Showing posts with label ನಮೋಸ್ತುತೇ ನಮೋಸ್ತುತೇ ರಮಾ ಮಾತೆ ಸಮಾನರಹಿತೇ tandevenkatesha vittala. Show all posts
Showing posts with label ನಮೋಸ್ತುತೇ ನಮೋಸ್ತುತೇ ರಮಾ ಮಾತೆ ಸಮಾನರಹಿತೇ tandevenkatesha vittala. Show all posts

Sunday, 1 August 2021

ನಮೋಸ್ತುತೇ ನಮೋಸ್ತುತೇ ರಮಾ ಮಾತೆ ಸಮಾನರಹಿತೇ ankita tandevenkatesha vittala

 ನಮೋಸ್ತುತೇ ನಮೋಸ್ತುತೇ ।

ರಮಾ ಮಾತೆ ಸಮಾನರಹಿತೇ ।। ಪಲ್ಲವಿ ।।

ರಮಾದೇವಿ ಸಮಾಸಮೇ ।
ಭ್ರಮಾ ರಹಿತ ಸದಾಗಮೇ ।
ಕ್ಷಮಾ ವರದ ಸುಪ್ರತಿಮೇ ।
ಸಮಾಹಿತಾಪ್ರತಿ ಮಹಿಮೇ ।। ಅ ಪ ।।

ಕ್ಷೀರವಾರಿಧಿ ಜಾತೇ ಚೇತೋಗತೇ ।
ಚಾರುದೇಷ್ಣ ಮಾತೇ ।
ಸಾರಸಸನಾದ್ಯಮರ ।
ವರ ವಿನುತೇ ಅಕ್ಷರೇ ಚಿತ್ಪ್ರಕೃತೇ ।।
ವಾರಿದ ಪತ್ರಾಭ್ರೂಪಸ್ಫುರಿತೇ ।
ಸಾರಸತ್ವಾದಿ ಪ್ರಥಿತ ಸುಚರಿತೇ ।
ಘೋರಭವಾಸುರ ಸಂಘ ವಿದಾರಿತೇ ।
ಶೌರಿ ವಕ್ಷಸ್ಥಲ ವಿಹರಣನಿರತೇ ।। ಚರಣ ।।

ಉಭಯ ಕೋಟಿಗತೇ ಶುಭ ಲಕ್ಷಣಯುತೇ ।
ಅಭಯ ವರದ ನೀರಜ ಹಸ್ತೇ ।
ವಿಭು ಸಹ ವ್ಯಾಪ್ತೆ । ಹೃ ।
ದಭ್ರವಸಿತೇ ಗುಣಲಬ್ಧ ಸೃಷ್ಟಿಕರ್ತೇ ।।
ಆಬ್ದಾಯನಾದಿ ಕಾಲಾಂತರಿತೇ ।
ಶಬ್ದ ಸ್ವರಾಂತರಾರ್ಥ ಪ್ರಗತೇ ।
ನಿರ್ಭರಿತಾನಂದಾತ್ಮಾ ವಿಕೃತೇ ।
ಗರ್ಭೀಕೃತ ಬ್ರಹ್ಮಾಂಡಾದ್ಯಮಿತೇ ।। ಚರಣ ।।  
        
ಇಂದೀವರ ವರ ಮಂದಿರ ದಯಿತೇ ।
ಚಂದ್ರಮ ಸಹ ಜಾತೇ ।
ವಂದಿತಾಖಿಳಾಮ್ನಾಯ ನಿಗದಿತೇ ।
ಬಂಧುರ ಗುಣ ಮಹಿತೇ ।।
ನಂದ ನಂದನಾನಂದಿತ ಯದುಪತೇ ।
ಬಂಧ ಮೋಕ್ಷದಾನಂದತೀರ್ಥ ಹಿತೇ ।
ವಂದಿತಾಖಿಳಸುರೇಹಿತ ಹಸಿತೇ ।
ತಂದೆ ವೇಂಕಟೇಶವಿಠ್ಠಲಾಹ್ಲಾದಿತೇ ।। ಚರಣ ।।   
***