Showing posts with label ಗುರುಪುರಂದರ ದಾಸರೇ ನಿಮ್ಮ ಚರಣ vijaya vittala GURU PURANDARA DAASARE PURANDARADASA STUTIH. Show all posts
Showing posts with label ಗುರುಪುರಂದರ ದಾಸರೇ ನಿಮ್ಮ ಚರಣ vijaya vittala GURU PURANDARA DAASARE PURANDARADASA STUTIH. Show all posts

Thursday, 26 December 2019

ಗುರುಪುರಂದರ ದಾಸರೇ ನಿಮ್ಮ ಚರಣ ankita vijaya vittala GURU PURANDARA DAASARE PURANDARADASA STUTIH





ಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ ನಂಬಿದೆ ||ಪಲ್ಲವಿ||
ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೆ ||ಅನು ಪಲ್ಲವಿ||

ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ
ಇಂದಿರೇಶನ ಪಾದ ತೋರಿಸೊ ತಂದೆ ಮಾಡೆಲೊ ಸತ್ಕೃಪೆ ||೧||

ಮಾರಜನಕನ ಸನ್ನಿಧಾನದಿ ಸಾರಗಾನವ ಮಾಡುವ
ನಾರದಾದಿ ರೂಪದಿಂದಲಿ ತೋರದರ್ಶನ ತೋರಿದೆ ||೨||

ಪುರಂದರಾಲಯ ಘಟ್ಟದೊಳು ನೀ ನಿರುತ ಧನವನು ಗಳಿಸಲು
ಪರಮಪುರುಷನು ವಿಪ್ರನಂದದಿ ಕರವ ನೀಡಿ ಯಾಚಿಸೆ ||೩||

ಪರಮ ನಿರ್ಗುಣ ಮನವನರಿತು ಸರುವ ಸೂರೆಯಗೊಳಿಸಿದೆ
ಅರಿತು ಮನದಲಿ ಜರಿದು ಭವಗಳ ತರುಣಿ ಸಹ ಹೊರಹೊರಟನೆ ||೪||

ಅಜಭವಾದಿಗಳರಸನಾದ ವಿಜಯವಿಠಲನ ಧ್ಯಾನಿಪ
ನಿಜ ಸುಜ್ಞಾನವ ಕೊಡಿಸಬೇಕೆಂದು ಭಜಿಪೆನೋ ಕೇಳ್ ಗುರುವರ ||೫||
***


ರಾಗ - ಹಿಂದುಸ್ತಾನಿ   ತಾಳ - ಕಾಪಿ (raga, taala may differ in audio)

Guru purandaradasare nimma charanakamalava nambide||
Garuvarahitana madi ennanu poreva bharavu nimmade||1||

Ondu ariyada mandamati nanindu nimmanu vandipe|
Indireshana tandu torisi tande madelo satkrupe||2||


Purandaragadadolage nindu niruta dravyava galiside|
Paramapurushanu vipranandadi karava nidi yachise||3||

Parama nirgunavanavanaritu harige sureya niduta|
Aritu manadolu haridu bhavagala taruni sahita horatane||4||

Marajanakana sannidhanadi saraganava maduva|
Naradare I rupadindali charudarushana torida||5||

Ajabhavadigalarasanada vijayavithalana dyanipa|
Nija su~janava kodisabekendu bhajipeno kel guruvara||6||
***

pallavi

guru purandara dAsarE nimma caraNa kamalava nambidE

anupallavi

garvara hitana mADiyennanu poreva bhAravu nimmadE

caraNam 1

ondu ariyada manda mati nAnu indu nimmanu vandipE
indirEshana pAda tOrisO tande mADalu sat-krpE

caraNam 2

mAra janakana sannidhAnadi sAragAnava mADuva
nAradare I rUpadindali cAru darushana tOrida

caraNam 3

purandarAlaya ghaTTadoLu nI niruta dhanavA ghaLisalu
parama puruSanu vipranandadi karava nIDi yAcisE

caraNam 4

parama nirguNa vanavanaritu harige sUreya nIDuta
aritu manadOLu haridu bhavagaLa taruNi sahitA horaTaNe

caraNam 5

aja bhavAdigaLa arasanAda vijayaviTTalana dhyAnipa
nija su-jnAnava koDisa bEkendu bhajipenO kELu guruvarA
***


ಗುರು ಪುರಂದರ ದಾಸರೇ ನಿಮ್ಮ ಚರಣ ಸರಸಿಜ ನಂಬಿದೆ ಪ
ಗುರುವ ರಹಿತರ ಮಾಡಿ ನಮ್ಮನು ಪೊರೆವ ಭಾರವು ನಿಮ್ಮದೆ|| ಅ||

ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ
ಇಂದಿರೇಶನ ತಂದು ತೋರಿಸಿ ತಂದೆ ಮಾಡೆಲೊ ಸತ್ಕಪೆ||1||

