..
ಭೂಮಿಸುರರ ಘನ | ಸ್ತೋಮವಂದಿತ ಮಹಾ ಮಹಿಮಾ
ಮಹಾಮಹಿಮ ಸಜ್ಜನ - ತತಿ - ಪ್ರೇಮಾ ಪ
ಕಾಮಧೇನು ಸುಕಲ್ಪತರು ಚಿಂ -
ತಾಮಣಿಯು ತಾನೆನಿಸಿ ಸರ್ವದ
ಕಾಮಿತಾರ್ಥವನಿತ್ತು ಮೆರೆವನು
ಈ ಮಹಿಯೊಳು ಸಾರ್ವಭೌಮನು ಅ.ಪ
ಪ್ರಾಣತನಯ ವಿಷ್ವಕ್ಸೇನ ಶ್ರೀಹರಿ ಶಾಪದಿಂದ
ಶಾಪದಿಂದ ಭೂತಳದಲಿ ಬಂದಾ
ಮಾಣವಕ ಪ್ರಹ್ಲಾದನೆನಿಸಿ -
ಪ್ರಾಣದೇವಾವೇಶ ಶೇಷನು
ಕ್ಷೋಣಿಯೊಳು ಶಿರಿವ್ಯಾಸನೆನಿಸೀ
ಮಾಣದಲೆ ಗುರುರಾಘವೇಂದ್ರನು 1
ಅಲವಬೋಧರ ಮತ - ಜಲಧಿಚಂದಿರನೆನಿಪನೀತಾ
ನೆನಿಪನೀತ ಲೋಕದಿ ಬಹು ಖ್ಯಾತಾ
ಲಲಿತ ವೃಂದಾವನದಿ ನಿಂತು
ಹಲವು ಭಕುತರಭೀಷ್ಠಕಾರ್ಯವ
ಸಲಿಸಿ ಸುಜನರ ಸಲಹೊಗೋಸುಗ
ಸುಲಭತರನಾಗಿರುವ ಗುರುವರ 2
ಕಿಟಜಸರಿದ್ವರ - ತಟದಿ ಸಂತತ ತಾನಿರುವ
ತಾನಿರುವ ಭಕ್ತರು ಕರೆಯೆ ಬರುವಾ
ಧಿಟ ಸುಭಕ್ತರ ಬಿಡದೆ ತಾನು ಪ್ರ -
ಕಟನಾಗಿ ಮಹಿಮೆ ತೋರುವ
ಧಿಟ ಗುರು ಜಗನ್ನಾಥ ವಿಠಲನ
ಭಟಜನಾಗ್ರಣಿ ಎನಿಸಿ ಮೆರೆವ 3
***