Showing posts with label ಚತುರವದನಗೊಂದಿಸುವೆನು ಮದನನಯ್ಯನ ಜ್ಯೇಷ್ಠಕುವರ rajesha hayamukha. Show all posts
Showing posts with label ಚತುರವದನಗೊಂದಿಸುವೆನು ಮದನನಯ್ಯನ ಜ್ಯೇಷ್ಠಕುವರ rajesha hayamukha. Show all posts

Thursday, 5 August 2021

ಚತುರವದನಗೊಂದಿಸುವೆನು ಮದನನಯ್ಯನ ಜ್ಯೇಷ್ಠಕುವರ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt

ಬ್ರಹ್ಮನ ಸ್ತುತಿ


ಚತುರವದನಗೊಂದಿಸುವೆನು

ಮದನನಯ್ಯನ ಜ್ಯೇಷ್ಠಕುವರ

ಚತುರವದನಗೊಂದಿಸುವೆನು ಪ


ಜಗವ ಸೃಷ್ಟಿಪ ಗುರುವರನ ಮೂ-

ಜಗದೊಡೆಯನ ನಿತ್ಯ ನೋಡುತಿಹನ

ನಗವೈರಿಮುಖಸುರಪ್ರಿಯನ

ನಿಗಮೋಕ್ತ ಯಾಗ ಮಾಡುವನ 1


ಸುರರು ಅಸುರರೆಂಬ ಭೇದ

ವಿರದೆ ಸರ್ವರಿಗಿಷ್ಟವೀವನೆ

ಪುರಹರಾದ್ಯಖಿಲಾಮರರು ನಿನ್ನ

ಸ್ಮರಿಸುತಾಜ್ಞೆಯ ಧರಿಸುವರು 2


ಯಜ್ಞಕುಂಡದೊಳುದ್ಭವಿಸಿದ ಸ-

ರ್ವಜ್ಞ ರಾಜೇಶ ಹಯಮುಖ

ಸುಜ್ಞಾನ ವೇದಾರ್ಥಗಳನು ಬೋಧಿಸಿಷÀ್ಟ ಸಾ-

ಯುಜ್ಯವ ನಿನಗೆ ಕೊಟ್ಟಿಹನು 3

***