Showing posts with label ಯಾತಕೆ ಮರೆತೆನ್ನ ಯತಿಕುಲ ತಿಲಕನೆ shree krishna. Show all posts
Showing posts with label ಯಾತಕೆ ಮರೆತೆನ್ನ ಯತಿಕುಲ ತಿಲಕನೆ shree krishna. Show all posts

Thursday, 19 December 2019

ಯಾತಕೆ ಮರೆತೆನ್ನ ಯತಿಕುಲ ತಿಲಕನೆ ankita shree krishna

ಯಾತಕೆ ಮರೆತೆನ್ನ ಯತಿಕುಲ ತಿಲಕನೆ
ಪ್ರೀತಿಯ ಬಯಸುತ ಬಂದೆ || ಪ||

ವಾತಸುತಗತಿಪ್ರಿಯ ದೂತನೆ ನಾಥನೀನೆಂತೆಂದು ನಂಬಿದೆ
ಖ್ಯಾತಗುರು ಶ್ರೀ ರಾಘವೇಂದ್ರನೆ ||ಅ.ಪ||

ದೇಶದೇಶದಿ ಬರುವ ದಾಸಜನರÀಘ
ನಾಶಗೈಸಿ ಪೊರೆವೊ ದಾಶರಥಿ ಕಿಂಕರಾ
ಶೇಷಶಯನನ ದೋಷ e್ಞÁನ ವಿಶೇಷದಿಂದಲಿ
ನ್ಯಾಸಮಾಡಿದೆ ಭೂಸುರೋತ್ತಮ ||1||

ಛಲದಿ ಭಕ್ತಿಯ ಮಾಡಿ ಒಲಿಸಿ ಹರಿಯ ಪಾದ
ಲಲಿತಕೀರ್ತಿಲಿ ಮೆರೆದೆ ಭಳಿರೆ ಭಳಿರೆ ಗುರುವೇ
ಗೊಲ್ಲಕೃಷ್ಣನ ಚೆಲ್ವ ನಾಟ್ಯದಿ ನಿಲ್ಲಿಸಿದ ನಿನಗೆಲ್ಲಿ ಸರಿಯೈ
ನಲ್ಲ ಯತಿವರ ಕಾಲಿಗೆರಗುವೆ ಶೀಲಭಕುತಿಯ ಪಾಲಿಸೀಗಲೆ ||2||

ವ್ಯಾಸಮುನಿಯು ಎನಿಸಿ ಶ್ವಾಸಮತವ ಮೆರೆಸಿ
ದೋಷ ಹರಿಸಿ ಧೊರೆಗೆ ದಾಸ ದೀಕ್ಷೆಯ ತೋರ್ದೆ
ಈಶದಾಸರ ಭೇದ ವಾದವ ಆಶುಕವಿತದಿ ವಿಶದಪಡಿಸಿದೆ
ಶ್ರೀಶಶಯನನಾವೇಶ ಸಂಯುತ ಭೇಶಕಾಂತಿ ವಿಶಾಲಕರುಣಿಯೆ ||3||

ದಾತ ಈತನೆಂಬ ಖ್ಯಾತಿ ಬಿರುದು ನಿನಗೆ
ಪ್ರೀತಿಯಿಲ್ಲವೇ ಗುರುವೇ ಜೋತು ಬಂದೆ ಅಡಿಗೇ
ಬೋಧೆಯ ನೀತಿ ಪೇಳಿದೆ
ಏತಕೀತಡ ಮಾತಲಾಲಿಸು ದೂತನಿನ್ನವ ಪೂತಕಾಯನೆ||4||

ಪರಮ ಭಕ್ತರ ವೃಂದ ನಿರುತ ನಮಿಪ ಚೆಂದ
ಅರಿಯೆ ವರ್ಣನೆ ಎಂದ ಸುರಿಸು ಭಕ್ತಿಯ ಗಂಧ
ಸೂರಿ ಬೀರಿಕರುಣವ ಭಾರತೀಶನ
ಸಾರಶಾಸ್ತ್ರದಿ ತೋರು ತತ್ವಾರ್ಥ||5||

ಲೋಕ ಹರಕೆ ನೀಡಿ ಸಾಕಿ ಸಲಹೆ ಹೆಜ್ಜೆ
ನೂಕಿ ದುರಿತರಾಶಿ ಸಾಕುಹರಿಯ ತೋರಿ
ಶ್ರೀಕರಾರ್ಚಿತ ಪಾದಪಲ್ಲವ ಪಾಕನಾಶನ ಏಕ ವೀರನ
ನಾಕ ಋಷಿಗತಿಪ್ರಿಯ ಶಿಷ್ಯನೆ ||6||

ಪಾಹಿ e್ಞÁನದ ಖಣಿಯೆ ಪಾಹಿ ಭಕ್ತರ ನಿಧಿಯೆ
ಪಾಹಿ ಮತಿಮತಸ್ಥಂಭ ಪಾಹಿ ಶ್ರೀ ಹರಿಯ ದೂತ
ಪಾಹಿಸುಗುಣೋದಾರ ಮಹಿಮನೆ ಪಾಹಿನತಜನ ಭಾರವಹಿಪನೆ
ಪಾಹಿಜಯಮುನಿ ವಾಯುವಂತರ ಗೇಹ ಸಿರಿಕೃಷ್ಣವಿಠಲ ಭಜಕ ||7||
*******