಯದು | ಪುಂಗವ ಶ್ರೀಶಕೇಶವ ಬಾ ಸುಂದರಾ 3

***