Showing posts with label ಳಳ- RSS- ಭಾರತಾಂಬೆ ನಮ್ಮ ತಾಯಿ others rss. Show all posts
Showing posts with label ಳಳ- RSS- ಭಾರತಾಂಬೆ ನಮ್ಮ ತಾಯಿ others rss. Show all posts

Friday, 24 December 2021

ಭಾರತಾಂಬೆ ನಮ್ಮ ತಾಯಿ others rss

   

RSS song .

ಭಾರತಾಂಬೆ ನಮ್ಮ ತಾಯಿ

ನಾವು ಅವಳ ಮಕ್ಕಳು |

ಒಂದುಗೂಡಿ ಬನ್ನಿರೆಲ್ಲ ಭವ್ಯರಾಷ್ಟ್ರಕಟ್ಟಲು ||ಪ||


ಒಂದೆ ಮಣ್ಣ ಕಣಗಳಲ್ಲಿ ಇರದು ಎಂದೂ ಭಿನ್ನತೆ

ಒಂದೆ ನೀರ ಹನಿಗಳಲ್ಲಿ ಇರುವುದೇ ವಿಭಿನ್ನತೆ?

ಭೇದಭಾವ ಬಿಸುಟು ದೂರ ಸಾಧಿಸಿ ಸಮಾನತೆ

ಕಾಣಬನ್ನಿ ನಾಡಸೇವೆಯಲ್ಲಿ ಬಾಳಧನ್ಯತೆ ||೧||


ನಮ್ಮ ನಾಡ ಚರಿತೆಯ ಪುಟ ಪುಟ ರೋಮಾಂಚಕ

ಛತ್ರಪತಿಯ ವೀರಗಾಥೆ ಅಮಿತ ಸ್ಫೂರ್ತಿದಾಯಕ

ಕೋಟಿ ಕೋಟಿ ಪುತ್ರರಿರಲು ಮಾತೆಗೇಕೆ ಕಂಬನಿ?

ನಾಡರಕ್ಷೆಗಾಗಿ ಮುಡಿಪು ನೆತ್ತರಿನ ಹನಿ ಹನಿ ||೨||


ಕಾಶ್ಮೀರ ಕಣಿವೆಯೊಳಗೆ ನುಸುಳಿತಿಹರು ಅರಿಗಳು

ಗಡಿಗಳಲ್ಲಿ ಗುಡುಗುತಿರಲು ಧೂರ್ತ ಶತ್ರು ಪಡೆಗಳು

ಮನದಿ ಮನೆಯ ಮಾಡಿದಂಥ ಹೇಡಿತನವ ದಹಿಸುವಾ

ಶಸ್ತ್ರ ಹಿಡಿದು ಹೋರಾದಿ ವಿಶ್ವವನ್ನೆ ಜಯಿಸುವಾ ||೩||

***

BArataaMbe namma tAyi

nAvu avaLa makkaLu |

oMdugUDi bannirella BavyarAShTrakaTTalu ||pa||


oMde maNNa kaNagaLalli iradu eMdU Binnate

oMde nIra hanigaLalli iruvudE viBinnate?

BEdaBAva bisuTu dUra sAdhisi samAnate

kANabanni nADasEveyalli bALadhanyate ||1||


namma nADa cariteya puTa puTa rOmAMcaka

Catrapatiya vIragAthe amita sphUrtidAyaka

kOTi kOTi putrariralu mAtegEke kaMbani?

nADarakShegAgi muDipu nettarina hani hani ||2||


kASmIra kaNiveyoLage nusuLitiharu arigaLu

gaDigaLalli guDugutiralu dhUrta Satru paDegaLu

manadi maneya mADidaMtha hEDitanava dahisuvA

Sastra hiDidu hOrAdi viSvavanne jayisuvA ||3||

***