Showing posts with label ನೆಚ್ಚದಿರು ಸಂಸಾರ ಕಾಡಗಿಚ್ಚಿನಂದದಿ ದಹಿಸುವದತಿ ಘೋರ shyamasundara. Show all posts
Showing posts with label ನೆಚ್ಚದಿರು ಸಂಸಾರ ಕಾಡಗಿಚ್ಚಿನಂದದಿ ದಹಿಸುವದತಿ ಘೋರ shyamasundara. Show all posts

Wednesday, 1 September 2021

ನೆಚ್ಚದಿರು ಸಂಸಾರ ಕಾಡಗಿಚ್ಚಿನಂದದಿ ದಹಿಸುವದತಿ ಘೋರ ankita shyamasundara

 ..

ನೆಚ್ಚದಿರು ಸಂಸಾರ ಕಾಡಗಿಚ್ಚಿನಂದದಿ

ದಹಿಸುವದತಿ ಘೋರ ಪ


ಕ್ಷುದ್ರ ಜನರ ಸಂಗತ್ಯಜಿಸೊ | ಸದಾ

ಮಧ್ವಸುಶಾಸ್ತ್ರ ಕೇಳಿ ನೀ ಗ್ರಹಿಸೊ

ಸದ್ಗುರುಗಳ ಪಾದಾಶ್ರೈಸೊ | ನೀನೆ

ಉದ್ಧಾರಕನೆಂದು ಹರಿಯನ್ನೆ ಬಯಸೊ 1


ನಾನೆಂಬೊ ಅಹಂಕಾರಸಲ್ಲ | ನಿನ್ನ

ಮಾನಿನಿ ಸುತರು ಸಂಗಡ ಬಾಹೋರಿಲ್ಲ

ಈ ನುಡಿ ದಿಟ ಸಟಿಯಲ್ಲ | ಹೀಗೆ |

ನೀನಾಚರಿಸಲು ಒಲಿವ ಶ್ರೀನಲ್ಲ2


ಆಶಾಕ್ರೋಧಂಗಳ ಕೀಳೊ | ಹರಿ |

ದಾಸರ ದಾಸರ ದಾಸನೆಂದ್ಹೇಳೊ ||

ದೋಷಕ್ಕೆ ಅಂಜಿ ನೀ ಬಾಳೊ | ಎಲ್ಲ |

ಈಶನಾಧೀಶವೆಂಬುದೆ ಮುಕ್ತಿ | ಕೇಳೋ 3


ಹರಿವಾಸರುಪವಾಸ ಮಾಡೊ | ಇರುಳು

ಹರುಷದಿಂದಲಿ ಜಾಗರ ಮರಿಬ್ಯಾಡೊ

ಮರುದಿನ ನಿದ್ರೆಯ ದೂಡೊ | ಇಂತು

ಪರಿಯಲ್ಲಿ ನಡೆದರೆ ನಿನಗಿಲ್ಲ | ಕೇಡು 4


ಇಂದ್ರಿಯಗಳ ನಿಗ್ರಹಿಸೊ | ಮನಿಗೆ |

ಬಂದ ಭೂಸುರರಿಗೆ ವಂದಿಸಿ | ಉಣಿಸೊ

ಕುಂದು ನಿಂದೆಗಳೆಲ್ಲ ಸಹಿಸೊ | ಶಾಮ

ಸುಂದರ ವಿಠಲನ್ನ ನೀ ಪೊಂದಿ ಸುಖಿಸೊ 5

***