Showing posts with label ಭಾರತೀ ಪತಿ ಮೂರುತಿ ಮಾರುತಿ ಕಾಯೊ uragadrivasa vittala. Show all posts
Showing posts with label ಭಾರತೀ ಪತಿ ಮೂರುತಿ ಮಾರುತಿ ಕಾಯೊ uragadrivasa vittala. Show all posts

Monday, 2 August 2021

ಭಾರತೀ ಪತಿ ಮೂರುತಿ ಮಾರುತಿ ಕಾಯೊ ankita uragadrivasa vittala

ಭಾರತೀಪತಿ ಮೂರುತಿ ಮಾರುತಿ ಕಾಯೊ ಪ


ಘೋರದುರಿತೌಘ ಪರಿಹಾರ ಸುಸಮೀರ ಧೀರಾ ಅ.ಪ


ಸತ್ತ್ವ್ವ ಸತ್ತ್ವಾತ್ಮಕ ತತ್ತ್ವದೇವತೆಗಳ

ಕೃತ್ಯಗಳ್ ಪ್ರವೃತ್ತಿಗೆ ನೀ ನಿತ್ಯ ನಿಯಾಮಕ ಗುರು 1


ಪಟುತರಾಂಗನೆ ಧೂರ್ಜಟಿಯ ಸೇವೆಗೆ ಮಚ್ಚಿ

ದಿಟ್ಟ ಶೇಷಪಟ್ಟಕೊಟ್ಟು ತೊಟ್ಟೆ ಪರಮೇಷ್ಠಿ ಪದ 2


ಸಂಜೀವನೆ ರಿಪುಕುಂಜರ ಮಸ್ತಕ ಭಂಜಿಸಿದ ಧ-

ನಂಜಯನಾಗ್ರಜನೆ ಮೂರ್ಜಗ ಗುರು 3


ಶ್ರೇಷ್ಠಮೂರುತಿ ಜಗಚ್ಚೇಷ್ಟಾಪ್ರದಾಯಕ

ದಿಟ್ಟ ನೀ ಪ್ರವಿಷ್ಠ ಸರ್ವಸೃಷ್ಟಿಕಾರ್ಯ ತೊಟ್ಟಿರುವೆ4


ಮುಖ್ಯವಾಚ್ಯನು ದೇವ ಅಮುಖ್ಯವಾಚ್ಯನು ನೀನು

ಮುಖ್ಯ ಜೀವಕೋಟಿಯೊಳು ಪ್ರಮುಖನಯ್ಯ ಮುಖ್ಯಪ್ರಾಣ5


ಶ್ವಾಸನಿಯಾಮಕ ನಿಶೆಯೊಳು ನಿದ್ರೆಯೊಳು

ಅಸುರಾದಿ ಜೀವರೊಳು ಶ್ವಾಸಭೂರ್ಭುವನೆನಿಸುವೆ 6


ಸರ್ವನಿಯಾಮಕ ಶರ್ವರೊಂದಿತಪಾದ

ಸರ್ವೋತ್ತಮ ಶ್ರೀ ವೇಂಕಟೇಶನೋರ್ವನೆ ಮುಖ್ಯನೆಂದೆ7

****