ತಾರಕುಪದೇಶವೆಂಬ ಸಾರಣಿಯ ಕೊಟ್ಟು ಪೂರ್ವ ಕರ್ಮಗಳೆಂಬ ಕಿಲ್ಮಿಷಗಳ ತೊಳೆದು ಪ
ನಿಜ ಬೋಧವೆಂಬ ಚೂರ್ಣ ಕೊಟ್ಟು ಭವಬೀಜವೆಂಬ ವ್ಯಾದಿಯ ಮೂಲನೆ ಸುಟ್ಟು ಙÁ್ಞನಾಮೃತವೆಂಬ ಕಷಾಯದಲಿ ಉತ್ಪತ್ತಿ ಸ್ಥಿತಿ ಲಯವೆಂಬ ತ್ರಿದೋಷವನು ಪರಿಹರಿಸಿದ ನಮ್ಮ ಗುರು ಭವರೋಗವೈದ್ಯ 1
ಕಾಯವೆ ಕೋವಿಯನೆ ಮಾಡಿ ಭಾವನೆಯ ಮದ್ದನೆ ತುಂಬಿ ಸೋಹ್ಯ ಸೊನ್ನೆಯ ರಂಜನಸಿಕ್ಕಿ ಲಯಲಕ್ಷವೆಂಬ ಗುಂಡಿನಲಿ ಭವಪಾಶವೆಂಬ ಗುರಿಯ ಕೆಡಹಿದ ನಮ್ಮ ಗುರುನಾಥ ಮಹಿಪತಿಯ 2
***