Showing posts with label ನಡಿರೆ ನಡಿರೆ ನೋಡುವ ಶ್ರೀಕೃಷ್ಣನ ನಡಿರೆ ನಡಿರೆ ನೋಡುವ mahipati NADIRE NADIRE NODUVA SRIKRISHNANA NADIRE NADIRE NODUVA. Show all posts
Showing posts with label ನಡಿರೆ ನಡಿರೆ ನೋಡುವ ಶ್ರೀಕೃಷ್ಣನ ನಡಿರೆ ನಡಿರೆ ನೋಡುವ mahipati NADIRE NADIRE NODUVA SRIKRISHNANA NADIRE NADIRE NODUVA. Show all posts

Saturday, 4 December 2021

ನಡಿರೆ ನಡಿರೆ ನೋಡುವ ಶ್ರೀಕೃಷ್ಣನ ನಡಿರೆ ನಡಿರೆ ನೋಡುವ ankita mahipati NADIRE NADIRE NODUVA SRIKRISHNANA NADIRE NADIRE NODUVA




ನಡಿರೆ ನಡಿರೆ ನೋಡುವ ಶ್ರೀಕೃಷ್ಣನ
ನಡಿರೆ ನಡಿರೆ ನೋಡುವ ||ಧ್ರುವ||

ನಡಿರೆ ನೋಡುವ ಬನ್ನಿ ತುಡುಗ ಶ್ರೀಕೃಷ್ಣನ
ಅಡಿಗಳಾಶ್ರಯ ಹಿಡುವ ಮಂಡಲದೊಳು ||೧||

ತುಡುಗತನದಿ ಬಂದು ಕದಿದ ಬೆಣ್ಣೆಯ ಮೆದ್ದು
ಒಡನೆ ಗೋಪೇರ ಕಾಡಿದ ನೋಡಮ್ಮ ||೨||

ಬಿಡದೆ ಕಾಳಿಂಗನ ಹೆಡೆಯ ಮೆಟ್ಟಿದ ನೋಡಿ
ತಡೆಯದೆ ಧುಮುಕಿದ ಮಡುವಿನೊಳು ||೩||

ಕ್ರೀಡಿಸಿ ಗೋಪೇರ ಉಡುಗೆ ಸೆಳೆದುಕೊಂಡು
ಒಡನೆ ಗಿಡವನೇರಿದ ನೋಡಮ್ಮ ||೪||

ಮಾಡದ ಮಾಡಿ ತಾ ಬಿಡದೆ ಬೇಡಿಸಿಕೊಂಡು
ಒಡನೆ ಉಡುಗೆ ನೀಡಿದ ನೋಡಮ್ಮ ||೫||

ಬಡವರಿಗಳವಲ್ಲ ಪೊಡವಿಯೊಳಗಿದು
ಆಡಿದಾನಂದದಾಟ ನೋಡಮ್ಮ ||೬||

ಹಿಡಿಯಹೋಗಲು ಮೂಢ ಮಹಿಪತಿಯ ನೋಡಿ
ಒಡಲ ಹೊಕ್ಕು ಕೂಡಿದ ಒಡೆಯನಮ್ಮ ||೭||
***

ಭೀಮಪಲಾಸ್ ರಾಗ ತೀನ್ ತಾಳ (raga tala may differ in audio)

ಕಾಖಂಡಕಿ ಶ್ರೀ ಮಹಿಪತಿರಾಯರು

ನಡಿರೆ ನಡಿರೆ ನೋಡುವ ಶ್ರೀ ಕೃಷ್ಣನ ನಡಿರೆ ನಡಿರೆ ನೋಡುವ ಪ  


ನಡಿರೆ ನೋಡುವ ಬನ್ನಿ ತುಡುಗ ಶ್ರೀ ಕೃಷ್ಣನ ಅಡಿಗಳಾಶ್ರೀಯ ಹಿಡುವ ಮಂಡಲದೊಳು1 

ತುಡಗತನದಿ ಬಂದು ಕದಿವ ಬೆಣ್ಣೆಯ ಮೆದ್ದು ಒಡನೆ ಗೋಪೆರ ಕಾಡಿದ ನೋಡಮ್ಮ2 

ಬಿಡದೆ ಕಾಳಿಂಗನ ಹೆಡೆಯ ಮೆಟ್ಟಿದ ನೋಡಿ ತಡಿಯದೆ ಧುಮುಕಿದ ಮಡುವಿನೊಳು 3 

ಕ್ರೀಡಿಸಿ ಗೋಪೆರ ಉಡಿಗಿ ಸೆಳೆದುಕೊಂಡು ಒಡನೆ ಗಿಡನೇರಿದ ನೋಡಮ್ಮ 4 

ಮಾಡದ ಮಾಡಿ ತಾ ಬಿಡದೆ ಬೇಡಿಸಿಕೊಂಡು ಒಡನೆ ಉಡಿಗಿ ನೀಡಿದ ನೋಡಮ್ಮ 5 

ಆಡಿದಾನಂದದಾಟ ನೋಡಮ್ಮ 6 

ಹಿಡಿಯ ಹೋಗಲು ಮೂಢ ಮಹಿಪತಿಯ ನೋಡಿ ಒಡಲ ಹೊಕ್ಕು ಕೂಡಿದ ಒಡಿಯನಮ್ಮ 7

***