Showing posts with label ನಂಬಿದೆ ನಾ ನಿನ್ನ ಚರಣಕಮಲವನ್ನು venkata vittala vijaya dasa stutih. Show all posts
Showing posts with label ನಂಬಿದೆ ನಾ ನಿನ್ನ ಚರಣಕಮಲವನ್ನು venkata vittala vijaya dasa stutih. Show all posts

Friday, 27 December 2019

ನಂಬಿದೆ ನಾ ನಿನ್ನ ಚರಣಕಮಲವನ್ನು ankita venkata vittala vijaya dasa stutih

ನಂಬಿದೆ ನಾ ನಿನ್ನ ಚರಣಕಮಲವನ್ನು ವಿಜಯರಾಯ ||pa||

ಬೆಂಬಿಡದೆಲೆ ವಿಷಯ ಹಂಬಲ ಬಿಡಿಸಯ್ಯ ವಿಜಯರಾಯ ||a.pa||

ತಾಯಿ ಎಳೆಯ ಶಿಶುವನು ಬಿಟ್ಟಿರುವುದುಂಟೆ ವಿಜಯರಾಯಬಾಯ ಬಿಡುವೆ ನಾ ಭವದಲ್ಲಿ ಸಿಗಬಿದ್ದು ವಿಜಯರಾಯನೋಯಲಾರೆನೂ ಎನ್ನ ಕಾಯೊ ಕರುಣದಿಂದ ವಿಜಯರಾಯಕಾಯ ಮನವು ನಿನ್ನ ಚರಣಕ್ಕೊಪ್ಪಿಸಿದೆನೊ ವಿಜಯರಾಯ ||1||

ಎತ್ತಗಾಣದೆ ಕರ್ಮ ಕತ್ತಲೆಯೊಳು ಸುತ್ತಿ ವಿಜಯರಾಯ ತತ್ತಳಗೊಳುತಿಪ್ಪೆ ಎತ್ತಿರೊ ಎನ್ನ ವಿಜಯರಾಯಪೆತ್ತ ತಂದೆಗೆ ಮಗ ಭಾರವಾಗುವುದುಂಟೆ ವಿಜಯರಾಯವಿತ್ತ ಭಾಗ್ಯವನೊಲ್ಲೆ ಎಂದೆಂದಿಗೂ ನಾನು ವಿಜಯರಾಯ ||2||

ತುಂಬಿದ ಭಂಡಾರ ಸಂಪತ್ತು ಎನಗೆಂದು ವಿಜಯರಾಯಹಂಬಲಿಸುತ ಬಲು ಸಂಭ್ರಮದಿರುತಿಪ್ಪೆ ವಿಜಯರಾಯಸಂಬಳಕಾರ ಶಿಷ್ಯ ನಿನಗಲ್ಲ ಕೇಳಯ್ಯ ವಿಜಯರಾಯಬಿಂಬ ಶ್ರೀ ವೆಂಕಟ ವಿಠ್ಠಲನ ತೋರೊ ನೀ ವಿಜಯರಾಯ ||3||
*******