ಪುರಂದರ ಗಡದೊಳಗೆ ನಿಂದು ನಿರುತ ದ್ರವ್ಯವ ಗಳಿಸಿದೆ
ಪರಮ ಪುರುಷನು ವಿಪ್ರನಂದದಿ ಕರವ ನೀಡಿ ಯಾಚಿಸೆ ||2||

ಪರಮ ನಿರ್ಗುಣ ಮನವರಿತು ಹರಿಗೆ ಸೂರೆಯ ನೀಡುತ
ಅರಿತು ಮನದೊಳು ಹರಿದು ಭವಗಳ  ತರುಣಿ ಸಹಿತಾ ಹೊರಟನೆ ||3||

ಮಾರಜನಕನ ಸನ್ನಿಧಾನದಿ ಸಾರಗಾನವ ಮಾಡುವ
ನಾರದರೆ ಈ ರೂಪದಿಂದಲಿ ಚಾರುದರುಶನ ತೋರಿದ ||4||

ಅಜಭವಾದಿಗಳರಸನಾದ ವಿಜಯವಿಠ್ಠಲನ ಧ್ಯಾನಿಪ
ನಿಜ ಸುe್ಞನವ ಕೊಡಿಸಬೇಕೆಂದು  ಭಜಿಪೆನೋ ಕೇಳ್ ಗುರುವರ ||5||
********

ಪುರಂದರ ದಾಸರೇ ನಿಮ್ಮ ಚರಣ ಸರಸಿಜ ನಂಬಿದೆ ಪ
ಗುರುವ ರಹಿತರ ಮಾಡಿ ನಮ್ಮನು ಪೊರೆವ ಭಾರವು ನಿಮ್ಮದೆ ಅ

ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ
ಇಂದಿರೇಶನ ತಂದು ತೋರಿಸಿ ತಂದೆ ಮಾಡೆಲೊ ಸತ್ಕøಪೆ 1

ಪುರಂದರ ಗಡದೊಳಗೆ ನಿಂದು ನಿರುತ ದ್ರವ್ಯವÀ ಗಳಿಸಿದೆ
ಕರವ ನೀಡಿ ಯಾಚಿಸೆ 2

ಪರಮ ನಿರ್ಗುಣ ಮನವರಿತು ಹರಿಗೆ ಸೂರೆಯ ನೀಡುತ
ತರುಣಿ ಸಹಿತಾ ಹೊರಟನೆ 3

ಮಾರಜನಕನ ಸನ್ನಿಧಾನದಿ ಸಾರಗಾನವ ಮಾಡುವ
ನಾರದರೆ ಈ ರೂಪದಿಂದಲಿ ಚಾರುದರುಶನ ತೋರಿದ 4

ಅಜಭವಾದಿಗಳರಸನಾದ ವಿಜಯವಿಠ್ಠಲನ ಧ್ಯಾನಿಪ
ಭಜಿಪೆನೋ ಕೇಳ್ ಗುರುವರ 5
************

ಗುರು ಪುರಂದರ ದಾಸರೇ 
ನಿಮ್ಮ ಚರಣ ಸರಸಿಜ ನಂಬಿದೆ ...ಪ

ಗುರುವ ರಹಿತರ ಮಾಡಿ 
ನಮ್ಮನು ಪೊರೆವ ಭಾರವು 
ನಿಮ್ಮದೆ.... ಅ.ಪ

ಒಂದು ಅರಿಯದ ಮಂದ
ಮತಿ ನಾನಿಂದು ನಿಮ್ಮನು 
ವಂದಿಪೆಇಂದಿರೇಶನ ತಂದು 
ತೋರಿಸಿ ತಂದೆ ಮಾಡೆಲೊ ಸತ್ಕೃಪೆ.... 1

ಪುರಂದರ ಗಡದೊಳಗೆ ನಿಂದು 
ನಿರುತ ದ್ರವ್ಯವ ಗಳಿಸಿದೆ
ಪರಮ ಪುರುಷನು ವಿಪ್ರನಂದದಿ
ಕರವ ನೀಡಿ ಯಾಚಿಸೆ..... 2

ಪರಮ ನಿರ್ಗುಣ ಮನವರಿತು 
ಹರಿಗೆ ಸೂರೆಯ ನೀಡುತ
ಅರಿತು ಮನದೊಳು ಹರಿದು 
ಭವಗಳ ತರುಣಿ ಸಹಿತಾ 
ಹೊರಟನೆ..... 3

ಮಾರಜನಕನ ಸನ್ನಿಧಾನದಿ ಸಾರಗಾನವ 
ಮಾಡುವ
ನಾರದರೆ ಈ ರೂಪ
ದಿಂದಲಿ ಚಾರುದರುಶನ ಹೇಳಿತೋರಿದ.... 4

ಅಜಭವಾದಿಗಳರಸನಾದ ವಿಜಯವಿಠ್ಠಲನ ಧ್ಯಾನಿಪ
ನಿಜ ಸುಜ್ಞಾನವ ಕೊಡಿಸಬೇಕೆಂದು

ಭಜಿಪೆನೋ ಕೇಳ್ ಗುರುವರ.... 5
***********